HEALTH TIPS

No title

                  ಬನಾರಿ ಯಕ್ಷಗಾನ ಕಲಾಸಂಘದ 74ನೇ ವಾಷರ್ಿಕೋತ್ಸವ-ಪ್ರಶಸ್ತಿ ಪ್ರಧಾನ
    ಮುಳ್ಳೇರಿಯ: ಯಕ್ಷಗಾನ ಸಹಿತ ಸಾಂಸ್ಕೃತಿಕ ರಂಗದಲ್ಲಿ ದಿ.ಕೀರಿಕ್ಕಾಡು ವಿಷ್ಣು ಮಾಸ್ತರರ ಸಾಧನೆಗಳು ಚಿರಸ್ಥಾಯಿಯಾದುದು. ತನ್ನ ತನು-ಮನ-ಧನಗಳನ್ನು ಕಲಾಮಾತೆಯ ಸೇವೆಗೆ ಧಾರೆಯೆರೆದ ವಿಷ್ಣು ಮಾಸ್ತರ್ ರವರಂತಹ ಸಾಧಕ ಪುರುಷರು ವಿರಳಾತಿವಿರಳ ಎಂದು ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಸವಣೂರು ಅಭಿಪ್ರಾಯ ವ್ಯಕ್ತಪಡಿಸಿದರು.
   ದೇಲಂಪಾಡಿಯ ಬನಾರಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ 74ನೇ ವಾಷರ್ಿಕೋತ್ಸವವದ ಅಂಗವಾಗಿ ಶನಿವಾರ ಸಂಜೆ ಕೀರಿಕ್ಕಾಡು ಸ್ಮಾರಕ ಸಭಾ ಭವನದಲ್ಲಿ ನಡೆದ ಕೀರಿಕ್ಕಾಡು ಪ್ರಶಸ್ತಿ ಪ್ರಧಾನ, ಶೇಣಿ ಶತಮಾನ ಸಂಸ್ಮರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಕಲಾ ಸಂಘವೊಂದು 74ನೇ ವಾಷರ್ಿಕೋತ್ಸವವನ್ನು ಆಚರಿಸುತ್ತಿರುವುದು ದಾಖಲೆಯಾಗಿದ್ದು, ಇತರೆಡೆಗಳಿಗೆ ಮಾದರಿಯಾಗಿದೆ. ಕೀರಿಕ್ಕಾಡು ಮಾಸ್ತರರ ಬದುಕು-ಬರಹಗಳ ಸಮಗ್ರ ಅಧ್ಯಯನ ಮತ್ತು ಪ್ರಚಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
   ಡಾ.ರಮಾನಂದ ಬನಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಹಿರಿಯ ಸಾಹಿತಿ ಎಂ.ವಿ. ಭಟ್ ಬೆಂಗಳೂರು ರವರಿಗೆ ಕೀರಿಕ್ಕಾಡು ಪ್ರಶಸ್ತಿ ಪ್ರಧಾನಗೈದು ಗೌರವಿಸಲಾಯಿತು. ಪ್ರೊ.ಹರಿನಾರಾಯಣ ಮಾಡಾವು ಅಭಿನಂದನಾ ಭಾಷಣ ಮಾಡಿದರು. ಸುಳ್ಯ ಪ್ರತಿಭಾ ವಿದ್ಯಾಲಯದ ಪ್ರಾಂಶುಪಾಲ ವೆಂಕಟರಮಣ ಭಟ್ ಶೇಣಿ ಶತಮಾನ ಸ್ಮರಣೆ ನಡೆಸಿದರು. ಎ.ನಾರಾಯಣ ನಾಕ್ ಊಜಂಪಾಡಿ ಶುಭಾಶಂಸನೆಗೈದರು.ವನಮಾಲಾ ಕೇಶವ ಭಟ್, ವಿಶ್ವವಿನೋದ ಬನಾರಿ, ನಿವೃತ್ತ ನ್ಯಾಯಧೀಶ ಮನಮೋಹನ ಬನಾರಿ, ಚಂದ್ರಶೇಖರ ಏತಡ್ಕ ಮೊದಲಾದವರು ಉಪಸ್ಥಿತರಿದ್ದರು.
  ಡಾ.ರಮಾನಂದ ಬನಾರಿ ಸ್ವಾಗತಿಸಿ, ಬೆಳ್ಳಿಪ್ಪಾಡಿ ಸದಾಶಿವ ರೈ ವಮದಿಸಿದರು. ನಾರಾಯಣ ದೇಲಂಪಾಡಿ ಕಾರ್ಯಕ್ರಮ ನಿರೂಪಿಸಿದರು. ಭುವನ ಸಿಂಚನ ಪ್ರಾರ್ಥನಾಗೀತೆ ಹಾಡಿದರು.
  ಬಳಿಕ ಭೀಮ-ದ್ರೌಪದಿ ಯಕ್ಷಗಾನ ತಾಳಮದ್ದಳೆ ನಡೆಯಿತು. 7.30 ರಿಂದ ಸರೋಜಿನಿ ಬನಾರಿಯವರ ಶಿಷ್ಯವೃಂದದವರಿಂದ ಕಾಳಿಂಗ ಮರ್ಧನ ಪ್ರಸಂಗದ ಯಕ್ಷಗಾನ ಬಯಲಾಟ, 8.15 ರಿಂದ ಅಗ್ರಮಾನ್ಯ ಕಲಾವಿದರ ಕೂಡುವಿಕೆಯಿಂದ ಮಾರಣಾದ್ವರ-ಅಗ್ರಪೂಜೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
  ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10ಕ್ಕೆ ಶ್ರೀಮಹಾಗಣಪತಿ ಹವನ, 11ಕ್ಕೆ ಶ್ರೀಗೋಪಾಲಕೃಷ್ಣ ದೇವರ ಪೂಜೆ, ಅಪರಾಹ್ನ 2 ರಿಂದ "ಸಮರ ಸನ್ನಾಹ" ಯಕ್ಷಗಾನ ತಾಳಮದ್ದಳೆ, 3.30 ರಿಂದ ಭಕ್ತಿಗೀತೆ, ಸಮೂಹ ನೃತ್ಯ ಕಾರ್ಯಕ್ರಮಗಳು ನಡೆಯಿತು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries