HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟ : ಶೇ.97.84 ತೇರ್ಗಡೆ
     ಕುಂಬಳೆ: ಪ್ರಸ್ತುತ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಗುರುವಾರ ಬೆಳಗ್ಗೆ ಪ್ರಕಟಿಸಲಾಯಿತು. ಶೇ.97.84 ವಿದ್ಯಾಥರ್ಿಗಳು ತೇರ್ಗಡೆಯಾಗಿರುವುದಾಗಿ ಶಿಕ್ಷಣ ಸಚಿವ ಪ್ರೊ.ಸಿ.ರವೀಂದ್ರನಾಥ್ ತಿಳಿಸಿದರು. ಕಳೆದ ವರ್ಷಕ್ಕಿಂತ ಈ ಭಾರಿ ಶೇ. ಫಲಿತಾಂಶದಲ್ಲಿ ಹೆಚ್ಚಳವಾಗಿದೆ. ಕಳೆದ ವರ್ಷ ಶೇ. 95.98 ಫಲಿತಾಂಶ ಬಂದಿತ್ತು. ಅಂದರೆ ಕಳೆದ ವರ್ಷಕ್ಕಿಂತ ಈ ಬಾರಿ ಶೇ. 1.86 ಅಧಿಕ ಫಲಿತಾಂಶ ಬಂದಿದೆ.
   ಪರೀಕ್ಷೆ ಬರೆದ 4,41,103 ಮಂದಿ ವಿದ್ಯಾಥರ್ಿಗಳ ಪೈಕಿ 4,31,162 ಮಂದಿ ತೇರ್ಗಡೆಯಾಗಿದ್ದಾರೆ. 34,313 ಮಂದಿ ವಿದ್ಯಾಥರ್ಿಗಳು ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ನಲ್ಲಿ ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ 20,967 ಮಂದಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದಿದ್ದರು. ಖಾಸಗಿಯಾಗಿ ಪರೀಕ್ಷೆ ಬರೆದ 2784 ಮಂದಿ ಪೈಕಿ 2085 ಮಂದಿ ವಿದ್ಯಾಥರ್ಿಗಳು ತೇರ್ಗಡೆಯಾಗಿದ್ದಾರೆ. ಅಂದರೆ ಶೇ.75.67.
   ಶೈಕ್ಷಣಿಕ ಜಿಲ್ಲಾ ಮಟ್ಟದಲ್ಲಿ ಎನರ್ಾಕುಳಂ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಈ ಜಿಲ್ಲೆಯಲ್ಲಿ ಶೇ.99.12 ಮಂದಿ ತೇರ್ಗಡೆಯಾಗಿದ್ದಾರೆ. ಅತ್ಯಂತ ಹಿಂದಿನ ಸಾಲಿನಲ್ಲಿ ವಯನಾಡು ಜಿಲ್ಲೆಯಿದೆ. ವಯನಾಡು ಜಿಲ್ಲೆಯಲ್ಲಿ ಶೇ.93.87 ರಷ್ಟು ವಿದ್ಯಾಥರ್ಿಗಳು ತೇರ್ಗಡೆಯಾಗಿದ್ದಾರೆ. ಮಲಪ್ಪುರಂ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದಿದ್ದಾರೆ. ಈ ಜಿಲ್ಲೆಯಲ್ಲಿ 2435 ಮಂದಿ ತೇರ್ಗಡೆಯಾಗಿದ್ದಾರೆ. ಕೊಲ್ಲಿ ವಲಯದಲ್ಲಿ ಪರೀಕ್ಷೆ ಬರೆದ 544 ಮಂದಿ ಪೈಕಿ 538 ಮಂದಿ ವಿದ್ಯಾಥರ್ಿಗಳು ತೇರ್ಗಡೆಯಾಗಿದ್ದಾರೆ. 517 ಸರಕಾರಿ ಶಾಲೆಗಳಲ್ಲಿ, 659 ಅನುದಾನಿತ ಶಾಲೆಗಳಲ್ಲಿ ಶೇ.100 ಫಲಿತಾಂಶ ಬಂದಿದೆ. ಟಿ.ಎಚ್.ಎಸ್.ಎಸ್.ಸಿ.ಯಲ್ಲಿ 3279 ಮಂದಿ ವಿದ್ಯಾಥರ್ಿಗಳು ಪರೀಕ್ಷೆ ಬರೆದಿದ್ದು 3234 ಮಂದಿ ತೇರ್ಗಡೆಯಾಗಿದ್ದಾರೆ. ಅಂದರೆ ಶೇ. 98.6 ತೇರ್ಗಡೆಯಾಗಿದ್ದಾರೆ. 
    ಮರು ಮೌಲ್ಯ ಮಾಪನಕ್ಕೆ ಮೇ 10 ರ ವರೆಗೆ ಅಜರ್ಿ ಸಲ್ಲಿಸಬಹುದು. ಸೇ ಪರೀಕ್ಷೆ ಮೇ 21 ರಿಂದ 25 ರ ವರೆಗೆ ನಡೆಯಲಿದೆ. ಪ್ಲಸ್ ವನ್ ಪ್ರವೇಶಾತಿ ಪ್ರಕ್ರಿಯೆ ಮೇ 9 ರಿಂದ ಆರಂಭಗೊಳ್ಳಲಿದೆ. ಈ ಬಾರಿ ಉಚಿತ ಅಂಕ ಅಥವಾ ಮೋಡರೇಶನ್ ನೀಡಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries