HEALTH TIPS

No title

            ಕಡಲ ತಡಿಯಲ್ಲಿ ಶ್ರೀವಿಷ್ಣು ಸಹಸ್ರನಾಮ ಅಭಿಯಾನಕ್ಕೆ ಚಾಲನೆ
                ಧನಾತ್ಮಕ ಶಕ್ತಿಸಂಚಯನ ಅಗತ್ಯ-ಅನಂತಪದ್ಮನಾಭ ಆಸ್ರಣ್ಣ 
   ಉಪ್ಪಳ: ಅಮೃತತ್ವದ ಅನುಗ್ರಹ ಶಕ್ತಿಯಿಂದ ಸಂಕಷ್ಟಗಳಿಂದ ಪಾರಾಗಲು ಸಾಧ್ಯ. ಅಂತಹ ಶಕ್ತಿಸಂಚಯನಕ್ಕೆ ಭಗವಂತನ ನಾಮ ಸಂಕೀರ್ತನೆಗಳ ಮೂಲಕ ಧನಾತ್ಮಕತೆಯನ್ನು ವೃದ್ದಿಸಬೇಕು. ಶ್ರೀವಿಷ್ಣು ಸಹಸ್ರನಾಮಕ್ಕೆ ಅಂತಹ ಶಕ್ತಿಯಿದೆ ಎಂದು ಕಟೀಲು ಶ್ರೀದುಗರ್ಾಪರಮೇಶ್ವರಿ ಕ್ಷೇತ್ರದ ಅರ್ಚಕ ಬ್ರಹ್ಮಶ್ರೀ ಅನಂತಪದ್ಮನಾಭ ಆಸ್ರಣ್ಣ ತಿಳಿಸಿದರು.
   ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಆಶ್ರಯದಲ್ಲಿ 2019 ಫೆಬ್ರವರಿ 18 ರಿಂದ 25ರ ವರೆಗೆ ಕೊಂಡೆವೂರು ಆಶ್ರಮದಲ್ಲಿ ನಡೆಯಲಿರುವ "ಅತಿರಾತ್ರ ಸೋಮಯಾಗ"ದ ಪೂರ್ವಭಾವಿಯಾಗಿ ಭಾನುವಾರ ಸಂಜೆ ಉಪ್ಪಳ ಮೊಗವೀರ ಪಟ್ನ ಶಾರದಾ ಭಜನಾ ಮಂದಿರದ ಸಿಂಧೂ ಕಡಲ ಕಿನಾರೆ ಪರಿಸರದಲ್ಲಿ ಹಮ್ಮಿಕೊಂಡ "ಶ್ರೀವಿಷ್ಣು ಸಹಸ್ರನಾಮ ಅಭಿಯಾನ"ದ ಉದ್ಘಾಟನೆಯನ್ನು ದೀಪ ಬೆಳಗಿಸಿ ನಿರ್ವಹಿಸಿ ಅವರು ಮಾತನಾಡಿದರು.
   ಧನಾತ್ಮಕ ಶಕ್ತಿಗಳಿಂದ ಸಮಾಜದ ಅಭ್ಯುದಯ ಸಮಗ್ರ ನೆಮ್ಮದಿಗಳು ಸಾಕಾರವಾಗುತ್ತದೆ. ವಿಷ್ಣು ಸಹಸ್ರನಾಮವು ಜೀವಕೋಟಿಗಳ ಸುಖ-ಶಾಂತಿಗೆ ಕಾರಣವಾಗುವ ಶಕ್ತಿಹೊಂದಿದೆ ಎಂದು ಅವರು ತಿಳಿಸಿದರು. ಸಮಗ್ರ ಮಾನವ ಕುಲದ ಅಭ್ಯುದಯಕ್ಕಾಗಿ ಕಾರ್ಯನಿರ್ವಹಿಸುವ ಕೊಂಡೆವೂರು ಶ್ರೀಕ್ಷೇತ್ರವು ಅತ್ಯಪೂರ್ವ ಯಾಗಗಳನ್ನು ನಿರ್ವಹಿಸುವ ಮೂಲಕ ಸಾಮಾಜಿಕ ಕೈಂಕರ್ಯದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದೆ ಎಂದು ಅವರು ಈ ಸಂದರ್ಭ ತಿಳಿಸಿದರು.
   ಸಮಾರಂಭದಲ್ಲಿ ಉಪಸ್ಥಿತರಿದ್ದ ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನಗೈದು, ವರ್ತಮಾನದ ಗೊಂದಲ, ಕುಸಿದಿರುವ ಮಾನವೀಯತೆ, ಕಲುಶಿತಗೊಂಡಿರುವ ಅಂತಃಕರಣಗಳ ಸವಾಲುಗಳಿಂದ ಪಾರಾಗಲು ಯಜ್ಞ-ಯಾಗಾದಿಗಳು ನಡೆಯುತ್ತಿರಬೇಕು. ಮಾನವೀಯ ಸಂಬಂಧಗಳನ್ನು ಬೆಸೆಯುವ, ಸದ್ಗುಣಶೀಲತೆ ಬೆಳೆಸುವ, ಸುಭದ್ರ ಸಮಾಜ ಬೆಳೆಯಲು ಆಧ್ಯಾತ್ಮಿಕ ಶಕ್ತಿಯಿಂದ ಮಾತ್ರ ಸಾಧ್ಯ ಎಂದು ಅವರು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
   ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ಉಪಸ್ಥಿತರಿದ್ದ ಸಭೆಯ ಅಧ್ಯಕ್ಷತೆಯನ್ನು ಐಲ ಶ್ರೀದುಗರ್ಾಪರಮೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಕೋಡಿಬೈಲು ನಾರಾಯಣ ಹೆಗ್ಡೆ ವಹಿಸಿದ್ದರು. ಅವಧಾನಿ ಗುಂಡಿಬೈಲು ಸುಬ್ರಹ್ಮಣ್ಯ ಅವಧಾನಿಗಳು ಯಾಗ ಮಹತ್ವದ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
  ಅಬುದಾಬಿಯ ಯುಎಇ ಎಕ್ಸೇಂಜ್ನ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಅನಂತಪುರ ಶ್ರೀಅನಂತಪದ್ಮನಾಭ ಕ್ಷೇತ್ರದ ಉಪಾಧ್ಯಕ್ಷ ಶಂಕರಪ್ರಸಾದ್ ಕುಂಬಳೆ, ಮುಖಾಯಬೋವಿ ಸಮುದಾಯ ಸಭಾದ ಗೌರವಾಧ್ಯಕ್ಷ ಮಾಧವ ಕಾವುಗೋಳಿ, ಮಂಗಳೂರಿನ ಆಸರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಆಶಾಜ್ಯೋತಿ ರೈ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕನರ್ಾಟಕ ಸರಕಾರದ ಮಾಜಿ ವಿಧಾನ ಪರಿಷತ್ತು ಸದಸ್ಯ ಮೋನಪ್ಪ ಭಂಡಾರಿ, ವಾಮಂಜೂರು ಶ್ರೀಗುತ್ಯಮ್ಮ ಭಗವತೀ ಕ್ಷೇತ್ರದ ಕರುಣಾಕರ ಬೆಳ್ಚಪ್ಪಾಡ, ಉಪ್ಪಳ ಬೆಂಗರೆಯ ಮೊಗವೀರ ಸಭಾದ ಅಧ್ಯಕ್ಷ ಶಿವರಾಮ ಬಂಗೇರ, ಮೊಗವೀರ ಸಭಾದ ಗುರಿಕ್ಕಾರ ಅಶೋಕ ಶ್ರೀಯಾನ್ ಉಪಸ್ಥಿತರಿದ್ದರು.
   ನ್ಯಾಯವಾದಿ ಗಂಗಾಧರ ಕೊಂಡೆವೂರು ಸ್ವಾಗತಿಸಿ, ಹರೀಶ್ ಮಾಡ ವಂದಿಸಿದರು. ದಿನಕರ ಹೊಸಂಗಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಸಭಾ ಕಾರ್ಯಕ್ರಮದ ಮೊದಲು ದೀಪ ಪ್ರತಿಷ್ಠೆ ಬಳಿಕ ಭಜನಾ ಸತ್ಸಂಗ ರಾಮಕೃಷ್ಣ ಕಾಟುಕುಕ್ಕೆ ಹಾಗೂ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ನೇತೃತ್ವದಲ್ಲಿ ನಡೆಯಿತು. ಸಂಜೆ 6.30ಕ್ಕೆ ಸಿಂಧೂ ಕಡಲ ತೀರದಲ್ಲಿ ಸಾಮೂಹಿಕ ಶ್ರೀವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು. ಬಳಿಕ ಮಹಾಪೂಜೆ, ಸೂಯರ್ಾಸ್ತಮಾನದ ವೇಳೆ ಸಮುದ್ರಪೂಜೆ, ಪ್ರಸಾದ ವಿತರಣೆ ನೆರವೇರಿತು.
  ವಿಷ್ಣು ಸಹ್ರನಾಮ ಪಾರಾಯಣದಲ್ಲಿ ನೂರಾರು ಮಂದಿ ಭಾಗವಹಿಸಿದರು. ಈ ಸಂದರ್ಭ ಸಿಂಧೂ ಕಡಲಲ್ಲಿ ದೋಣಿಯ ಮೂಲಕ ಬೆಂಗರೆ ಮೊಗವೀರ ಪಟ್ನದ ಯುವಕರು ವರ್ಣಚಿತ್ತಾರದ ಸಿಡಿಮದ್ದು ಪ್ರದಶರ್ಿಸುವ ಮೂಲಕ ಗಮನ ಸೆಳೆದರು.
   
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries