HEALTH TIPS

No title

           ಡಿವಿಜಿ ಪ್ರಶಸ್ತಿ ಪುರಸ್ಕೃತ ಹಿರಿಯ ಭಾಷಾಂತರ ಕಾರ ಎ.ನರಸಿಂಹ ಭಟ್ ರಿಗೆ ಅಭಿನಂದನೆ
   ಕಾಸರಗೋಡು: ನಾಡು-ನುಡಿಗೆ ಮಹತ್ವಪೂರ್ಣ ಕೊಡುಗೆ ನೀಡಿದ ಮಹನೀಯರು ಯುವ ಸಮೂಹಕ್ಕೆ ಮಾರ್ಗದರ್ಶಕ ಹಾಗೂ ಅನುಕರಣೀಯರಾಗಿ ಮಣ್ಣಿನ ಹೆಮ್ಮೆಯಾಗಿದ್ದಾರೆ. ಅಂತಹ ಸಾಧಕರನ್ನು ಗೌರವಿಸುವುದು ನಾಗರಿಕ ಸಮಾಜದ ಆದ್ಯ ಕರ್ತವ್ಯ ಎಂದು ಹಿರಿಯ ಜ್ಯೋತಿಷಿ, ಸಾಮಾಜಿಕ-ಸಾಂಸ್ಕೃತಿಕ ಸಂಘಟಕ ಕೃಷ್ಣಮೂತರ್ಿ ಪುದುಕೋಳಿ ಅಭಿಪ್ರಾಯ ವ್ಯಕ್ತಪಡಿಸಿದರು.
   ಯಕ್ಷಮಿತ್ರರು ಮಾನ್ಯ ಹಾಗೂ ಕಾಸರಗೋಡಿನ ಗಡಿನಾಡು ಸಾಹಿತ್ತಿಕ, ಸಾಂಸ್ಕೃತಿಕ ಅಕಾಡೆಮಿ ನೇತೃತ್ವದಲ್ಲಿ ಹಿರಿಯ ಭಾಷಾಂತರಕಾರ,ಇತ್ತೀಚೆಗೆ ಡಿವಿಜಿ ಪ್ರಶಸ್ತಿ ವಿಜೇತರಾದ ವಿದ್ವಾಂಸ ಎ.ನರಸಿಂಹ ಭಟ್ ರವರನ್ನು ಕಾಸರಗೋಡಿನಲ್ಲಿರುವ ಅವರ ಸ್ವಗೃಹದಲ್ಲಿ ಶುಕ್ರವಾರ ಅಭಿನಂದಿಸಿ ಅವರು ಮಾತನಾಡಿದರು.
   ಕನ್ನಡ ಸಾಹಿತ್ಯ, ಸಾಂಸ್ಕೃತಿಕತೆಯೊಂದಿಗೆ ಅನ್ಯಭಾಷೆಯ ಬೆಸುಗೆಯನ್ನು ತಪಸ್ಸಿನಂತೆ ಸ್ವೀಕರಿಸಿ ನರಸಿಂಹ ಭಟ್ ರವರು ನೀಡಿರುವ ಅಸಾಮಾನ್ಯ ಕೊಡುಗೆ ಡಿವಿಜಿ ಸಾಹಿತ್ಯ ಪ್ರಶಸ್ತಿಯಂತಹ ಅಮೂಲ್ಯ ಗೌರವಾದಾರಗಳಿಗೆ ಕಾರಣವಾಗಿದ್ದು, ತೆರೆಮರೆಯ ಭಟ್ ರವರ ಸಾಹಿತ್ಯ ಕೈಂಕರ್ಯಕ್ಕೆ ಇನ್ನಷ್ಟು ಮಾನಸನ್ಮಾನಗಳು ಪ್ರಾಪ್ತಿಯಾಗಲೆಂದು ಅವರು ತಿಳಿಸಿದರು.
  ಗೌರವಾಭಿನಂದನೆ ಸ್ವೀಕರಿಸಿ ಮಾತನಾಡಿದ ಎ.ನರಸಿಂಹ ಭಟ್ ಅವರು, ಗಡಿನಾಡು ಕಾಸರಗೋಡಿನ ಅಲ್ಪಸಂಖ್ಯಾತ ಕನ್ನಡಿಗರು ಇಂದು ಅನುಭವಿಸುತ್ತಿರುವ ಬಹುಮುಖೀ ಸವಾಲುಗಳನ್ನು ಒಗ್ಗಟ್ಟಿನಿಂದ ಎದುರಿಸಬೇಕು. ಸಾಂವಿಧಾನಿಕ ಹಕ್ಕನ್ನು ಇನ್ನಷ್ಟು ಬಲಪಡಿಸಿ ಅನುಷ್ಠಾನಕ್ಕೆ ಹೋರಾಡಬೇಕು ಎಂದು ತಿಳಿಸಿದರು.
   ಗಡಿನಾಡು ಸಾಹಿತ್ತಿಕ, ಸಾಂಸ್ಕೃತಿಕ ಅಕಾಡೆಮಿಯ ಪ್ರೊ.ಎ.ಶ್ರೀನಾಥ್, ಯಕ್ಷಮಿತ್ರರು ಮಾನ್ಯದ ಸುಬ್ರಹ್ಮಣ್ಯ ಭಟ್, ಸುಂದರ ಶೆಟ್ಟಿ ಕೊಲ್ಲಂಗಾನ ಉಷಾ ರವಿಶಂಕರ್, ಉಮಾ ಮೊದಲಾದವರು ಉಪಸ್ಥಿತರಿದ್ದರು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries