HEALTH TIPS

No title

               ಪಳ್ಳತ್ತೂರು-ಅಡೂರು ರಸ್ತೆ ಕಾಮಗಾರಿ ಪ್ರಗತಿಯಲ್ಲಿ
     ಮುಳ್ಳೇರಿಯ: ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ನಿಂದ ಲೋಕೋಪಯೋಗಿ ಇಲಾಖೆಯಿಂದ ಪಳ್ಳತ್ತೂರು ಸೇತುವೆ ನಿಮರ್ಾಣದ ಜೊತೆಗೆ  ಪಳ್ಳತ್ತೂರು-ಅಡೂರು ರಸ್ತೆಯ ಅಭಿವೃದ್ಧಿ ಕಾಮಗಾರಿ ಕೂಡಾ 7.58 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿದೆ.
    ಮುಂದಿನ ವರ್ಷ ಪೂತರ್ಿ:
   ಪ್ರಸ್ತುತ ಈ ರಸ್ತೆಯ ಕಾಮಗಾರಿಯನ್ನು ಆರಂಭಿಸಲಾಗಿದೆ. ಕೊಟ್ಯಾಡಿಯಿಂದ ಅಡೂರು ತನಕ ರಸ್ತೆಯನ್ನು ನವೀಕರಿಸುವ ಕಾಮಗಾರಿಯ ಅಂಗವಾಗಿ ಕಾಂಕ್ರೀಟ್ ಮಿಶ್ರಿತ ಬೋರ್ಡರ್ಸ್ ಹಾಕಲಾಗುತ್ತಿದೆ. ಈ ನಡುವೆ ಸಾಕಷ್ಟು ವಾಹನಗಳು ಓಡಾಡುವ ಕಾರಣ ಬಹುತೇಕ ಈ ರಸ್ತೆಯನ್ನು ಈ ವರ್ಷವೇ ಟಾರಿಂಗ್ಗೊಳಿಸಲು ಯೋಜನೆಯಿದೆ. ಏನಿದ್ದರೂ ಮುಂದಿನ ವರ್ಷ ಕಾಮಗಾರಿ ಸಂಪೂರ್ಣಗೊಳ್ಳಲಿದೆ.
   ಪಳ್ಳತ್ತೂರು-ಕೊಟ್ಯಾಡಿ-ಅಡೂರು ಮೂರು ಕಿ.ಮೀ. ರಸ್ತೆಯು ಸಂಪೂರ್ಣ ಹದಗೆಟ್ಟು ವಾಹನ ಸಂಚಾರ ಹಲವು ವರ್ಷಗಳಿಂದ ದುಸ್ತರವಾಗಿತ್ತು. ಕೇರಳ ಮತ್ತು ಕನರ್ಾಟಕವನ್ನು ಪಳ್ಳತ್ತೂರು ಮೂಲಕ ಸಂಪರ್ಕ ಕಲ್ಪಿಸುವ ಮತ್ತು ಕಾಸರಗೋಡು-ಅಡೂರು ಮಧ್ಯೆ ಸಂಚರಿಸುವ  ಪ್ರಧಾನ ರಸ್ತೆ ಇದಾಗಿದೆ. ಲೋಕೋಪಯೋಗಿ ಇಲಾಖೆಗೆ ಸೇರಿದ ಈ ರಸ್ತೆಯ ದುರಸ್ತಿ ಕಾಮಗಾರಿ ಮರೀಚಿಕೆಯಾಗಿತ್ತು. ಹಿಂದಿನ ವರ್ಷಗಳಲ್ಲಿ ಹೊಂಡ ಮುಚ್ಚುವ ಕಾಮಗಾರಿ ನಡೆದರೂ ಸಮಸ್ಯೆಗೆ ಪರಿಹಾರ ಲಭಿಸಿರಲಿಲ್ಲ.  ಹಲವು ವರ್ಷಗಳ ಕೂಗಿನ ಫಲವಾಗಿ ತೀರಾ ಹದಗೆಟ್ಟ ಈ ರಸ್ತೆಗೆ ಸಮಗ್ರ ಅಭಿವೃದ್ಧಿಯ ಮೂಲಕ ಶಾಪ ವಿಮೋಚನೆಯಾಗಲಿದೆ.
   ಪಳ್ಳತ್ತೂರು ಸೇತುವೆ ನಿಮರ್ಾಣಗೊಂಡು, ಅಡೂರಿನ ತನಕ ರಸ್ತೆಯೂ ನವೀಕರಣಗೊಂಡರೆ ಪುತ್ತೂರು ಪ್ರಯಾಣ ಮತ್ತಷ್ಟು ಸುಲಭವಾಗಲಿದೆ.  ನೂರಾರು ಜನರಿಗೆ ಇದರ ಪ್ರಯೋಜನ ಲಭಿಸಲಿದೆ. ಈ ರಸ್ತೆಯ ಮೂಲಕ ಕೊಟ್ಯಾಡಿ, ಅಡೂರು ಪ್ರದೇಶಗಳಿಗೆ ಖಾಸಗಿ, ಕನರ್ಾಟಕ ಸರಕಾರಿ ಬಸ್ಗಳು, ಇತರ ವಾಹನಗಳು ನಿತ್ಯವೂ ಓಡಾಟ ನಡೆಸುತ್ತಿವೆ. ಆದರೆ ಸೇತುವೆ ದುರವಸ್ಥೆ ಮತ್ತು ರಸ್ತೆಯ ದುರವಸ್ಥೆ ಸಂಚಾರವನ್ನು ಮೊಟಕುಗೊಳಿಸುತ್ತಿತ್ತು. ಇದರಿಂದಾಗಿ ನಿತ್ಯವೂ ಈ ರಸ್ತೆಯನ್ನು ಆಶ್ರಯಿಸಿರುವ ವಿದ್ಯಾಥರ್ಿಗಳು, ಕಾಮರ್ಿಕರು ಮೊದಲಾದವರು ತೊಂದರೆ ಅನುಭವಿಸುತ್ತಿದ್ದರು. ಕನರ್ಾಟಕಕ್ಕೆ ಸೇರಿದ ಈಶ್ವರಮಂಗಲ, ಪುತ್ತೂರು ಮತ್ತು ದೇಲಂಪಾಡಿ ಪ್ರಯಾಣಕ್ಕೆ ಪಳ್ಳತ್ತೂರು ಮೂಲಕ ಸಾಗಬೇಕು. ಕಾಸರಗೋಡು ಪ್ರದೇಶಗಳಿಗೆ ಸಾಗುವ ಸಾಕಷ್ಟು ಖಾಸಗಿ ಬಸ್ಗಳು, ಇತರ ವಾಹನಗಳಿಗೂ ಈ ರಸ್ತೆಯೇ ರಹದಾರಿ. ಕನರ್ಾಟಕಕ್ಕೆ ಸೇರಿದ ಪಳ್ಳತ್ತೂರು-ಪುತ್ತೂರು ರಸ್ತೆ ಭಾಗವನ್ನು ಕನರ್ಾಟಕ ಸರಕಾರ ಮೂರು ವರ್ಷಗಳ ಹಿಂದೇಯೇ ಮೆಕ್ಡಾಂ ಮಾದರಿಯ ಟಾರಿಂಗ್ ನಡೆಸಿ ಸುಸಜ್ಜಿತಗೊಳಿಸಿದೆ. ಆದರೆ ಕೇರಳಕ್ಕೆ ಸೇರಿದ ರಸ್ತೆಯ ಭಾಗ ಈ ತನಕ ಶೋಚನೀಯವಾಗಿಯೇ ಉಳಿದಿತ್ತು. ಈ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಇನ್ನು ಮುಂದಿನ ದಿನಗಳಲ್ಲಿ ಸಾಧ್ಯವಾಗಲಿದೆ.
    ಸುಪ್ರಸಿದ್ಧ ಅಡೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರಕ್ಕೆ ದಿನನಿತ್ಯ ಸಾಕಷ್ಟು ಮಂದಿ ಭಕ್ತರು ವಿವಿಧ ಪ್ರದೇಶಗಳಿಂದ ಈ ರಸ್ತೆಯ ಮೂಲಕ ಆಗಮಿಸುತ್ತಿದ್ದಾರೆ. ಕೃಷಿಕರೂ, ಉನ್ನತ ಶಿಕ್ಷಣಕ್ಕಾಗಿ ತೆರಳುವ ವಿದ್ಯಾಥರ್ಿಗಳ ಪಾಲಿಗೆ, ಪ್ರಧಾನವಾಗಿ ಕನರ್ಾಟಕಕ್ಕೆ ಸಾಗುವ ಮಂದಿ ಈ ರಸ್ತೆಯನ್ನೇ ಅವಲಂಬಿಸಬೇಕು. ಕಾಸರಗೋಡು-ಸುಳ್ಯ ರಸ್ತೆಯನ್ನು ಪಳ್ಳತ್ತೂರು-ಅಡೂರು ರಸ್ತೆಯು ಸಂಪಕರ್ಿಸುವ ಕಾರಣ ನಿತ್ಯವೂ ಪ್ರಯಾಣ ಕೈಗೊಳ್ಳುವ ನೂರಾರು ಮಂದಿಗೆ ತುಂಬಾ ಉಪಕಾರವಾಗಲಿದೆ.
     ಸೇತುವೆ ನಿಮರ್ಾಣವೂ ಪ್ರಗತಿಯಲ್ಲಿ:
   ದೇಲಂಪಾಡಿ ಗ್ರಾಮ ಪಂಚಾಯತಿಗೆ ಸೇರಿರುವ ಪಳ್ಳತ್ತೂರು ಸೇತುವೆಯ ಮೂಲಕ ಸಂಚಾರ ದುಸ್ತರವೂ, ಪ್ರಾಣಾಪಾಯಕ್ಕೆ ಸಾಕ್ಷಿಯಾಗಬೇಕಾಗುತ್ತಿದ್ದರೂ ನೂತನ ನಿಮರ್ಾಣ ಹಲವು ವರ್ಷಗಳಿಂದ ಮರೀಚಿಕೆಯಾಗಿತ್ತು. ಇಬ್ಬದಿಯಲ್ಲಿ ಯಾವುದೇ ರಕ್ಷಣೆ ಇಲ್ಲದ ಸೇತುವೆ ಮೂಲಕ ಸಂಚಾರ ನಡೆಸಲಾಗುತ್ತಿದೆ.  ಜೋರಾಗಿ ಮಳೆ ಸುರಿದರೆ ಇದರ ಮೇಲೆ ನೀರು ಹರಿದು ಸಂಚಾರ ಮೊಟಕುಗೊಳ್ಳುತ್ತದೆ. ಪ್ರಯತ್ನ ಪೂರ್ವಕವಾಗಿ ದಾಟುವ ಪ್ರಯತ್ನ ಮಾಡಿದರೆ ಅಪಾಯ ಕಟ್ಟಿಟ್ಟಬುತ್ತಿ. ಇಂತಹಾ ಪ್ರಯತ್ನ ಜೀವಹಾನಿಗೂ ಕಾರಣವಾದುದು ನಡುಕ ಹುಟ್ಟಿಸುವ ವಿಚಾರ. ಇದೆಲ್ಲಕ್ಕೂ ಎರಡು ವರ್ಷಗಳಲ್ಲಿ ಪರಿಹಾರವಾಗಲಿದೆ. ಸೇತುವೆ ನಿಮರ್ಾಣದ ಪ್ರಥಮ ಹಂತದ ಕೆಲಸಗಳು ನಡೆಯುತ್ತಿರುವ ಕಾರಣ ಸಮಸ್ಯೆಗಳಿಂದ ಮುಕ್ತಿ ಲಭಿಸಲಿದೆ.
   ಕಾಮಗಾರಿಯ ಪರಿಶೀಲನೆ:
  ರಸ್ತೆ ಕಾಮಗಾರಿಯ ಪ್ರಗತಿ ಮತ್ತು ಗುಣಮಟ್ಟದ ಬಗ್ಗೆ ದೇಲಂಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುಸ್ತಫಾ ಹಾಜಿ ಅವರ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕಾರಡ್ಕ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಸಿ.ಕೆ.ಕುಮಾರನ್, ಗ್ರಾಮ ಪಂಚಾಯಿತಿ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.
   


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries