HEALTH TIPS

No title

               ಸಪ್ತಭಾಷಾ ಸಂಗವವೆಂದು ಮಲಯಾಳೀಕರಣದ ಹುನ್ನಾರ-ರಾಜೇಶ್ ಎಸ್.ಉಪ್ಪಂಗಳ
                 ಅಪಾರ ಜನಸ್ತೋಮಗಳ ಮನಸೂರೆಗೊಂಡ ಕನ್ನಡ ಗಾನ 5ನೇ ಕಾರ್ಯಕ್ರಮ
    ಬದಿಯಡ್ಕ: ಭಾಷೆ ಉಳಿದು ಬೆಳೆಯಬೇಕಿದ್ದರೆ ಅದರೊಂದಿಗೆ ಅದರ ಪೂರಕ ಸಂಸ್ಕೃತಿಯೂ ಉಳಿಯಬೇಕು. ಕನ್ನಡದ ನೆಲ ಕಾಸರಗೋಡನ್ನು ಸಪ್ತಭಾಷಾ ಸಂಗಮ ಭೂಮಿ ಎನ್ನುವ ರೀತಿಯಲ್ಲಿ ಪ್ರತಿಬಿಂಬಿಸುವುದು ಮಳಯಾಳೀಕರಣದ ಹುನ್ನಾರವಲ್ಲದೆ ಬೇರೇನೂ ಅಲ್ಲ. ಸಪ್ತ ಮನೆ ಭಾಷೆಯವರು ಆಡುವ ಮಾತು ಇಲ್ಲಿಯ ಜೀವನ ರೀತಿ ಕನ್ನಡವೇ ಆಗಿದೆ ಎಂದು ಶಿಕ್ಷಕ ರಾಜೇಶ್ ಎಸ್.ಉಪ್ಪಂಗಳ ಅಭಿಪ್ರಾಯ ವ್ಯಕ್ತಪಡಿಸಿದರು.
  ಕಾಸರಗೋಡಿನ ಸಾಹಿತ್ತಿಕ-ಸಾಮಾಜಿಕ ಸಂಘಟನೆ ರಂಗಚಿನ್ನಾರಿ ಕಾಸರಗೋಡು ಸಂಸ್ಥೆಯು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಏತಡ್ಕದ ಶ್ರೀದುಗರ್ಾಪರಮೇಶ್ವರಿ ಭಜನಾ ಸಂಘದ ಸಹಕಾರದೊಂದಿಗೆ ಏತಡ್ಕದ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಬಯಲು ರಂಗಮಂದಿರದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡ "ನೆನೆ ನೆನೆ ಕನ್ನಡ ಗಾನ" ಕಾರ್ಯಕ್ರಮದ ಐದನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
   ಕಾಸರಗೋಡಿನ ಗ್ರಾಮೀಣ ಪ್ರದೇಶಗಳ ಕನ್ನಡದ ಸೆಲೆ ಮತ್ತು ಪ್ರತಿಭೆಗಳನ್ನು ಭದ್ರಗೊಳಿಸುವಲ್ಲಿ ರಂಗಚಿನ್ನಾರಿಯ ಅಹನರ್ಿಶಿ ಕಾರ್ಯಯೋಜನೆಗಳು ಸ್ತುತ್ಯರ್ಹವಾದುದು. ಯುವ ಸಮೂಹದ ಮನೋಗತಗಳನ್ನು ಅಥರ್ೈಸಿ ಅವರನ್ನು ಸುದೃಢ ಸಮಾಜ ನಿಮರ್ಾಣದತ್ತ ಸಾಂಸ್ಕೃತಿಕ ನೆಲೆಗಟ್ಟಿನ ನಭದ್ರ ಬುನಾದಿಯೊಂದಿಗೆ ಕಟ್ಟಿಬೆಳೆಸುವ ರಂಗಚಿನ್ನಾರಿಯ ಕಾರ್ಯಚಟುವಟಿಕೆಗಳು ಇನ್ನಷ್ಟು ವಿಸ್ತರಿಸಲಿ ಎಂದು ಅವರು ಈ ಸಂದರ್ಭ ತಿಳಿಸಿದರು.
  ಗಡಿನಾಡಿನ ಕನ್ನಡದ ಗಟ್ಟಿ ನೆಲೆಗಳಲ್ಲಿ ಮುಂಚೂಣಿಯ ಏತಡ್ಕವು ಸಾಹಿತಿ ದಿ. ವಿಚಿತ್ರ ಏತಡ್ಕ ಹಾಗೂ ಡಾ.ವೈ.ಕೆ.ಕೇಶವ ಭಟ್ ರವರ ಕಳಕಳಿಯ ಸೇವೆಗಳು ಸದಾ ಸ್ಮರಣೀಯ. ಕನ್ನಡದ ಹೋರಾಟ ಮತ್ತು ಸಂಸ್ಕೃತಿಯ ಉಳಿಯುವಿಕೆಗೆ ಅವರೀರ್ವರೂ ಎರಡು ಕಿಣ್ಣುಗಳು ಎಂದು ಉಪಸ್ಥಿತರಿದ್ದ ರಂಗಚಿನ್ನಾರಿಯ ನಿದರ್ೇಶಕ, ಖ್ಯಾತ ಚಲನಚಿತ್ರ ನಟ ಕಾಸರಗೋಡು ಚಿನ್ನಾ ಪ್ರಾಸ್ತಾವಿಕವಾಗಿ ಮಾತನಾಡಿ ಏತಡ್ಕ ಪ್ರದೇಶದ ಮಣ್ಣಿನ ಸತ್ವದ ಬಗ್ಗೆ ನೆನಪಿಸಿದರು. ರಂಗಚಿನ್ನಾರಿಯ ಒಂದೊಂದು ಸಾಮಸ್ಕೃತಿಕ ಆಂದೋಲನಗಳು ವಿನೂತನ ಮೈಲುಗಲ್ಲುಗಳನ್ನು ಸ್ಥಾಪಿಸಿದೆ. ಎಳೆಯ ಮನಸ್ಸುಗಳು ವಿಚಲಿತರಾಗದೆ ಕನ್ನಡ ಭಾಷೆ, ಸಂಸ್ಕೃತಿಗಳ ಒಳನೋಟಗಳನ್ನು ಅನುಭವಿಸುವಂತಾಗುವುದು ರಂಗಚಿನ್ನಾರಿಯ ಬಹುಮುಖೀ ಕಾರ್ಯಚಟುವಟಿಕೆಗಳ ಲಕ್ಷ್ಯವಾಗಿದೆ. ಇದು ಭಾಷಾಭಿಮಾನವನ್ನು ಉದ್ದೀಪಿಸುತ್ತದೆ ಎಂದು ಅವರು ತಿಳಿಸಿದರು.
  ಏತಡ್ಕ ಶ್ರೀದುಗರ್ಾಪರಮೇಶ್ವರಿ ಭಜನಾ ಸಂಘದ ಅಧ್ಯಕ್ಷ ಕೆ.ಕೆ. ಬಾಲಕೃಷ್ಣ ಸಮಾರಂಭವನ್ನು ದೀಪಬೆಳಗಿಸಿ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ವೈ.ವೆಂಕಟರಮಣ ಭಟ್ ಅಧ್ಯಕ್ಷತೆ ವಹಿಸಿದ್ದರು. ರಂಗಚಿನ್ನಾರಿಯ ಸಹ ನಿದರ್ೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ ಉಪಸ್ಥಿತರಿದ್ದರು. ಈ ಸಂದರ್ಭ ನೆನೆ ನೆನೆ ಕನ್ನಡ ಗಾನ ಕಾರ್ಯಕ್ರಮ ನಡೆಸಿಕೊಡುವ ರವೀಂದ್ರ ಪ್ರಭು, ಸೀಮಾ ರಾಯ್ಕರ್ ಹಾಗೂ ಕಿಶೋರ್ ಪೆರ್ಲರನ್ನು ಅಭಿನಂದಿಸಲಾಯಿತು. ಮಹೇಶ ಏತಡ್ಕ ಸ್ವಾಗತಿಸಿ, ಉಮೇಶ ಏತಡ್ಕ ವಂದಿಸಿದರು. ನವೀನ್ ಕುಮಾರ್ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು. 
   ಬಳಿಕ ಪ್ರಸಿದ್ದ ಗಾಯಕ ರವೀಂದ್ರ ಪ್ರಭು, ಸೀಮಾ ರಾಯ್ಕರ್ ಹಾಗೂ ಕಿಶೋರ್ ಪೆರ್ಲರಿಂದ ಅತ್ಯಪೂರ್ವ ಶೈಲಿಗಳಲ್ಲಿ  `ನೆನೆ ನೆನೆ ಕನ್ನಡ ಗಾನ' ಎಂಬ ಭಕ್ತಿ ಭಾವ ಜನಪದಗೀತೆಗಳ ಝೇಂಕಾರ ಹಾಡುಗಳನ್ನು ಪ್ರಸ್ತುತಪಡಿಸಿ ಪ್ರೇಕ್ಷಕರ ಮನಸೂರೆಗೊಳಿಸಿದರು. ಖ್ಯಾತ ಹಿನ್ನಲೆ ಸಂಗೀತಗಾರರಾದ ಪುರುಷೋತ್ತಮ ಕೊಪ್ಪಳ್ ಕೀಬೋಡರ್ಿನಲ್ಲಿ, ರಾಜೇಶ್ ಭಾಗವತ್ ರಿದಂಪಾಡ್ನಲ್ಲಿ ಹಾಗೂ ತಬಲಾದಲ್ಲಿ ಅಭಿಜಿತ್ ಶೆಣೈ ಸಹಕರಿಸಿದರು.
   



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries