ಡಾ.ಮಾಧವ ಉಪಾಧ್ಯಾಯ ಬಳ್ಳಪದವು ರವರಿಗೆ ಪೌರ ಸನ್ಮಾನ
ಬದಿಯಡ್ಕ: ಇತ್ತೀಚೆಗೆ ತಿರುಪತಿಯ ಸಂಸ್ಕೃತ ವಿವಿಯ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ ನಾಡಿನ ಹಿರಿಯ ವೇದ, ವೈದಿಕ, ಸಂಗೀತ ವಿದ್ವಾಂಸ ಬಳ್ಳಪದವು ಮಾಧವ ಉಪಾಧ್ಯಾಯರಿಗೆ ಪೌರ ಸನ್ಮಾನ ನಡೆಸಲು ತೀಮರ್ಾನಿಸಲಾಗಿದ್ದು, ಅಭಿನಂದನಾ ಸಮಿತಿ ಕಾಸರಗೋಡು, ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನ ಮಲ್ಲ ಇವರ ನೇತೃತ್ವದಲ್ಲಿ ಪೌರ ಸನ್ಮಾನ, ಮೆರವಣಿಗೆ ರಜತ ಕಿರೀಟ ಸಮರ್ಪಣೆ, ಸನ್ಮಾನ ಸಮಾರಂಭ ಮೇ. 5 ರಂದು ಅಪರಾಹ್ನ 3 ಗಂಟೆಗೆ ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ನಡೆಯಲಿರುವುದು.
ಹಲವಾರು ದೇವಸ್ಥಾನಗಳ, ದೈವಸ್ಥಾನಗಳ, ತರವಾಡು ಮನೆತನಗಳ ತಂತ್ರಿವರ್ಯರಾದ, ವೈದಿಕ ವಿದ್ವಾಂಸ, ಸಂಸ್ಕೃತ, ಕನ್ನಡ ಭಾಷೆಗಳಲ್ಲಿ ಹಲವಾರು ಕೃತಿ ರಚಿಸಿದ ಬಳ್ಳಪದವು ಮಾಧವ ಉಪಾಧ್ಯಾಯರನ್ನು ತಿರುಪತಿ ಸಂಸ್ಕೃತ ಮಹಾವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಇತ್ತೀಚೆಗೆ ಗೌರವಿಸಿತ್ತು. ಈ ಹಿನ್ನೆಲೆಯಲ್ಲಿ ಅಭಿನಂದನಾ ಸಮಾರಂಭ ಉರಿಸಲಾಗಿದೆ ಎಂದು ಬದಿಯಡ್ಕದಲ್ಲಿ ಬುಧವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಸಂಬಂಧಪಟ್ಟವರು ವಿವರ ನೀಡಿದರು.
ಕಾರ್ಯಕ್ರಮಗಳ ವಿವರ :
ಮೇ 5 ರಂದು ಅಪರಾಹ್ನ 3 ಗಂಟೆಗೆ ಚೇಕರ್ೂಡ್ಲು ಶ್ರೀ ಮಹಾವಿಷ್ಣು ದೇವಸ್ಥಾನದಿಂದ ಬದಿಯಡ್ಕ ಶ್ರೀ ಗಣೇಶ್ ಮಂದಿರಕ್ಕೆ ಡಾ.ಮಾಧವ ಉಪಾಧ್ಯಾಯರನ್ನು ಮೆರವಣಿಗೆಯಲ್ಲಿ ಕರೆತರಲಾಗುವುದು. ಈ ಸಂದರ್ಭ ಬದಿಯಡ್ಕದಲ್ಲಿ ಮಘನಪಾಠಿ ಗೋವಿಂದ ಪ್ರಕಾಶ್ ಭಟ್ ಕನ್ನಡಗುಳಿ ಅವರ ನೇತೃತ್ವದಲ್ಲಿ ವೇದಘೋಷದೊಂದಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುವುದು.ಸಂಜೆ 5 ರಿಂದ ಪೌರಸನ್ಮಾನ ಸಮಾರಂಭ ನಡೆಯಲಿದೆ.
ಸಮಾರಂಭದಲ್ಲಿ ಶ್ರೀಮದ್ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ಮತ್ತು ಸನ್ಮಾನ ನಡೆಸುವರು. ಗುರುಸೇವಾ ಧುರೀಣ, ಪದ್ಮಶ್ರೀ ಪುರಸ್ಕೃತ ಶೃಂಗೇರಿ ಶ್ರೀ ಶಾರದಾ ಪೀಠದ ಆಡಳಿತಾಧಿಕಾರಿ ಡಾ. ವಿ.ಆರ್. ಗೌರಿಶಂಕರ್ ಅಧ್ಯಕ್ಷತೆ ವಹಿಸುವರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುಟುಂಬ ಪ್ರಬೋಧನ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅಭಿನಂದನಾ ಭಾಷಣ ಮಾಡುವರು. ವೇದಮೂತರ್ಿ ಶಂಕರ ಉಪಾಧ್ಯಾಯ ಮಣಿಮುಂಡ ಶುಭಾಶಂಸನೆ ಗೈಯ್ಯುವರು.
ಸಂಜೆ 7 ರಿಂದ ಶಾಸ್ತ್ರೀಯ ಸಂಗೀತ ಕಛೇರಿ, ಹಾಡುಗಾರಿಕೆಯಲ್ಲಿ ಕು. ಶ್ರೀರಂಜಿನಿ ಸಂತಾನ ಗೋಪಾಲನ್ ಚೆನ್ನೈ, ವಯಲಿನ್ನಲ್ಲಿ ವೈಭವ್ ರಮಣಿ, ಮೃದಂಗದಲ್ಲಿ ಕೆ.ಯು. ಜಯಚಂದ್ರ ರಾವ್ ಸಹಕರಿಸಲಿದ್ದಾರೆ.
ಬದಿಯಡ್ಕ ಗಣೇಶ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಲ್ಲ ಕ್ಷೇತ್ರದ ಅಡಳಿತ ಮೋಕ್ತೆಸರ ಅನೆಮಜಲು ವಿಷ್ಣು ಭಟ್, ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲಾ ಮುಖ್ಯೋಪಾಧ್ಯಾಯ ಶಂಕರ ಸಾರಡ್ಕ, ಉದ್ಯಮಿ ರಾಜಾರಾಮ ಪೆರ್ಲ, ರಾಮಪ್ರಸಾದ್ ಕಾಸರಗೋಡು, ಹರೀಶ್ ನಾರಂಪಾಡಿ, ರಾಜೇಶ್ ಮಾಸ್ತರ್ ಅಗಲ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.