HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ನರಕ್ಕದ ಮನುಷ್ಯರು- ಭಾರೀ ಪ್ರಮಾಣದಲ್ಲಿ ಕೋಳಿ ತ್ಯಾಜ್ಯ ರಸ್ತೆಗೆ ಚೆಲ್ಲಿದ ಸಮಾಜ ಘಾತುಕರು-ನಾಗರಿಕರ ತೀವ್ರ ಆಕ್ರೋಶ
    ಪೆರ್ಲ: ಇಲ್ಲಿಗೆ ಸಮೀಪದ ಗಾಳಿಗೋಪುರ ಏತಡ್ಕ ರಸ್ತೆಯ ಪೆರಿಯಾಲ್ ಎಂಬಲ್ಲಿ  ಸಮಾಜ ಘಾತುಕರು ಬುಧವಾರ ಮುಂಜಾನೆ ಕತ್ತಲೆ ಮರೆಯಲ್ಲಿ ಭಾರೀ ಪ್ರಮಾಣದಲ್ಲಿ ಕೋಳಿತ್ಯಾಜ್ಯವನ್ನು  ರಸ್ತೆಗೆ  ಎಸೆದು ಪೌರುಷ ಮೆರೆದಿದ್ದಾರೆ. ರಸ್ತೆಯಲ್ಲಿಯೇ ತ್ಯಾಜ್ಯ ಎಸೆಯಲಾಗಿದ್ದು  ವಾಹನಗಳು ಅವುಗಳ ಮೇಲೆ ಸಾಗಿದ್ದು ಚೆಲ್ಲಾಪಿಲ್ಲಿಯಾಗಿ  ಹರಡಿದೆ. ಘಟನೆ ಬಗ್ಗೆ ನಾಗರಿಕರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದು ತಂಡಗಳನ್ನು ರಚಿಸಿ ರಾತ್ರಿ ವೇಳೆಗಳಲ್ಲಿ  ಕಾವಲು ನಿಂತು ತ್ಯಾಜ್ಯ ಎಸೆದು ಸಮಾಜ ಘಾತುಕ ಕೃತ್ಯ ಎಸಗುವವರನ್ನು ಕೈಯ್ಯಾರೆ ಸೆರೆ ಹಿಡಿದು ಕಾನೂನಿನ ಮುಂದೆ ತರಲು ಹಾಗೂ ಕೋಳಿ ಸಾಗಾಟ ವಾಹನ ಹಾಗೂ ರಖಂ ವ್ಯಾಪಾರಿಗಳ ಮೇಲೆ ನಿಗಾ ಇರಿಸಲು ನಿರ್ಧರಿಸಿದ್ದಾರೆ.
    ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ  ರೂಪವಾಣಿ ಆರ್ ಭಟ್, ಸದಸ್ಯೆ ಶಶಿಕಲಾ ವೈ., ಗ್ರಾಮ ಪಂಚಾಯಿತಿ  ಕಾರ್ಯದಶರ್ಿ ರೆಜಿಮೋನ್, ಆರೋಗ್ಯ ಅಧಿಕಾರಿ ಚಂದ್ರನ್, ಸಾಮಾಜಿಕ ಹೋರಾಟಗಾರ ವೈದ್ಯ ಡಾ.ಮೋಹನ್ ಕುಮಾರ್ ವೈ. ಎಸ್, ಬದಿಯಡ್ಕ ಠಾಣಾ ಫ್ಲಯಿಂಗ್ ಸ್ಕ್ವಾಡ್  ಪೊಲೀಸ್ ಸಿಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಸ್ಥಳೀಯರಲ್ಲಿ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಜೆಸಿಬಿ ಬಳಸಿ ತ್ಯಾಜ್ಯ ವಿಲೇವಾರಿ ನಡೆಸಲಾಯಿತು.
    ಸಮಾಜ ಘಾತುಕರ ತ್ಯಾಜ್ಯ ಎಲ್ಲೆಂದರಲ್ಲಿ ಎಸೆಯುವ ಈ ಕೃತ್ಯವು ಇದೇ ಮೊದಲಾಗಿರದೆ  ಬಿಜಂತಡ್ಕ,ನಾರಂಪಾಡಿ, ಉಕ್ಕಿನಡ್ಕ, ಸ್ವರ್ಗ ಸಮೀಪದ ಗೋಳಿಕಟ್ಟೆ,  ವಾಣೀನಗರ, ಪಾಣಾಜೆ-ಕಾಟುಕುಕ್ಕೆ ರಸ್ತೆ, ಧರ್ಮತ್ತಡ್ಕ  ಮೊದಲಾಗಿ ಹಲವೆಡೆ ಕೋಳಿ ಸಾಗಾಟದ ವಾಹನ ಚಾಲಕರು ತ್ಯಾಜ್ಯ ಎಸೆಯುತ್ತಿದ್ದು ದುನರ್ಾತ ಬೀರುತ್ತಿರುವುದಲ್ಲದೆ ಸಾಂಕ್ರಾಮಿಕ ರೋಗ ಪಸರಿಸಲು ಕಾರಣವಾಗುತ್ತಿದೆ.  ವಾರಗಳ ಹಿಂದೆ ಸ್ವರ್ಗದಲ್ಲಿ ಯುವಕರ ತಂಡವೊಂದು ಕೋಳಿಸಾಗಾಟ ವಾಹನ ಚಾಲಕರಿಗೆ ಕೋಳಿತ್ಯಾಜ್ಯ ರಸ್ತೆಗೆ ಎಸೆಯದಂತೆ ಎಚ್ಚರಿಕೆ ನೀಡಿತ್ತು.
      ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಂದ ಖಂಡನೆ:
     ರಾತ್ರಿ ಮರೆಯಲ್ಲಿ  ತ್ಯಾಜ್ಯ ಎಸೆತವೇ ಮೊದಲಾಗಿ ದುಷ್ಕೃತ್ಯ ಎಸಗುತ್ತಿರುವ ಸಮಾಜ ಘಾತುಕ ಕೃತ್ಯವನ್ನು
ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪವಾಣಿ ಆರ್ ಭಟ್ ಅವರು  ಖಂಡಿಸಿದ್ದು " ದೇಶಾದ್ಯಂತ ಸ್ವಚ್ಛ ಭಾರತ ಅಭಿಯಾನ ಹಮ್ಮಿಕೊಂಡು ಸಾರ್ವಜನಿಕರು ಅದನ್ನು ಪಾಲಿಸುತ್ತಾ ಬರುವಾಗ ಅದೇ ರೀತಿ  ಜಿಲ್ಲೆ, ಬ್ಲಾಕ್ , ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ  ಆರೋಗ್ಯ ಜಾಗೃತಿ ಸೆಮಿನಾರ್ ಸಾಕ್ಷ್ಯ ಚಿತ್ರ, ಬೀದಿ ನಾಟಕಗಳ ಮೂಲಕ ಜನ ಜಾಗೃತಿ ಮೂಡಿಸುತ್ತಿದ್ದು ಹಾಗೂ ಮಳೆಗಾಲ ಪೂರ್ವ ಶುಚಿತ್ವ ಕಾರ್ಯಕ್ರಮಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಸಮಾಜ ಘಾತುಕರ ಚಟುವಟಿಕೆ ನಡೆಸುತ್ತಿರುವವರನ್ನು   ಕಾನೂನಿನ ಮುಂದೆ ತರುವುದು ಅನಿವಾರ್ಯ " ಎಂಬುದಾಗಿ  ಹೇಳಿಕೆ ನೀಡಿದ್ದಾರೆ. ಅಲ್ಲದೆ ಪರಿಸರದಲ್ಲಿನ ಸಿ ಸಿ ಟಿವಿ ದೃಶ್ಯ ಪರಿಶೋಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬದಿಯಡ್ಕ ಠಾಣಾಧಿಕಾರಿಗಳಿಗೆ ಮನವಿ ನೀಡಿದ್ದು  ರಾತ್ರಿ ವೇಳೆಗಳಲ್ಲಿ ಇನ್ನೂ ಹೆಚ್ಚಿನ  ಗಸ್ತು ಹಾಗೂ ತಪಾಸಣೆ ನಡೆಸಿ ದುಷ್ಕೃತ್ಯ ನಡೆಸುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಬದಿಯಡ್ಕ ಪೊಲೀಸ್ ಠಾಣಾಧಿಕಾರಿ ಕೆ. ಪ್ರಶಾಂತ್ ತಿಳಿಸಿರುತ್ತಾರೆ.
    ಜಿಲ್ಲೆಯಾದ್ಯಂತ ಪಿಡುಗು:
   ಕೋಳಿ ತ್ಯಾಜ್ಯ ಸಹಿತ ಮಾಂಸೋತ್ಪನ್ನಗಳ ಅವಶೇಷಗಳನ್ನು ಜಿಲ್ಲೆಯ ವಿವಿಧೆಡೆ ರಸ್ತೆಬದಿ ಎಲ್ಲೆಂದರಲ್ಲಿ ಎಸೆಯುತ್ತಿರುವುದು ಕಳೆದೊಂದು ವರ್ಷದಿಂದ ತೀವ್ರಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಮೇಲ್ಪರಂಬದಿಂದ ಆರಂಭಗೊಂಡು ತಲಪಾಡಿಯ ಗಡಿ ಭಾಗದ ತನಕ ಮೂಗು ಮುಚ್ಚಿ ಸಂಚರಿಸುವುದು ಸವರ್ೇ ಸಾಮಾನ್ಯವೆಂಬಂತಾಗಿದೆ. ಕಾಸರಗೋಡು ಮಂಗಳೂರು ಹೆದ್ದಾರಿ ಸಂಚಾರದ ವೇಳೆ ಸಾರ್ವಜನಿಕರು ಮೌತ್ ಗ್ಲೌಸ್ ಬಳಸಿ ಸಂಚರಿಸುತ್ತಿರುವುದು ಪರಿಸ್ಥಿತಿಯ ಗಂಭೀರತೆಗೆ ಹಿಡಿದ ಕನ್ನಡಿ. ಜೊತೆಗೆ ಗ್ರಾಮೀಣ ಪ್ರದೇಶಗಳ ರಸ್ತೆಯನ್ನೂ ಸಮಾಜ ಘಾತುಕರು ಬಿಟ್ಟಿಲ್ಲ. ನೀಚರ್ಾಲು ವಿದ್ಯಾನಗರ ರಸ್ತೆಯ ಅಲ್ಲಲ್ಲಿ, ಕಾಸರಗೋಡು ಸೀತಾಂಗೋಳಿ ರಸ್ತೆ, ಹೊಸಂಗಡಿ ಮೀಯಪದವು-ವಕರ್ಾಡಿ ರಸ್ತೆಗಳ ಹಲವೆಡೆಗಳಲ್ಲಿ ರಸ್ತೆಬದಿ ತ್ಯಾಜ್ಯ ಎಸೆಯುವುದರಿಂದ ಪರಿಸರ ಗಬ್ಬೆದ್ದು ನಾರುತ್ತಿದೆ.
   ಪೋಲೀಸರ ನಿಷ್ಕ್ರೀಯತೆ:
   ಸಮಾಜ ಘಾತುಕರ ಇಂತಹ ಅಟ್ಟಹಾಸ ಮಟ್ಟಹಾಕುವಲ್ಲಿ ಪೋಲೀಸ್ ಇಲಾಖೆ ಸಂಪೂರ್ಣ ನಿಷ್ಕ್ರೀಯರಾಗಿರುವುದಾಗಿ ಸಾರ್ವಜನಿಕರು ತಿಳಿಸುತ್ತಾರೆ.ಪೋಲೀಸರಿಗೆ ಮಾಹಿತಿ ನೀಡಿದರೆ ಒಮ್ಮೆ ಮಾತ್ರ ಗಸ್ತು ನಡೆಸಿ ಬಳಿಕ ಸುಮ್ಮನಿರುವುದು ಸಮಾಜ ಘಾತುಕರ ಕುಕೃತ್ಯಕ್ಕೆ ಪ್ರೋತ್ಸಾಹ ನೀಡಿದಂತಿದೆ.
   


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries