HEALTH TIPS

No title

                        ಕ್ಷೀರೋತ್ಪಾದನೆಯಲ್ಲಿ  ಸ್ವಾವಲಂಬನೆಯತ್ತ  ಕಾಸರಗೋಡು ಜಿಲ್ಲೆ 
     ಕಾಸರಗೋಡು: ಕಾಸರಗೋಡು ಜಿಲ್ಲೆಯನ್ನು  ಹಾಲುತ್ಪಾದನಾ ವಲಯದಲ್ಲಿ ಸ್ವಾವಲಂಬಿಯನ್ನಾಗಿಸಲಿರುವ ಕಾರ್ಯ ಚಟುವಟಿಕೆಗಳಿಗೆ ಕ್ಷೀರ ಅಭಿವೃದ್ಧಿ ಇಲಾಖೆಯು ರೂಪುರೇಷೆ ತಯಾರಿಸುತ್ತಿದೆ. ಈ ನಿಟ್ಟಿನಲ್ಲಿ  ಹಲವಾರು ಯೋಜನೆಗಳನ್ನು  ರೂಪಿಸಲಾಗಿದೆ.
   ಪ್ರಸ್ತುತ ಆರು ಬ್ಲಾಕ್ಗಳಲ್ಲಾಗಿ 135 ಕ್ಷೀರ ಸಹಕಾರಿ ಸಂಸ್ಥೆಗಳ 8000 ಮಂದಿ ಕೃಷಿಕರಿಂದ ಪ್ರತಿದಿನ 62,000 ಲೀಟರ್ ಹಾಲು ಸಂಗ್ರಹಿಸಿ ವಿತರಿಸಲಾಗುತ್ತಿದೆ. 2017-18ನೇ ಆಥರ್ಿಕ ವರ್ಷದಲ್ಲಿ  ಜಿಲ್ಲೆಯಲ್ಲಿ  ಹೈನುಗಾರಿಕಾ ಕೃಷಿ ವಲಯದಲ್ಲಿ  ಸಾಧನೆ ಮಾಡಿರುವ ಕಾಂಞಂಗಾಡು, ಪರಪ್ಪ , ನೀಲೇಶ್ವರ ಬ್ಲಾಕ್ಗಳನ್ನು  ಡೈರಿ ವಲಯ ಬ್ಲಾಕ್ಗಳಾಗಿ ಘೋಷಿಸಿ ಯೋಜನೆಗಳನ್ನು  ಜಾರಿಗೊಳಿಸಲಾಗುತ್ತಿದೆ.
   ರಾಜ್ಯ ಯೋಜನಾ ವಿಭಾಗದಲ್ಲಿ  3.75 ಕೋಟಿ ರೂ., ಜನಪರ ಯೋಜನೆ ಪ್ರಕಾರ 4.25 ಕೋಟಿ ರೂ. ಗಳನ್ನು  ಜಿಲ್ಲೆಯಲ್ಲಿ  ಕಳೆದ ಆಥರ್ಿಕ ವರ್ಷ ವೆಚ್ಚ  ಮಾಡಲಾಗಿದೆ. ಹಾಲುತ್ಪಾದನಾ ವಲಯದ ನೂತನ ತಿಳುವಳಿಕೆಗಳನ್ನು  ಇಲಾಖೆಯ ನೇತೃತ್ವದಲ್ಲಿ ಕೃಷಿಕರಿಗೆ ನೀಡಲಾಗುತ್ತಿದೆ. ಇದಕ್ಕಾಗಿ ಕ್ಷೀರ ಕೃಷಿಕರ ಸಂಪರ್ಕ ಕಾರ್ಯಕ್ರಮ, ಹಾಲಿನ ಗುಣಮಟ್ಟ  ನಿಯಂತ್ರಣ, ಗ್ರಾಹಕರ ಮುಖಾಮುಖಿ, ಬ್ಲಾಕ್ ಮತ್ತು  ಜಿಲ್ಲಾ  ಕ್ಷೀರ ಕೃಷಿಕ ಸಂಘಗಳಿಗೆ ತಿಳುವಳಿಕಾ ಯಜ್ಞ  ಮೊದಲಾದ ಕಾರ್ಯಕ್ರಮಗಳನ್ನು  ಆಯೋಜಿಸಲಾಗುತ್ತಿದೆ. ಕಳೆದ ಆಥರ್ಿಕ ವರ್ಷ 10,60,000ರೂ. ಇದಕ್ಕಾಗಿ ವಿನಿಯೋಗಿಸಲಾಗಿದೆ.
   ದಿನಂಪ್ರತಿ ಹಾಲು ಸಂಗ್ರಹಿಸಿ ಮಾರಾಟ ಮಾಡುವ ಕ್ಷೀರ ಸಹಕಾರಿ ಸಂಘಗಳ ನವೀಕರಣಗಳಿಗಾಗಿ 67,52,583ರೂ. ವೆಚ್ಚ  ಮಾಡಲಾಗಿದೆ. ಆಹಾರ ಭದ್ರತಾ ಕಾನೂನಿನಲ್ಲಿ  ತಿಳಿಸಿರುವಂತೆ ಕ್ಷೀರ ಸಂಘಕ್ಕೆ ಕಚೇರಿ, ಲ್ಯಾಬ್ ಸೌಕರ್ಯಗಳನ್ನು  ಸಿದ್ಧಪಡಿಸುವುದಕ್ಕೆ 33 ಸಂಘಗಳಿಗಾಗಿ ಹಾಗೂ ಅಗತ್ಯದ ಸಹಾಯಧನ ನೀಡುವ ಯೋಜನೆ ಪ್ರಕಾರ 68 ಸಂಘಗಳಿಗೆ ಮೊತ್ತ  ಮಂಜೂರು ಮಾಡಲಾಗಿದೆ.
   ಎರಡು ಸಂಘಗಳಿಗೆ ಫಾರ್ಮಸರ್್ ಫೆಸಿಲಿಟೇಶನ್ ಕೇಂದ್ರ ನಿಮರ್ಿಸುವುದಕ್ಕೆ ಮತ್ತು  ಮೂರು ಸಂಘಗಳಿಗೆ ಸಂಗ್ರಹ ಕೊಠಡಿ ನಿಮರ್ಿಸಲು ಸಹಾಯಧನ ನೀಡಲಾಗಿದೆ. ಹಾಲು ಕರೆಯುವ ದನಗಳ ಸಂಖ್ಯೆ ಹೆಚ್ಚಿಸುವುದಕ್ಕಾಗಿರುವ ಯೋಜನೆಗಳಿಗೆ ಆದ್ಯತೆ ಕೊಡಲಾಗಿದೆ. ಎಂಎಫ್ಡಿಪಿ ಸೆಗಣಿ ಮಾರಾಟ, ವಮರ್ಿ ಕಂಪೋಸ್ಟ್, ಸೈಲೇಜ್ ಯೂನಿಟ್, ಧಾತು ಲವಣ ಮಿಶ್ರಿತ ವಿತರಣೆ ಎಂಬ ಯೋಜನೆಗಳಿಗಾಗಿ ಒಟ್ಟು  2,03,70,940ರೂ. ಗಳ ಸಹಾಯಧನ ಬಿಡುಗಡೆ ಮಾಡಲಾಗಿದೆ.
   5 ಮತ್ತು  10 ದನಗಳ ಯೂನಿಟ್ ಪ್ರಕಾರ 302 ದನಗಳನ್ನು, 140 ಎತ್ತುಗಳನ್ನು  ಇತರ ರಾಜ್ಯಗಳಿಂದ ಖರೀದಿಸಲಾಗಿದೆ. 99 ಮಂದಿ ಕ್ಷೀರ ಕೃಷಿಕರಿಗೆ ಅಗತ್ಯದ ಸಹಾಯಧನ ಯೋಜನೆ ಪ್ರಕಾರ ಮತ್ತು  50 ಮಂದಿ ಕೃಷಿಕರಿಗೆ ಮಿಲ್ಮಿಂಗ್ ಮೆಶೀನ್ ಖರೀದಿಗೆ ಸಹಾಯ ಹಾಗೂ 42 ಮಂದಿ ಕೃಷಿಕರಿಗೆ ಹಟ್ಟಿ  ನಿಮರ್ಿಸಲಿರುವ ಸಹಾಯಧನ ನೀಡಲಾಗಿದೆ. ಪ್ರಕೃತಿ ವಿಕೋಪ, ಅಸೌಖ್ಯ, ಅಪಘಾತಗಳಿಂದ ಜಾನುವಾರುಗಳು ನಷ್ಟಗೊಂಡ ಕೃಷಿಕರಿಗೆ ಒಟ್ಟು  4,32,000ರೂ. ಆಥರ್ಿಕ ಸಹಾಯ ಒದಗಿಸಲಾಗಿದೆ.
   ಈ ಬಗ್ಗೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕ್ಷೀರ ಅಭಿವೃದ್ದಿ ಇಲಾಖಾ ಅವಲೋಕನ ಮತ್ತು ಯೋಜನಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries