HEALTH TIPS

No title

                ವಸಂತ ವೇದಪಾಠ ಸಮಾರೋಪ
ಬದಿಯಡ್ಕ : ವ್ಯಕ್ತಿ ತನ್ನ ಜೀವನದಲ್ಲಿ ಮಾಡಿದ ತಪಾನುಷ್ಠಾನುಗಳ ಫಲ ಜನ್ಮ ಜನ್ಮಾಂತರಗಳ ತನಕ ಆತನನ್ನು ಹಿಂಬಾಲಿಸಿಕೊಂಡು ಬರುತ್ತದೆ. ಸತ್ಯ, ನಿಷ್ಠೆಯಿಂದ ದೇವರ ಧ್ಯಾನವನ್ನು ಮಾಡಿದರೆ ಸತ್ಫಲ ಲಭಿಸುತ್ತದೆ ಎಂದು ವೇದಮೂತರ್ಿ ಪಳ್ಳತ್ತಡ್ಕ ಪರಮೇಶ್ವರ ಭಟ್ ನುಡಿದರು.
ಅವರು ಶುಕ್ರವಾರ ಕಾಸರಗೋಡು ಮತ್ತು ಹೊಸದುರ್ಗ ಹೈವ ಬ್ರಾಹ್ಮಣ ಸಭಾದ ವತಿಯಿಂದ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಅನೇಕ ವರ್ಷಗಳಿಂದ ನಡೆದುಬರುತ್ತಿರುವ ವಸಂತ ವೇದಪಾಠ ಶಾಲೆಯ ಈ ವರ್ಷದ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
   ಅನುಷ್ಠಾನಗಳು ಉಪದೇಶದಿಂದ ಬರಬೇಕು. ವಿದ್ಯೆಯನ್ನು ಕಲಿಯುವುದರಿಂದ ಜೀವನದಲ್ಲಿ ಉನ್ನತಿಯನ್ನು ಹೊಂದಲು ಸಾಧ್ಯ ಎಂದರು.
ಕಾಸರಗೋಡು ಮತ್ತು ಹೊಸದುರ್ಗ ಹೈವ ಬ್ರಾಹ್ಮಣ ಸಭಾದ ಅಧ್ಯಕ್ಷ ಶಂಕರನಾರಾಯಣ ಭಟ್ ಕುಳಮರ್ವ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಕೋಶಾಧಿಕಾರಿ ವೈ.ಕೆ. ಗೋವಿಂದ ಭಟ್ ಏತಡ್ಕ ಉಪಸ್ಥಿತರಿದ್ದರು.  ಎರಡು ತಿಂಗಳ ವೇದಶಿಬಿರದಲ್ಲಿ ಭಾಗವಹಿಸಿದ ವಿದ್ಯಾಥರ್ಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು. ವೇದ ಶಿಬಿರದಲ್ಲಿ ಅಧ್ಯಾಪಕರಾದ ಮಹಾಗಣಪತಿ ಭಟ್ ಅಳಕ್ಕೆ ಹಾಗೂ ಮಧುಶಂಕರ ಭಟ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ವೇದಮೂತರ್ಿ ಶಿವರಾಮ ಭಟ್ ಪೆರಡಾಲ ಸ್ವಾಗತಿಸಿ, ಕಾರ್ಯದಶರ್ಿ ಶ್ಯಾಮಪ್ರಸಾದ ಕಬೆಕ್ಕೋಡು ವಂದಿಸಿದರು. ವಿದ್ಯಾಥರ್ಿಗಳು ಪ್ರಾರ್ಥನೆಯನ್ನು ನಡೆಸಿಕೊಟ್ಟರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries