ಮೇ.10; ರೋಟರಿ ಕ್ಲಬ್ ವತಿಯಿಂದ ಸಾಮೂಹಿಕ ವಿವಾಹ
ಮುಳ್ಳೇರಿಯ: ಇಲ್ಲಿನ ರೋಟರಿ ಕ್ಲಬ್ ಸಂಕಷ್ಟದಲ್ಲಿರುವ ಐದು ಜೋಡಿ ವಧೂ-ವರರಿಗೆ ಸಾಮೂಹಿಕ ವಿವಾಹದ ಮೂಲಕ ಮಾಂಗಲ್ಯ ಭಾಗ್ಯವನ್ನು ಒದಗಿಸುತ್ತಿದೆ.
ಮೇ 10ರಂದು ಕರ್ಮಂತೋಡಿಯಲ್ಲಿ ನಡೆಯುವ ವಿವಾಹದ ಸಂಪೂರ್ಣ ಖರ್ಚನ್ನು ರೋಟರಿ ಕ್ಲಬ್ ವಹಿಸುತ್ತಿದೆ. ವಧುವಿಗೆ ಚಿನ್ನದ ಸರ, ಉಂಗುರ, ಬಟ್ಟೆಬರೆ, ವರನಿಗೆ ಚಿನ್ನದ ಉಂಗುರ, ಬಟ್ಟೆಬರೆಯನ್ನು ನೀಡಲಾಗುವುದು. ಕುಟುಂಬ ಸದಸ್ಯರು ಒಳಗೊಂಡು 150 ಮಂದಿಗೆ ಭೋಜನ ವ್ಯವಸ್ಥೆಯನ್ನು ರೋಟರಿ ಕ್ಲಬ್ ವತಿಯಿಂದ ಏರ್ಪಡಿಸಲಾಗುವುದು.
ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಓಮನಾ ರಾಮಚಂದ್ರನ್ ದೀಪ ಬೆಳಗಿಸುವರು. ಕಾರಡ್ಕ ಪಂಚಾಯಿತಿ ಅಧ್ಯಕ್ಷೆ ಸ್ವಪ್ನ.ಜಿ, ಡಿವೈಎಸ್ಪಿ ಸುಕುಮಾರನ್.ಎಂ.ವಿ ಮೊದಲಾದವರು ಭಾಗವಹಿಸುವರು.
ಅಂದು ಮುಳ್ಳೇರಿಯದ ಶಿವ- ಪನೆಯಾಲಿನ ಸುಚಿತ್ರ, ನೆಕ್ಕಿಲಾಡಿಯ ಮೋಹನನ್-ಕುಂಟಾರಿನ ಯಶೋಧ, ಹರಿಹರದ ಗೋಪಕುಮಾರ್-ಪರವನಡ್ಕದ ಶಾಲಿನಿ, ಕುಂಟಾರಿನ ಶಂಕರ-ಪರಪ್ಪದ ಸಂಧ್ಯಾ, ಅರ್ಲಡ್ಕದ ಮಂಜುನಾಥ-ಶ್ರೀವಿದ್ಯಾ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಹಸೆಮಣೆಗೇರಲಿದ್ದಾರೆ.