HEALTH TIPS

No title

         ಬೆಚ್ಚಿಬೀಳಿಸುವ ಮಾಫಿಯಾ ಜಾಲ
    ಬಳ್ಳೂರಿನ ಮತ್ತೊಬ್ಬನೂ ಖತ್ತರ್ ನಲ್ಲಿ ಜೈಲುಪಾಲು
  ಕುಂಬಳೆ: ಉದ್ಯೋಗಕ್ಕಾಗಿ ಖತ್ತರ್ಗೆ ತೆರಳಿದ ಪುತ್ರ ಹಾಗೂ ಸ್ನೇಹಿತರನ್ನು ಗಾಂಜಾ ಪ್ರಕರಣದಲ್ಲಿ ಸಿಲುಕಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. ಘಟನೆಗೆ ಸಂಬಂಧಿಸಿ ಮಂಜೇಶ್ವರ ಪೋಲೀಸರಿಗೆ ದೂರು ನೀಡಿದ ಕುಟುಂಬ ಪತ್ರಿಕಾಗೋಷ್ಠಿ ನಡೆಸಿ ಘಟನೆಯ ಬಗ್ಗೆ ಬೆಚ್ಚಿಬೀಳಿಸುವ ಮಾಹಿತಿಯನ್ನು ಬಹಿರಂಗಪಡಿಸಿದೆ.
  ಪೈವಳಿಕೆ ಗ್ರಾ.ಪಂ. ನ ಗಡಿ ಗ್ರಾಮ ಬಳ್ಳೂರಿನ ಮೊಹಮ್ಮದ್ ಎಂಬವರ ಪುತ್ರ ರಜಾಕ್(24) ಹಲವು ವರ್ಷಗಳಿಂದ ಖತ್ತರ್ ನಲ್ಲಿ ದುಡಿಯುತ್ತಿದ್ದು, ಎರಡು ವರ್ಷಗಳ ಹಿಂದೆ ಊರಿಗೆ ಆಗಮಿಸಿ ಮತ್ತೆ ತೆರಳಿದ್ದರು. ಖತ್ತರ್ ನ ವಿವಿಧ ವಲಯಗಳಲ್ಲಿ ಸಾಮಾನ್ಯ ಕಾಮರ್ಿಕನಾಗಿ ದುಡಿಯುತ್ತಿದ್ದ ರಜಾಕ್ ಎರಡು ವಾರಗಳ ಹಿಂದೆ ಮೆಸ್ ಒಂದರಲ್ಲಿ ಅಡುಗೆ ಸಹಾಯಕರಾಗಿ ಕೆಲಸಕ್ಕೆ ಸೇರಿದ್ದರು. ಈ ಮಧ್ಯೆ ವಾರದ ಹಿಂದೆ ವಿಶ್ರಾಂತಿ ಕೊಠಡಿಯಲ್ಲಿ ಸಹ ಕಾಮರ್ಿಕರೊಂದಿಗೆ ಕ್ರಿಕೆಟ್ ವೀಕ್ಷಿಸುತ್ತಿದ್ದ ವೇಳೆ ಖತ್ತರ್ ಪೋಲೀಸರು ಧಾಳಿ ನಡೆಸಿದ್ದು, ಈ ವೇಳೆ ಕೊಠಡಿಯೊಳಗೆ ಗಾಂಜಾ ಪೊಟ್ಟಣಗಳು ಲಭಿಸಿದ್ದರಿಂದ ಕೊಠಡಿಯೊಳಗಿದ್ದವರನ್ನೆಲ್ಲ ಪೋಲೀಸರು ವಶಕ್ಕೆ ಪಡೆದು ಬಂಧಿಸಿ ಗೌಪ್ಯ ಸ್ಥಳದಲ್ಲಿ ವಿಚಾರಿಸುತ್ತಿದ್ದಾರೆಂದು ರಜಾಕ್ರ ತಂದೆ ಮೊಹಮ್ಮದ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿರುವರು.
  ಖತ್ತರ್ ಪೋಲೀಸರು ಕೊಠಡಿಯಲ್ಲಿದ್ದ 20 ರಷ್ಟು ಮಂದಿಗಳನ್ನು ಬಂದಿಸಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಈ ಪೈಕಿ ಮೂವರು ನಿರಪರಾಧಿಗಳೆಂದು ಬಿಡುಗಡೆಗೊಳಿಸಿರುವ ಬಗ್ಗೆ ತಿಳಿದುಬಂದಿದೆ. ತನ್ನ ಪುತ್ರ ರಜಾಕ್ ನಿರಪರಾಧಿಯಾಗಿದ್ದು, ಕೂಡಲೇ ಅವನನ್ನು ಭಾರತಕ್ಕೆ ಕರೆತರಲು ಮಂಜೇಶ್ವರ ಪೋಲೀಸ್, ಜಿಲ್ಲಾ ಪೋಲೀಸ್ ವರಿಷ್ಠ, ಸಂಸದರು, ಮುಖ್ಯಮಂತ್ರಿ ಸಹಿತ ಉನ್ನತ ಅಧಿಕಾರಿಗಳಿಗೆ ಮನವಿ ನೀಡಿರುವುದಾಗಿ ಅವರು ತಿಳಿಸಿದರರು. ಗಲ್ಫ್ ನಲ್ಲಿ ದುಡಿಯುತ್ತಿರುವ ಯುವ ಸಮೂಹವನ್ನು ಆಮಿಷಗಳ ಮೂಲಕ ಬೆದರಿಕೆಯೊಡ್ಡಿ ದಾರಿತಪ್ಪಿಸುವ ಮಾಫಿಯಾಗಳನ್ನು ನಿಯಂತ್ರಿಸಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
   ಸುದ್ದಿಗೋಷ್ಠಿಯಲ್ಲಿ ಅಬ್ಬಾಸ್ ಬಳ್ಳೂರು, ಮೊಹಮ್ಮದ್ ಕುಂಞಿ ಬಳ್ಳೂರು, ಸತ್ತಾರ್ ಬಳ್ಳೂರು, ಮುಸ್ತಾಕ್ ಉಪಸ್ಥಿತರಿದ್ದರು.
    ಭಾರೀ ಮಾಫಿಯಾ ಕೈವಾಡ ಶಂಕೆ:
  ಕಳೆದೊಂದು ವಾರದಿಂದ ಖತ್ತರ್ ಕೇಂದ್ರೀಕರಿಸಿ ಬಂಧಿತರಾದ ಮಂಜೇಶ್ವರ ಠಾಣಾ ವ್ಯಾಪ್ತಿಯ ವಿವಿಧ ಪ್ರದೇಶಗಳ ಯುವಕರ ಬಂಧನವು ಊರಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದ್ದು, ಹಲವು ಖತ್ತರ್ ವಾಸಿಗಳ ಕುಟುಂಬಸ್ಥರು ತಮ್ಮವರ ಸಂಪರ್ಕಕ್ಕಾಗಿ ಪ್ರಯತ್ನಿಸುತ್ತಿದ್ದಾರೆ.
   ಈ ಮಧ್ಯೆ ಬಳ್ಳೂರು ನಿವಾಸಿಯಾಗಿರುವ ಅಬು ಎಂಬ ಸಾಮಾನ್ಯ ವ್ಯಕ್ತಿ ಕಳೆದ ಕೆಲವು ವರ್ಷಗಳಿಂದ ದಿಢೀರ್ ಶ್ರೀಮಂತನಾಗಿದ್ದು, ಖತ್ತರ್ವ ನ ಘಟನಾವಳಿಗಳ ಬಳಿಕ ಆತ ತಲೆಮರೆಸಿಕೊಂಡಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಅಬು ಎಂಬ ವ್ಯಕ್ತಿ ಭಾರತದಿಂದ ಗಾಂಜಾವನ್ನು ಖತ್ತರ್ ಗೆ ತಲಪಿಸಿ ಅಲ್ಲಿ ಅದರ ವಿಲೇವಾರಿಯನ್ನು ಅಲ್ಲಿ ದುಡಿಯುವ ಯುವಕರನ್ನು ಬಳಸಿ ಮಾಡಿತ್ತಿರಬಹುದೇ ಎಂಬ ಶಂಕೆ ಮೂಡಿದೆ. ಈ ಮಧ್ಯೆ ಖತ್ತರ್ ನಲ್ಲಿ ಪೋಲೀಸರು ಧಾಳಿ ನಡೆಸಿದ ಯುವಕರಿದ್ದ ಸ್ಥಳವು ತಿರುವನಂತಪುರ ನಿವಾಸಿಯ ಮಾಲಕತ್ವದಲ್ಲಿರುವ ವಾಸಸ್ಥಳವಾಗಿದ್ದು, ಕೇರಳದ ಈ ನಂಟು ಹಲವು ಸಂಶಯಗಳಿಗೆ ಕಾರಣವಾಗಿದೆ.

   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries