ಜಯಾನಂದಕುಮಾರ್ರಿಂದ ಹರಿಕಥಾ ಅಭಿಯಾನ-ಸಭೆ
ಉಪ್ಪಳ: ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ರವರ ಷಷ್ಠ್ಯಬ್ದದ ನಿಮಿತ್ತ ದೇವಸ್ಥಾನ, ಮಠ, ಮಂದಿರದಲ್ಲಿ ಹರಿಕಥಾ ಅಭಿಯಾನ ನಡೆಸಲು ಉದ್ದೇಶಿಸಲಾಗಿದೆ.
ಈ ಸಂಬಂಧ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ಇತ್ತೀಚೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಶೀರ್ವದಿಸಿದರು. 60 ವರ್ಷದ ತುಂಬಿದ ಹಿನ್ನೆಲೆಯಲ್ಲಿ 60 ಕಡೆಗಳಲ್ಲಿ ಹರಿಕಥಾ ಅಭಿಯಾನ ನಡೆಸಲು ತೀಮರ್ಾನಿಸಲಾಗಿದೆ. ಸಭೆಯಲ್ಲಿ ಡಾ.ಶ್ರೀಧರ ಭಟ್ ಅವರು ಅಧ್ಯಕ್ಷತೆ ವಹಿಸಿದರು. ಹರಿಕಥಾ ಪರಿಷತ್ ಅಧ್ಯಕ್ಷ ದೇವಕೀತನಯ ಮಹಾಬಲ ಶೆಟ್ಟಿ ಕೂಡ್ಳು, ಹಿರಿಯ ಪತ್ರಕರ್ತ, ಕವಿ ಮಲಾರ್ ಜಯರಾಮ ರೈ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿವಿಧ ಭಜನಾ ಸಂಘಗಳ ಪದಾಧಿಕಾರಿಗಳು, ಮಠ ಮಂದಿರದ ಪದಾಧಿಕಾರಿಗಳು ಭಾಗವಹಿಸಿದ್ದರು.
ಪುಷ್ಪರಾಜ್ ಐಲ ಸ್ವಾಗತಿಸಿ, ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಸಮಿತಿಯೊಂದನ್ನು ರಚಿಸಲಾಯಿತು.