HEALTH TIPS

No title

               ಇಂದು ಕೊಲ್ಲಂಗಾನದಲ್ಲಿ ಕೃತಿ ಬಿಡುಗಡೆ, ಸನ್ಮಾನ, ಬಹುಭಾಷಾ ಕವಿಗೋಷ್ಠಿ
    ಬದಿಯಡ್ಕ: ಯಕ್ಷಮಿತ್ರ ಸಾಂಸ್ಕೃತಿಕ ಸಂಘ ಮಾನ್ಯ ಹಾಗೂ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಇವುಗಳ ಜಂಟಿ ಆಶ್ರಯದಲ್ಲಿ ಕೊಲ್ಲಂಗಾನದ ಅನಂತಶ್ರೀಯಲ್ಲಿ ಮೇ.18 ರಂದು ಶುಕ್ರವಾರ ಸಂಜೆ 7 ರಿಂದ ಪುಸ್ತಕ ಬಿಡುಗಡೆ, ಸನ್ಮಾನ ಹಾಗೂ ಬಹುಭಾಷಾ ಕವಿಗೋಷ್ಠಿ ಆಯೋಜಿಸಲಾಗಿದೆ.
  ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭವನ್ನು ಕೇರಳ ತುಳು ಅಕಾಡೆಮಿ ಅಧ್ಯಕ್ಷ, ಖ್ಯಾತ ಚಿತ್ರ ಕಲಾವಿದ ಪಿ.ಎಸ್.ಪುಣಿಚಿತ್ತಾಯ ಉದ್ಘಾಟಿಸುವರು. ಈ ಸಂದರ್ಭ ಅರ್ತಲೆ ಪರಮೇಶ್ವರ ನಾಯ್ಕ ರಚಿಸಿರುವ ಭಜನಾ ಗೀತೆಗಳ ಸಂಗ್ರಹ "ದೇವಾಮೃತ" ಹಾಗೂ ಕವಯಿತ್ರಿ ಶಾಂತಾ ಕುಂಟಿನಿ ರಚಿಸಿರುವ ಕವನ ಸಂಕಲನ "ಸಮರ್ಪಣೆ" ಕೃತಿಗಳನ್ನು ಮಲ್ಲ ಶ್ರೀದುಗರ್ಾಪರಮೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ಬಿಡುಗಡೆಗೊಳಿಸುವರು. ಸಮಾರಂಭದಲ್ಲಿ ವಿಶ್ರಾಂತ ಕನ್ನಡ ವಿಭಾಗ ಮುಖ್ಯಸ್ಥ ಡಾ.ಹರಿಕೃಷ್ಣ ಭರಣ್ಯ ಹಾಗೂ ಹಿರಿಯ ಭಾಷಾಂತರಕಾರ ಎ.ನರಸಿಂಹ ಭಟ್ ಮತ್ತು ಕನರ್ಾಟಕ ಸರಕಾರದ ಕನ್ನಡ ಜಾಗೃತಿ ಸಮಿತಿ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆಯವರನ್ನು ಗೌರವಿಸಿ ಸನ್ಮಾನಿಸಲಾಗುವುದು. ಪಾಡಿ ಅರಮನೆಯ ಜಯಸಿಂಹ ವರ್ಮ ರಾಜ ಸನ್ಮಾನಿಸುವರು. ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
  ಬಳಿಕ ಹಿರಿಯ ಕವಿ ಶ್ರೀಕೃಷ್ಣಯ್ಯ ಅನಂತಪುರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಲಿದ್ದು, ಹಿರಿಯ ಪತ್ರಕರ್ತ ಮಲಾರು ಜಯರಾಮ ರೈ ಉದ್ಘಾಟಿಸುವರು. ಪ್ರೊ.ಪಿ.ಎನ್.ಮೂಡಿತ್ತಾಯ, ಡಾ.ಯು.ಮಹೇಶ್ವರಿ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ವಿಜಯಾಸುಬ್ರಹ್ಮಣ್ಯ ನಾರಾಯಣಮಂಗಲ, ಸೌಮ್ಯಾ ಪಿ, ವಿಜಯರಾಜ ಪುಣಿಚಿತ್ತಾಯ, ಸುಂದರ ಬಾರಡ್ಕ, ದಿವ್ಯಗಂಗಾ ಪಿ, ರಾಜಶ್ರೀ ಟಿ.ರೈ, ಡಾ.ರತ್ನಾಕರ ಮಲ್ಲಮೂಲೆ, ಬಾಲಕೃಷ್ಣ ಹೊಸಂಗಡಿ, ಬಾಲ ಮಧುರಕಾನನ, ವೆಂಕಟ ಭಟ್ ಎಡನೀರು, ಡಾ.ರಾಧಾಕೃಷ್ಣ ಬೆಳ್ಳೂರು, ಅನ್ನಪೂಣರ್ಾ ಬಜಪೆ, ಪ್ರಸನ್ನಕುಮಾರಿ ಮರ್ದಂಬಯಲು, ಪುರುಷೋತ್ತಮ ಭಟ್ ಕೆ, ಸನ್ನಿಧಿ ಟಿ.ರೈ, ಅಶೋಕ್ ಕುಮಾರ್ ಕಾಸರಗೋಡು(ಕನ್ನಡ ಭಾಷೆ), ಸ್ಟೇನಿ ಲೋಬೋ ಕಲ್ಲಕಟ್ಟ(ಕೊಂಕಣಿ), ಅಕ್ಷತಾ ಭಟ್, ಕೇಶವಪ್ರಸಾದ ಕುಳಮರ್ವ(ಸಂಸ್ಕೃತ), ಕೆ.ವಿ.ಕುಮಾರನ್(ಹಿಂದಿ), ರಾಘವನ್ ಬೆಳ್ಳಿಪ್ಪಾಡಿ, ರವೀಂದ್ರನ್ ಪಾಡಿ, ಎಂ.ಪಿ.ಜಿಲ್ಜಿಲ್, ಪ್ರೇಮಚಂದ್ರನ್ ಚೊಂಬಾಲ(ಮಲೆಯಾಳಂ) ಭಾಷೆಗಳ ಕವಿತೆಗಳನ್ನು ವಾಚಿಸುವರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries