ಗ್ರಾಮ ಪಂಚಾಯತು ಅಧ್ಯಕ್ಷರ ನೇತೃತ್ವದಲ್ಲಿ ಬಸ್ ತಂಗುದಾಣ ಶುಚೀಕರಣ
ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತು ಸ್ವರ್ಗ ಸಮೀಪದ ಕೋಟೆ ಎಂಬಲ್ಲಿ ವರ್ಷಗಳ ಹಿಂದೆ ಬಸ್ಸು ತಂಗು ನಿಲ್ದಾಣಕ್ಕೆ ಭಾರೀ ಪ್ರಮಾಣದಲ್ಲಿ ಮಣ್ಣು ಜರಿದು ಬಿದ್ದಿದ್ದು ಕಾಡು ಪೊದೆಗಳಿಂದ ಆವೃತ್ತವಾಗಿ ಉಪಯೋಗ ಶೂನ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಬವಣೆ ಮನಗಂಡು ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷೆ ರೂಪವಾಣಿ ಆರ್ ಭಟ್ ಅವರ ನೇತೃತ್ವದಲ್ಲಿ ಕುಟುಂಬಶ್ರೀ ಕಾರ್ಯಕತರ್ೆಯರು, ಆಶಾ ಕಾರ್ಯಕತರ್ೆಯರು, ಉದ್ಯೋಗ ಖಾತರಿ ಯೋಜನೆಯ ಸದಸ್ಯೆಯರು ಸಂಯುಕ್ತವಾಗಿ ಇತ್ತೀಚೆಗೆ ತೆರವು ಕಾಯರ್ಾಚರಣೆ ಕೈಗೊಂಡು ನಿಲ್ದಾಣವನ್ನು ಉಪಯೋಗ ಅರ್ಹವಾಗುವಂತೆ ಶುಚೀಕರಿಸಿದರು. ಮಹಿಳೆಯರೇ ದಿನ ಪೂತರ್ಿ ಶ್ರಮಿಸಿ ಬಸ್ಸು ತಂಗುದಾಣವನ್ನು ಉಪಯೋಗಪ್ರದವಾಗುವಂತೆ ಪರಿವತರ್ಿಸಿ ಮಾದರಿಯಾದುದು ಸಾರ್ವಜನಿಕರ ಶ್ಲಾಘನೆ ಗೆ ಪಾತ್ರವಾಯಿತು. ಗ್ರಾಮ ಪಂಚಾಯತು ಅಧ್ಯಕ್ಷೆ ರೂಪವಾಣಿ ಆರ್ ಭಟ್, ಕುಟುಂಬಶ್ರೀಯ ಸಿಡಿಎಸ್ ಸದಸ್ಯೆ ಉದಯ ಕುಮಾರಿ, ಆಶಾ ಕಾರ್ಯಕತರ್ೆ ಪುಷ್ಪಾವತಿ, ಕುಟುಂಬಶ್ರೀ ಎಡಿಎಸ್ ಸದಸ್ಯೆ ಸಂಧ್ಯಾ ಕೋಟೆ , ಲೀಲಾ ಸಹಿತ ಹತ್ತರಷ್ಟು ಸದಸ್ಯೆಯರು ಶ್ರಮದಾನದಲ್ಲಿ ಪಾಲ್ಗೊಂಡರು.