ದಿ.ಮದಂಗಲ್ಲು ಶ್ರೀನಿವಾಸ ರಾವ್ ನುಡಿನಮನ
ಮಂಜೇಶ್ವರ: ಇತ್ತೀಚೆಗೆ ನಿಧನ ಹೊಂದಿದ ಹಿರಿಯ ಹವ್ಯಾಸಿ ಯಕ್ಷಗಾನ ಕಲಾವಿದ ರಂಗನಟ ಹಾಗೂ ಸಮಾಜ ಸೇವಕ ಮದಂಗಲ್ಲು ಶ್ರೀನಿವಾಸ ರಾವ್ ಅವರಿಗೆ ಶ್ರದ್ಧಾಂಜಲಿ ನುಡಿನಮನ ಕಾರ್ಯಕ್ರಮವು ಮಹಾಗಣಪತಿ ಭಜನಾ ಸಂಘ ಮದಂಗಲ್ಲು ಕಟ್ಟೆ ಇದರ ಆಶ್ರಯದಲ್ಲಿ ಇತ್ತೀಚೆಗೆ ಜರಗಿತು.
ದಿವಂಗತರ ನೂರಾರು ಹಿತೈಷಿಗಳು ಸೇರಿದ್ದ ಸಮಾರಂಭದಲ್ಲಿ ಮಹಾಗಣಪತಿ ಭಜನಾ ಸಂಘದ ಅಧ್ಯಕ್ಷ ಮುಂದಿಲ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಮೃತರ ಬಗ್ಗೆ ರಾಜಾರಾಮ ರಾವ್ ಮೀಯಪದವು ಮಾತನಾಡಿ ದಿವಂಗತರ ಸಮಾಜಿಕ, ಅಧ್ಯಾಪನ, ಹಾಗೂ ಕಲಾ ಕೊಡುಗೆಯ ಬಗ್ಗೆ ನೆನಪಿಸಿ ನುಡಿನಮನ ಸಲ್ಲಿಸಿದರು. ಬಳಿಕ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ದಿವಂಗತರ ಕೊಡುಗೆಯ ಬಗ್ಗೆ ತಿಮ್ಮಪ್ಪ ಮೀಯಪದವು, ಮದಂಗಲ್ಲು ಭಜನಾ ಸಂಘಕ್ಕೆ ದಿವಂಗತರು ನೀಡಿದ ಕೊಡುಗೆಯ ಬಗ್ಗೆ ಯು.ಜಿ.ರೈ, ಪ್ರಸಾದನ ಕಲಾವಿದನಾಗಿ ಶ್ರೀನಿವಾಸ ರಾವ್ ಅವರ ಕೊಡುಗೆಯ ಬಗ್ಗೆ ಗಣೇಶ ಕಲಾವೃಂದ ಪೈವಳಿಕೆಯ ದೇವಕಾನ ಶ್ರೀಕೃಷ್ಣ ಭಟ್, ಸಹೋದ್ಯೋಗಿಯಾಗಿದ್ದ ವಸಂತ ಭಟ್ ತೊಟ್ಟೆತ್ತೋಡಿ, ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಮೃತರ ಹಿರಿಯ ಸಹೋದರ ಮದಂಗಲ್ಲು ಸದಾಶಿವ ಭಟ್ ನುಡಿ ನಮನ ಸಲ್ಲಿಸಿದರು. ಮೃತರ ಪುತ್ರ ರವಿ ಕಿಶನ್ ಮದಂಗಲ್ಲು, ಸಹೋದರ ಮದಂಗಲ್ಲು ಆನಂದ ಭಟ್, ಸಮಾಜ ಸೇವಕ ಪದ್ಮನಾಭ ರೈ ಉಂಬುಲ್ತೋಡಿ ಉಪಸ್ಥಿತರಿದ್ದರು. ಸದಾನಂದ ಶೆಟ್ಟಿ ತಲೇಕಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪುಷ್ಪ ರಾಜ ಶೆಟ್ಟಿ ತಲೇಕಳ ವಂದಿಸಿದರು.