HEALTH TIPS

No title

            ಪರಂಪರೆಯ ಬೇರುಗಳು ಗಟ್ಟಿಯಾಗಿದ್ದರಷ್ಟೆ ವರ್ತಮಾನದ ಬದುಕನ್ನು ಸುದೃಢ-ಪ್ರೇಮಾ ಭಟ್
   ಮಂಜೇಶ್ವರ: ನಾಡಿನ ಸಾಂಸ್ಕೃತಿಕತೆ ಪರಂಪರೆ ಸಾಗಿಬಂದ ಮಾರ್ಗದ ದಿಕ್ಸೂಚಿಯಾಗಿದೆ. ಗಡಿನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಿದರಷ್ಟೆ ಈ ಮಣ್ಣಿನ ಋಣ ಸಂದಾಯದ ಸಾರ್ಥಕತೆ ಸಾಕಾರವಾಗುತ್ತದೆ ಎಂದು ಮೀಯಪದವಿನ ಶ್ರೀವಿದ್ಯಾವರ್ಧಕ ವಿದ್ಯಾಸಂಸ್ಥೆಗಳ ಪ್ರಬಂಧಕಿ ಪ್ರೇಮಾ ಕೆ. ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.
   ಕಾಸರಗೋಡಿನ ಸಾಹಿತ್ತಿಕ-ಸಾಮಾಜಿಕ ಸಂಘಟನೆ ರಂಗಚಿನ್ನಾರಿ ಕಾಸರಗೋಡು ಸಂಸ್ಥೆಯು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಮೀಯಪದವಿನ ಶ್ರೀವಿದ್ಯಾವರ್ಧಕ ವಿದ್ಯಾಸಂಸ್ಥೆಯ ಸಹಕಾರದೊಂದಿಗೆ ಮೀಯಪದವು ವಿದ್ಯಾವರ್ಧಕ ಅನುದಾನಿತ ಶಾಲೆಯ ನಾರಾಯಣೀಯಂ ರಂಗಮಂದಿರದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡ "ನೆನೆ ನೆನೆ ಕನ್ನಡ ಗಾನ" ಕಾರ್ಯಕ್ರಮದ ಏಳನೇ ದಿನದ ಸಮಾರೋಪ  ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
   ಪಾಶ್ಚಿಮಾತ್ಯದ ಅನುಕರಣೆಯ ಮಧ್ಯೆ ದೇಶೀ ಸಾಂಸ್ಕೃತಿಕತೆಯ ಹಿನ್ನಡೆಗೆ ಅವಕಾಶ ಮಾಡಕೂಡದು. ಪರಂಪರೆಯ ಬೇರುಗಳು ಗಟ್ಟಿಯಾಗಿದ್ದರಷ್ಟೆ ವರ್ತಮಾನದ ಬದುಕನ್ನು ಸುದೃಢವಾಗಿ ಕಟ್ಟಿಬೆಳೆಸಲು ಸಾಧ್ಯ ಎಂದು ತಿಳಿಸಿದ ಅವರು, ರಂಗಚಿನ್ನಾರಿಯ ದಶಕಗಳಿಗೂ ಹೆಚ್ಚಿನ ಕನ್ನಡ ಕೈಂಕರ್ಯ ಸ್ತುತ್ಯರ್ಹ ಎಂದು ತಿಳಿಸಿದರು.
   ವೇದಿಕೆಯಲ್ಲಿ ಉಪಸ್ಥಿತರಿದ್ದ ರಂಗಚಿನ್ನಾರಿಯ ನಿದರ್ೇಶಕ, ಚಲನಚಿತ್ರ ನಟ ಕಾಸರಗೋಡು ಚಿನ್ನಾ ಮಾತನಾಡಿ, ಗಡಿನಾಡಿನ ಸಾಂಸ್ಕೃತಿಕ ಭೂಪಟದಲ್ಲಿ ಮೀಯಪದವಿನ ಕೊಡುಗೆ ಗಮನಾರ್ಹ. ಕನ್ನಡ ನಾಡು-ನುಡಿಯ ಸೇವೆಯಲ್ಲಿ ರಾಜಿ ಎನ್ನುವುದೇ ಇಲ್ಲ ಎಂದು ತಿಳಿಸಿದರು. ಬಹುಭಾಷೆಗಳ ಸಂಗಮಭೂಮಿಯಾದ ಕಾಸರಗೋಡಿನಲ್ಲಿ ಕನ್ನಡದ ಏಕಛಾವಣಿಯಡಿಯಲ್ಲಿ ಬೆಳೆದುಬಂದಿರುವ ಒಗ್ಗಟ್ಟಿಗೆ ಒಡಕು ಬರಿಸುವ ಯತ್ನಗಳು ಫಲಕಾರಿಯಾಗದು ಎಂದು ಅವರು ತಿಳಿಸಿದರು.
   ಹಿರಿಯ ಸಾಹಿತಿ ಡಾ.ಡಿ.ಸಿ.ಚೌಟ ಅಧ್ಯಕ್ಷತೆ ವಹಿಸಿದ್ದರು. ಸಂಘಟಕ ಸಂಕಬೈಲು ಸತೀಶ ಅಡಪ, ನಿವೃತ್ತ ಶಿಕ್ಷಕಿ ಸರೋಜಾ ಟೀಚರ್, ನಿವೃತ್ತ ಮುಖ್ಯೋಪಾಧ್ಯಾಯ, ಕೇರಳ ರಾಜ್ಯ ಕನ್ನಡ ಅಧ್ಯಾಪಕ ಸಂಘಟದ ಮಾಜಿ ಅಧ್ಯಕ್ಷ ಟಿ.ಡಿ.ಸದಾಶಿವ ರಾವ್, ರಂಗಚಿನ್ನಾರಿಯ ಸಹ ನಿದರ್ೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ ಉಪಸ್ಥಿತರಿದ್ದರು. ಶ್ರೀವಿದ್ಯಾವರ್ಧಕ ವಿದ್ಯಾಸಂಸ್ಥೆಗಳ ಸಂಚಾಲಕ ಡಾ.ಜಯಪ್ರಕಾಶನಾರಾಯಣ ತೊಟ್ಟೆತೋಡಿ ಸ್ವಾಗತಿಸಿ, ವಂದಿಸಿದರು. ರಾಜಾರಾಮ ರಾವ್ ಕಾರ್ಯಕ್ರಮ ನಿರೂಪಿಸಿದರು.
  ಬಳಿಕ ಪ್ರಸಿದ್ದ ಗಾಯಕ ರವೀಂದ್ರ ಪ್ರಭು, ಸೀಮಾ ರಾಯ್ಕರ್ ಹಾಗೂ ಕಿಶೋರ್ ಪೆರ್ಲರಿಂದ ಅತ್ಯಪೂರ್ವ ಶೈಲಿಗಳಲ್ಲಿ  `ನೆನೆ ನೆನೆ ಕನ್ನಡ ಗಾನ' ಎಂಬ ಭಕ್ತಿ ಭಾವ ಜನಪದಗೀತೆಗಳ ಝೇಂಕಾರ ಹಾಡುಗಳನ್ನು ಪ್ರಸ್ತುತಪಡಿಸಿ ಪ್ರೇಕ್ಷಕರ ಮನಸೂರೆಗೊಳಿಸಿದರು. ಖ್ಯಾತ ಹಿನ್ನಲೆ ಸಂಗೀತಗಾರರಾದ ಪುರುಷೋತ್ತಮ ಕೊಪ್ಪಳ್ ಕೀಬೋಡರ್ಿನಲ್ಲಿ, ರಾಜೇಶ್ ಭಾಗವತ್ ರಿದಂಪಾಡ್ನಲ್ಲಿ ಹಾಗೂ ತಬಲಾದಲ್ಲಿ ಅಭಿಜಿತ್ ಶೆಣೈ ಸಹಕರಿಸಿದರು.
     ಸಾಗಿದ ವಾರದ ಪರ್ಯಟನೆಯ ನೋಟ-ಮಾಡಿತ್ತು ಮಾಟ:
   ರಂಗಚಿನ್ನಾರಿ ಕಾಸರಗೋಡು ಸಂಸ್ಥೆ ಕಳೆದ ಒಂದು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ (13 ವರ್ಷ) ಗಡಿನಾಡಿನ ಸಾಂಸ್ಕೃತಿಕತೆಯ ಬೇರುಗಳನ್ನು ಪರಿಪೋಶಿಸಲು ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳು ಗಮನಾರ್ಹವಾಗಿ ಗುರುತಿಸಿಕೊಂಡಿದೆ. ಬೀದಿ ಬದಿ ಚಿಂದಿ ಆಯುವ ಮಕ್ಕಳನ್ನು ಮುನ್ನೆಲೆಗೆ ಕರೆತರುವ ಯತ್ನದ ಭಾಗವಾಗಿ ಹುಟ್ಟುಪಡೆದ ರಂಗಚಿನ್ನಾರಿಯುವ ಬಳಿಕ ನೂರಕ್ಕಿಂತಲೂ ಹೆಚ್ಚು ಚಿಂದಿ ಆಯುವ ಮಕ್ಕಳನ್ನು ಬಳಸಿ ನಡೆಸಿದ ಬೀದಿ ನಾಟಕಗಳು ಬೆಂಗಳೂರಿನ ರಾಜಭವನವನ್ನೂ ತಟ್ಟಿ ಗಮನ ಸೆಳೆದಿತ್ತು, ಬಳಿಕ ಲಾರಿ ನಾಟಕ, ಲಾರಿ ಯಕ್ಷತೇರು, ಜಿಲ್ಲೆಯ 6 ಸಾವಿರ ಕನ್ನಡ ಮಕ್ಕಳಿಗೆ ಕನ್ನಡ ನಾಡಗೀತೆಗಳ ಕಲಿಕಾ ಅಭಿಯಾನ ಮೊದಲಾದ ಕಾರ್ಯಕ್ರಮ ಸರಣಿಗಳ ಮೂಲಕ ವಿಶಿಷ್ಟತೆ ಮೆರೆದು ಜನಪ್ರೀಯತೆ ಗಳಿಸಿತ್ತು. ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಸ್ಥಳೀಯ ಸಂಘಸಂಸ್ಥೆಗಳ ಸಹಕಾರದಲ್ಲಿ  ಹಳ್ಳಿಯೆಡೆಗೆ `ರಂಗಚಿನ್ನಾರಿ' ಅಭಿಯಾನವಾದ  ಭಕ್ತಿ, ಭಾವ ಜನಪದ ಗೀತೆಗಳ ಝೇಂಕಾರ `ನೆನೆ..ನೆನೆ..ಕನ್ನಡ ಗಾನ' ಕಾರ್ಯಕ್ರಮ ಮೇ 13 ರಿಂದ 19 ರ ವರೆಗೆ ವಿವಿಧ ಪ್ರದೇಶಗಳನ್ನು ಕೇಂದ್ರೀಕರಿಸಿ ಯಶಸ್ವಿಯಾಗಿ ನಡೆದು ಸಮಾರೋಪಗೊಂಡಿತು.
   ಮೇ 13 ರಂದು  ಉಪ್ಪಳ ತರುಣ ಕಲಾವೃಂದ ಐಲ ಇದರ ಸಹಯೋಗದೊಂದಿಗೆ ಐಲ ಶ್ರೀ ದುಗರ್ಾಪರಮೇಶ್ವರಿ ಕಲಾಭವನದಲ್ಲಿ ಚಾಲನೆಗೊಂಡ ಈ ಅಭಿಯಾನ 14 ರಂದು ಭಾರತೀ ವಿದ್ಯಾಪೀಠ ಬದಿಯಡ್ಕ,  ಮೇ 15 ರಂದು ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಉಪ್ಪಳ,  16 ರಂದು ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಸಹಯೋಗದಲ್ಲಿ ಮುಳ್ಳೇರಿಯದ ಗಣೇಶ ಕಲಾಮಂದಿರ, 17 ರಂದು ಶ್ರೀ ದುಗರ್ಾಪರಮೇಶ್ವರಿ ಭಜನಾ ಸಂಘ ಏತಡ್ಕ ಇದರ ಸಹಯೋಗದೊಂದಿಗೆ ಶ್ರೀ ದುಗರ್ಾಪರಮೇಶ್ವರಿ ಭಜನಾ ಮಂದಿರದ ಆವರಣ, 18 ರಂದು ಶ್ರೀ ಪುರಂದರದಾಸ ಆರಾಧನೋತ್ಸವ ಸಂಘ ಕಾಟುಕುಕ್ಕೆ ಇದರ ಸಹಯೋಗದೊಂದಿಗೆ ಶ್ರೀ ಸುಬ್ರಾಯ ದೇವಸ್ಥಾನ ಸಭಾಂಗಣದಲ್ಲಿ ನಡೆದು ಶನಿವಾರ ಮೀಯಪದವು ಎಸ್ವಿವಿಎಚ್ಎಸ್ಎಸ್ ಇದರ ವಿದ್ಯಾಥರ್ಿ ವೃಂದ ಹಾಗೂ ಪ್ರಾಧ್ಯಾಪಕ ಆಡಳಿತ ಮಂಡಳಿಯ ಸಹಯೋಗದೊಂದಿಗೆ ಮೀಯಪದವಿನಲ್ಲಿ ಸಮಾರೋಪಗೊಂಡು ಹೊಸ ಮೈಲುಗಲ್ಲು ನಿಮರ್ಿಸುವಲ್ಲಿ ಸಾಫಲ್ಯತೆಪಡೆಯಿತು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries