HEALTH TIPS

No title

           ಸರಕಾರದ ದ್ವಿತೀಯ ವಾಷರ್ಿಕೋತ್ಸವದಲ್ಲಿ  ಪರಿಸರಸ್ನೇಹಿ ಹಸಿರು ಕೇರಳ ಮಿಷನ್
    ಕಾಸರಗೋಡು: ಕೇರಳ ಸರಕಾರದ ಹಸಿರು ಕೇರಳ ಮಿಷನ್ ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಜನರಿಗೆ ಹೆಚ್ಚು  ಆಕರ್ಷಣೀಯವಾಗಿ ಪರಿಣಮಿಸಿದೆ. ಸ್ಥಳೀಯಾಡಳಿತ ಸಂಸ್ಥೆಗಳ ಸಹಕಾರದೊಂದಿಗೆ ಶುಚಿತ್ವಪೂರ್ಣವಾದ ಕೇರಳವನ್ನು  ಸೃಷ್ಟಿಸುವ ಉದ್ದೇಶದೊಂದಿಗೆ ಹಸಿರು ಕೇರಳ ಮಿಷನ್ ಎಂಬ ಈ ಸಮಗ್ರ ಕ್ರಿಯಾ ಯೋಜನೆಯನ್ನು  ಆರಂಭಿಸಲಾಗಿದೆ.
   ರಾಜ್ಯ ಸರಕಾರದ ದ್ವಿತೀಯ ವಾಷರ್ಿಕೋತ್ಸವದ ಅಂಗವಾಗಿ ಕಾಂಞಂಗಾಡು ಆಲಾಮಿಪಳ್ಳಿಯಲ್ಲಿ  ನಡೆಯುತ್ತಿರುವ ಉತ್ಪನ್ನ  ಪ್ರದರ್ಶನದಲ್ಲಿ  ಹಸಿರು ಕೇರಳ ಯೋಜನೆಯ ಕಾಯರ್ಾಚರಣೆಗಳನ್ನು  ವಿವರಿಸಲಾಗುತ್ತಿದೆ. ವ್ಯತ್ಯಸ್ತ  ಉತ್ಪನ್ನಗಳನ್ನು  ಪ್ರದರ್ಶನಕ್ಕೆ ಇರಿಸಲಾಗಿದೆ. ಇದು ಸಾರ್ವಜನಿಕರನ್ನು  ಹೆಚ್ಚು  ಮನಸೂರೆಗೊಳಿಸಿದೆ.
   ಗ್ರೀನ್ ಪ್ರೋಟೋಕಾಲ್ ಪಾಲಿಸಿ ಸಂಪೂರ್ಣವಾಗಿ ಪ್ಲಾಸ್ಟಿಕ್ ವಿಮುಕ್ತವಾಗಿ ಪ್ರದರ್ಶನದಲ್ಲಿ  ಹಸಿರು ಕೇರಳ ಮಿಷನ್ ಸ್ಟಾಲ್ ವ್ಯವಸ್ಥೆಗೊಳಿಸಲಾಗಿದೆ. ತೆಂಗಿನಿಂದ ತಯಾರಿಸಿದ ವಿಭಿನ್ನ  ಕರಕುಶಲ ವಸ್ತುಗಳು ಸ್ಟಾಲ್ನ ಪ್ರತ್ಯೇಕ ಆಕರ್ಷಣೆಯಾಗಿದೆ. ಅಲ್ಲದೆ ಗ್ರಾಮೀಣ ಶೈಲಿಯಲ್ಲಿಯೇ ಇಲ್ಲಿನ ಪ್ರದರ್ಶನ ಎದ್ದು  ಕಾಣುತ್ತಿದ್ದು, ಜನಪ್ರೀತಿಗೆ ಪಾತ್ರವಾಗಿದೆ.
   ಸಾವಯವ ಕೃಷಿ ಪ್ರಾಧಾನ್ಯತೆಯನ್ನು  ತಿಳಿಯಪಡಿಸಿ ಬೇಡಡ್ಕ ಮತ್ತು  ಅಜಾನೂರು ಗ್ರಾಮ ಪಂಚಾಯತ್ಗಳು ಸಾವಯವ ವಿಧಾನದಲ್ಲಿ  ಕೃಷಿ ಮಾಡಿದ ಬೇಡಡ್ಕ ಅಕ್ಕಿ ಹಾಗೂ ಅಮೃತ ಅಕ್ಕಿಯನ್ನು  ಇಲ್ಲಿ  ಪ್ರದರ್ಶನದಲ್ಲಿರಿಸಲಾಗಿದೆ. ಅಗತ್ಯವಿದ್ದವರಿಗೆ ಮುಂಚಿತವಾಗಿ ಆರ್ಡರ್ ನೀಡಲಿರುವ ಸೌಕರ್ಯವನ್ನು  ಸ್ಟಾಲ್ನಲ್ಲಿ  ಕಲ್ಪಿಸಲಾಗಿದೆ. ಇದಕ್ಕಾಗಿ ತಜ್ಞರ ತಂಡವೊಂದು ಕಾರ್ಯನಿರ್ವಹಿಸುತ್ತಿದೆ.
   ಮಳೆಗಾಲದ ಪೂರ್ವ`ಾವಿಯಾಗಿ ಮಳೆನೀರು ಸಂರಕ್ಷಿಸುವ ಉದ್ದೇಶದೊಂದಿಗೆ ಬಾವಿ ಮರುಪೂರಣ (ಓಪನ್ವೆಲ್ ರಿಚಾಜರ್ಿಂಗ್) ಮಾದರಿಯನ್ನು  ಸ್ಟಾಲ್ನಲ್ಲಿ  ವ್ಯವಸ್ಥೆಗೊಳಿಸಲಾಗಿದೆ. ತೆರೆದ ಬಾವಿ ಮತ್ತು  ಕೊಳವೆ ಬಾವಿಗಳಿಗೆ ಮಳೆನೀರನ್ನು  ಶುದ್ಧೀಕರಿಸಿ ಅಳವಡಿಸುವುದು ಹೇಗೆಂಬುದನ್ನು  ಈ ಸ್ಟಾಲ್ನಲ್ಲಿ  ಜನರಿಗೆ ವಿವರಿಸಿ ಹೇಳಲಾಗುತ್ತಿದೆ. ಇದು ಕೂಡ ಜನರನ್ನು  ತನ್ನತ್ತ  ಸೆಳೆಯುತ್ತಿದೆ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries