HEALTH TIPS

No title

           ಸಾಹಿತ್ಯ ಕೃತಿಗಳು ಸರಳವಾಗಿ ಅಥರ್ೈಸುವಂತಿರಬೇಕು-ಶ್ರೀಕೃಷ್ಣಯ್ಯ ಅನಂತಪುರ
    ಬದಿಯಡ್ಕ: ಕವಿಭಾವವನ್ನು ಅಥರ್ೈಸುವ, ಜನಸಾಮಾನ್ಯರಿಗೆ ಮುಟ್ಟುವ ಕವನ, ಸಾಹಿತ್ಯ ಕೃತಿಗಳು ಜನಪ್ರೀತಿಗಳಿಸುತ್ತದೆ. ಕವಿಯ ಅಂತರಾಳದಲ್ಲಿ ಹುಟ್ಟುವ ಭಾವಗಳು ನಿಧಾನವಾಗಿ ತೀವ್ರಗತಿಪಡೆದು ಅಕ್ಷರ ರೂಪಕ್ಕಿಳಿದಾಗ ಸುಂದರ ಕವಿತೆ ಒಡಮೂಡುತ್ತದೆ. ಅದು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನ ಅರ್ಥ ಸ್ಪುರಿಸುವುದರ ಜೊತೆಗೆ ಗೇಯತೆ ಮತ್ತು ಮಾಧುರ್ಯಗಳಿಂದ ಮನೋಲ್ಲಾಸಕ್ಕೆ ಕಾರಣವಾಗುತ್ತದೆ ಎಂದು ಹಿರಿಯ ಕವಿ ಶ್ರೀಕೃಷ್ಣಯ್ಯ ಅನಂತಪುರ ಅಭಿಪ್ರಾಯ ವ್ಯಕ್ತಪಡಿಸಿದರು.
   ಯಕ್ಷಮಿತ್ರ ಸಾಂಸ್ಕೃತಿಕ ಸಂಘ ಮಾನ್ಯ, ಗಡಿನಾಡ ಸಾಹಿತ್ತಿಕ, ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಇವುಗಳ ಜಂಟಿ ಆಶ್ರಯದಲ್ಲಿ ಮಾನ್ಯ ಸಮೀಪದ ಕೊಲ್ಲಂಗಾನದಲ್ಲಿರುವ ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್ ರವರ ನಿವಾಸ ಅನಂತಶ್ರೀಯಲ್ಲಿ ಶುಕ್ರವಾರ ರಾತ್ರಿ ನಡೆದ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
   ಮನಸ್ಸು, ಸಮಾಜವನ್ನು ಬದಲಾಯಿಸುವ ಶಕ್ತಿಯಿರುವ ಸಾಹಿತ್ಯಗಳು ಸರಳವಾಗಿದ್ದಷ್ಟು ಗಮ್ಯತೆಯಲ್ಲಿ ಯಶಃಪಡೆಯುತ್ತದೆ. ಅವಸರದಿಂದ ಬರೆಯುವ ಬರಹಗಳು ನಿಷ್ಪ್ರಯೋಜಕಗಳಾಗಿ ಕೆಲವೊಮ್ಮೆ ಅಪಾಯಕ್ಕೂ ಕಾರಣವಾಗುತ್ತದೆ ಎಂಬ ಅರಿವು ಸಾಹಿತಿಗಿರಬೇಕು ಎಂದು ಅವರು ತಿಳಿಸಿದರು. ಯಾವುದೇ ಬಣಗಳಲ್ಲಾಗಲಿ, ವಿಚಾರಗಳಿಗಾಗಲಿ ಬಲಿಬಿದ್ದು ಅಭಿವ್ಯಕ್ತಿಗೊಳ್ಳುವ ಸಾಹಿತ್ಯಗಳು ಸಾಮಾಜಿಕ ಅಸ್ಥಿರತೆಗೆ ಕಾರಣವಾಗುತ್ತದೆ ಎಂಬ ಪರಿಜ್ಞಾನದ ಅಗತ್ಯವಿದೆ ಎಂದು ಅವರು ಕರೆನೀಡಿದರು.
   ಬಹುಭಾಷಾ ಕವಿಗೋಷ್ಠಿಯನ್ನು ಉದ್ಘಾಟಿಸಿದ ಮಧುರೆಯ ಕಾಮರಾಜ ವಿವಿಯ ನಿವೃತ್ತ ಕನ್ನಡ ವಿಭಾಗ ಮುಖ್ಯಸ್ಥ, ಸಾಹಿತಿ ಡಾ.ಹರಿಕೃಷ್ಣ ಭರಣ್ಯ ರವರು ಮಾತನಾಡಿ, ಭಾಷೆಯ ಸಮೃದ್ದತೆಗೆ ಕಾರಣವಾಗುವ ಸಾಹಿತ್ಯಗಳು ವಿವಿಧ ಭಾಷೆಗಳಿಂದ ಪರಸ್ಪರ ಕೊಡು-ಕೊಳ್ಳುವಿಕೆಯ ಮೂಲಕ ಅರಿವಿನ ವಿಸ್ತಾರತೆಗೆ ದಾರಿಮಾಡಿಕೊಡುತ್ತದೆ. ಭಾಷಾ ಸಾಮರಸ್ಯ ಮತ್ತು ವರ್ತಮಾನದ ವಿವಿಧ ಮುಖಗಳ ಸವಾಲುಗಲುಗಳಿಗೆ ಕನ್ನಡಿಯಾಗಿ ಬಹುಭಾಷೆಗಳ ಸಾಹಿತ್ಯ-ಕವಿಗೋಷ್ಠಿಗಳು ಪ್ರಸ್ತುತ ಎಂದು ತಿಳಿಸಿದರು.
   ಕವಿಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಹಂಪಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಮೋಹನ ಕುಂಟಾರು ಮಾತನಾಡಿ ಸಾಂಸ್ಕೃತಿಕ ಗತಿಯ ಪ್ರತಿಬಿಂಬಗಳಾಗಿ ಸಾಹಿತ್ಯ ಕೃತಿಗಳ ಕೊಡುಗೆ ಮಹತ್ವಪೂರ್ಣವಾದುದು. ವರ್ತಮಾನದ ಪ್ರತಿವಿದ್ಯಮಾನಗಳನ್ನೂ ಕಟ್ಟಿಕೊಡುವ ಕವಿ ಅನುಭವದೊಡನೆ ಸೃಜನಾತ್ಮಕವಾಗಿ ಆಕೃತಿ ನೀಡುವ ಮೂಲಕ ಸಾಮಾಜಿಕ ಶಿಲ್ಪಿಯಾಗಿ  ತನ್ನ ಸ್ಥಾನವನ್ನು ಕಾಯ್ದುಕೊಳ್ಳಬೇಕು ಎಂದು ತಿಳಿಸಿ ಕವನ ವಾಚಿಸಿದರು.
   ಕವಿಗೋಷ್ಠಿಯಲ್ಲಿ ಡಾ.ಅಶೋಕ್ ಕುಮಾರ್ ಕಾಸರಗೋಡು(ಕೊಂಕಣಿ), ವೆಂಕಟ್ ಭಟ್ ಎಡನೀರು(ಹವ್ಯಕ),ಕೇಶವಪ್ರಸಾದ ಕುಳಮರ್ವ(ಸಂಸ್ಕೃತ), ವಿಜಯಾಸುಬ್ರಹ್ಮಣ್ಯ ನಾರಾಯಣಮಂಗಲ(ಹವ್ಯಕ), ಸೌಮ್ಯಾ ಪಿ.(ಕನ್ನಡ), ವಿಜಯರಾಜ ಪುಣಿಚಿತ್ತಾಯ(ಶಿವಳ್ಳಿ), ರಾಜಶ್ರೀ ಟಿ.ರೈ(ತುಳು), ಡಾ.ರತ್ನಾಕರ ಮಲ್ಲಮೂಲೆ(ಕನ್ನಡ), ಸ್ಟೇನಿಲೋಬೋ ಕಲ್ಲಕಟ್ಟ(ಕೊಂಕಣಿ), ಪ್ರಸನ್ನಕುಮಾರಿ ಮರ್ಧಂಬಯಲು(ಕನ್ನಡ), ರಾಘವನ್ ಬೆಳ್ಳಿಪ್ಪಾಡಿ(ಮಲೆಯಾಳ), ಅನ್ನಪೂರ್ಣ ಬಜಪೆ(ಕನ್ನಡ), ಸನ್ನಿಧಿಟಿ.ರೈ(ಆಂಗ್ಲ), ವಸಂತ ಬಾರಡ್ಕ(ತುಳು), ಶಾಂತಾರವಿ ಕುಂಟಿನಿ(ಕನ್ನಡ), ಅಕ್ಷತಾ ಭಟ್ ಪುದುಕೋಳಿ(ಸಂಸ್ಕೃತ) ಭಾಷೆಗಳ ಸ್ವರಚಿತ ಕವನಗಳನ್ನು ವಾಚಿಸಿದರು.
   ಪತ್ರಕರ್ತ ಪುರುಷೋತ್ತಮ ಭಟ್ ಕೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರೊ.ಎ.ಶ್ರೀನಾಥ್ ವಂದಿಸಿದರು. ಕೃಷ್ಣಮೂತರ್ಿ ಪುದುಕೋಳಿ ಸಹಕರಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries