HEALTH TIPS

No title

           ಕನ್ನಡ ಕಂಪನ್ನು ಉಳಿಸಲು ಪ್ರತಿಯೊಬ್ಬ ಕಟಿಬದ್ಧನಾಗಬೇಕು : ವೆಂಕಟಕೃಷ್ಣ ಮಧೂರು
    ಕಾಸರಗೋಡು: ಗಂಡುಮೆಟ್ಟಿನ ಕಲೆಯನ್ನು ನೀಡಿದ ಯಕ್ಷಗಾನದ ತವರೂರಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿಗೆ ಧಕ್ಕೆ ಉಂಟಾಗುತ್ತಿದೆ. ಇಲ್ಲಿ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬ ಕನ್ನಡಿಗನೂ ಕಟಿಬದ್ಧರಾಗಬೇಕು. ಈ ಮೂಲಕ ಕಾಸರಗೋಡಿನಲ್ಲಿ ಕನ್ನಡದ ಕಂಪನ್ನು ಜೀವಂತ ಉಳಿಸಿಕೊಳ್ಳಲು ಸಾಧ್ಯ ಎಂದು ಹಿರಿಯ ಯಕ್ಷಗಾನ ಕಲಾವಿದ ವೆಂಕಟಕೃಷ್ಣ ಮಧೂರು ಅವರು ಹೇಳಿದರು.
    ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ 11 ನೇ ತಿಂಗಳ ಹಬ್ಬ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
   ಮಾತಿನ ಪ್ರಭಾವದಿಂದ ಯಕ್ಷಗಾನ ಅರ್ಥಗಾರಿಕೆ ಉಳಿದುಕೊಂಡಿದೆ. ದಿನದಿನವೂ ಅರ್ಥಗಾರಿಕೆಯಲ್ಲಿ ಹೊಸತನವನ್ನು ಕಾಣಲು ಸಾಧ್ಯವಾಗುತ್ತಿರುವುದರಿಂದ ತಾಳಮದ್ದಳೆ ಇಂದೂ ಜನಪ್ರಿಯವಾಗಿದೆ. ಯಕ್ಷಗಾನ ಹಾಡು ಒಬ್ಬೊಬ್ಬನ ಕೈಗೆ ಹೋದಾಗ ಅವನದೇ ಆದ ಶೈಲಿಯಲ್ಲಿ, ಚಿಂತನೆಯಲ್ಲಿ ಪಾತ್ರ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟ ಅವರು ಯಕ್ಷಗಾನ ತಾಳಮದ್ದಳೆಯಿಂದಾಗಿ ಕಾಸರಗೋಡಿನಲ್ಲಿ ಕನ್ನಡ ಭಾಷೆ ಜೀವಂತವಾಗಿರಲು ಸಾಧ್ಯವಾಗಿದೆ ಎಂದರು.
   ಕಡ್ಡಾಯ ಮಲಯಾಳ ವಿರುದ್ಧ ಸೆಟೆದು ನಿಲ್ಲಬೇಕು : ನಿರಂತರವಾಗಿ ಕನ್ನಡಿಗರ ಮೇಲೆ ಮಲಯಾಳ ಹೇರುವ ಪ್ರಕ್ರಿಯೆ ನಡೆಸುತ್ತಿರುವ ಕೇರಳ ಸರಕಾರ ಇದೀಗ ಮಲಯಾಳ ಕಲಿಕೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಮಲಯಾಳ ಕಡ್ಡಾಯ ಹೇರಿಕೆಯ ವಿರುದ್ಧ ಕನ್ನಡಿಗರು ಸೆಟೆದು ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ಡಾ.ಬೇ.ಸೀ.ಗೋಪಾಲಕೃಷ್ಣ ಅವರು ಹೇಳಿದರು.
   `ವಿದ್ಯಾಥರ್ಿಗಳು ಶಾಲಾ ಆರಂಭದ ತಯಾರಿ' ಎಂಬ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದ ಅವರು ಇಂದು ಕಾಲ ಬದಲಾಗಿದೆ. ಇಂದು ವಿದ್ಯಾಥರ್ಿಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಅಸಾ`್ಯ. ಮೊಬೈಲ್ ಮೊದಲಾದವುಗಳಿಂದಾಗಿ ವಿದ್ಯಾಥರ್ಿ ಇಂದು ದಾರಿ ತಪ್ಪುತ್ತಿದ್ದು, ಈ ಬಗ್ಗೆ ಹೆತ್ತವರು ಹೆಚ್ಚಿನ ಗಮನ ಹರಿಸಬೇಕಾಗಿದೆ. ಶಾಲೆಗೆ ಹೋಗುವ ಮುನ್ನ ವಿದ್ಯಾಥರ್ಿಗಳು ಮಾನಸಿಕ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದರು.
   ಕಾರ್ಯಕ್ರಮದಲ್ಲಿ ಮೀಯಪದವು ವಿದ್ಯಾವರ್ಧಕ ಎ.ಯು.ಪಿ. ಶಾಲಾ ಅಧ್ಯಾಪಕ ನಾರಾಯಣ ನಾವಡ ಅವರು ಉಪಸ್ಥಿತರಿದ್ದರು. ಜಗದೀಶ್ ಕೂಡ್ಲು ಸ್ವಾಗತಿಸಿದರು. ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದಿವಾಕರ ಅಶೋಕನಗರ ಪ್ರಾರ್ಥನೆ ಹಾಡಿದರು.
ಸಭಾ ಕಾರ್ಯಕ್ರಮದ ಬಳಿಕ ಮೀಯಪದವಿನ ವಿದ್ಯಾವರ್ಧಕ ಬಾಲಿಕೆಯರ ಯಕ್ಷಗಾನ ಬಳಗದಿಂದ `ಶ್ರೀ ರಾಮದರ್ಶನ' ಯಕ್ಷಗಾನ ತಾಳಮದ್ದಳೆ ಜರಗಿತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries