HEALTH TIPS

No title

               ಜಿಎಚ್ಎಸ್ಎಸ್ ಪಡ್ರೆ ವಾಣೀನಗರ ಶಾಲೆಗೆ ಪ್ಲಸ್ ಟು ವಿಭಾಗದ ಪರೀಕ್ಷೆಯಲ್ಲಿ  ಶೇಕಡಾ 70.96 ಫಲಿತಾಂಶ
      ಪೆರ್ಲ: ಕೇರಳದ ಪ್ಲಸ್ ಟು ವಿಭಾಗದ ಪರೀಕ್ಷಾ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಜಿ.ಎಚ್.ಎಸ್.ಎಸ್ ಪಡ್ರೆ ವಾಣೀನಗರ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿಭಾಗದಲ್ಲಿ ಪರೀಕ್ಷೆ ಬರೆದ 62  ವಿದ್ಯಾಥರ್ಿಗಳಲ್ಲಿ 44 ಮಂದಿ ತೇರ್ಗಡೆ ಹೊಂದಿದ್ದು ಶೇಕಡಾ  70.96 ಫಲಿತಾಂಶ ಬಂದಿರುತ್ತದೆ.
   ವಾಣಿಜ್ಯ ವಿಭಾಗದಲ್ಲಿ  ಪರೀಕ್ಷೆ ಬರೆದ  35 ವಿದ್ಯಾಥರ್ಿಗಳಲ್ಲಿ 27 ಮಂದಿ ಉತ್ತೀರ್ಣರಾಗಿದ್ದು ಶೇಕಡಾ 77.14 ಪಲಿತಾಂಶ ಬಂದಿದ್ದು  ಪ್ರದೀಪ್ ಶಾಂತಿಯಡಿ ಶೇಕಡಾವಾರು 86 ಅಂಕಗಳೊಂದಿಗೆ ಕನ್ನಡ ಹಾಗೂ ಬಿಸಿನೆಸ್ ಸ್ಟಡೀಸ್ ವಿತ್ ಫಂಕ್ಷನಲ್ ಮೇನೇಜ್ ಮೆಂಟ್ (ವ್ಯಾವಹಾರಿಕ ಅಧ್ಯಯನ)  ವಿಷಯಗಳಲ್ಲಿ ಎ ಪ್ಲಸ್ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದು ಕಾಲೇಜ್ ನಲ್ಲಿ ಪ್ರಥಮ ಸ್ಥಾನ ಹಾಗೂ ಮನೋಜ್ ಕುಮಾರ್ ಪಿ ಹಾಗೂ ವಾಣಿ ಶ್ರೀ ಕೆ. ತಲಾ ಶೇಕಡಾವಾರು  76.91 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
    ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ 27 ವಿದ್ಯಾಥರ್ಿಗಳಲ್ಲಿ 17 ಮಂದಿ ಉತ್ತೀರ್ಣರಾಗಿದ್ದು ಶೇಕಡಾ 62.96 ಫಲಿತಾಂಶ ದಾಖಲಾಗಿದ್ದು, ರಮ್ಯ ಪಿ. ಶೇಕಡಾವಾರು 74.41 ಅಂಕಗಳೊಂದಿಗೆ ಪ್ರಥಮ ಹಾಗೂ  ಸಮ್ಶೀನಾ  ಶೇಕಡಾವಾರು 74.33 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
      ಕಾಲೇಜು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವ ಪ್ರದೀಪ್ ಶಾಂತಿಯಡಿಗೆ ಸುದರ್ಶನ ಅಭಿನಂದನೆ:
   ವಾಣಿಜ್ಯ ವಿಭಾಗದಲ್ಲಿ  ಪರೀಕ್ಷೆ ಬರೆದ ಪ್ರದೀಪ್ ಶಾಂತಿಯಡಿ ಶೇಕಡಾವಾರು 86 ಅಂಕಗಳೊಂದಿಗೆ ಕನ್ನಡ ಹಾಗೂ ಬಿಸಿನೆಸ್ ಸ್ಟಡೀಸ್ ವಿತ್ ಫಂಕ್ಷನಲ್ ಮೇನೇಜ್ ಮೆಂಟ್ (ವ್ಯಾವಹಾರಿಕ ಅಧ್ಯಯನ)  ವಿಷಯಗಳಲ್ಲಿ ಎ ಪ್ಲಸ್ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದು ಕಾಲೇಜ್ ಮಟ್ಟದಲ್ಲಿ  ಪ್ರಥಮ ಸ್ಥಾನ ಪಡೆದಿರುವ ಪ್ರದೀಪ್ ಶಾಂತಿಯಡಿ ಕಿನ್ನಿಂಗಾರು ಬಳಿಯ ಶಾಂತಿಯಡಿ ಸಮೀಪ ವಾಸವಾಗಿರುವ ಶ್ರೀಧರ ಮೂಲ್ಯ ವಾರಿಜ ದಂಪತಿಗಳ ಪುತ್ರ. ಸಹೋದರ ಪ್ರಜ್ವಲ್ ಅಗಲ್ಪಾಡಿ ಶಾಲೆಯ 8 ನೇ ತರಗತಿ ವಿದ್ಯಾಥರ್ಿ. ಸಾಮಾನ್ಯ ವರ್ಗದ ಕುಟುಂಬದಲ್ಲಿ ಜನಿಸಿದ ಪ್ರದೀಪ್ ಸಾಮಾಜಿಕ ಚಟುವಟಿಕೆಗಳಲ್ಲಿ ಆಸಕ್ತನಾಗಿದ್ದು  ಗ್ರಾಮೀಣ ಅಭಿವೃದ್ಧಿ ಸಮಿತಿ ಸುದರ್ಶನದ ಏತಡ್ಕ ಘಟಕದ ಸ್ಥಾಪಕ ಹಾಗೂ  ಸಂಚಾಲಕನಾಗಿರುವನು. ಪ್ಲಸ್ ಟು ವಿಭಾಗದ ಫಲಿತಾಂಶ ಹೊರಬರುವ ಕೇವಲ ನಾಲ್ಕು ದಿನ ಮೊದಲು ಬೈಲಮೂಲೆ ಪರಿಸರದ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ಹಲವು ಕುಂಟುಂಬಗಳಿಗೆ ನೀರಿನ  ವಿತರಣೆಗೆ ನೇತೃತ್ವ ವಹಿಸಿ ನಾಗರಿಕರ ಮೆಚ್ಚುಗೆಗೆ ಪಾತ್ರನಾಗಿದ್ದ.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries