HEALTH TIPS

No title

          ನಿಪಾ ವೈರಸ್ ಹಾವಳಿ, ಜಿಲ್ಲೆಯಲ್ಲೂ ಆತಂಕ
              ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮ
  ಕುಂಬಳೆ:    ಕಾಸರಗೋಡು: ಡೆಂಗ್ಯೂ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿರುವ ಜಿಲ್ಲೆಯಲ್ಲಿ ನಿಪಾ ವೈರಸ್ ಭೀತಿಯು ಆವರಿಸಿದೆ. ಮಲಬಾರು ಪ್ರಾಂತ್ಯದ ಕಲ್ಲಿಕೋಟೆ, ಮಲಪ್ಪುರಂ ಜಿಲ್ಲೆಗಳಲ್ಲಿ ಹರಡಿರುವ ನಿಪಾ ವೈರಸ್ ಸಾಂಕ್ರಾಮಿಕಕ್ಕೆ ಒಟ್ಟು 16 ಮಂದಿ ಅಸುನೀಗಿದ್ದು, ಹಲವು ಮಂದಿ ಜ್ವರ ಬಾಧೆಗೆ ಒಳಗಾಗಿ ಆಸ್ಪತ್ರೆ ದಾಖಲಾಗಿದ್ದಾರೆ. ಪುಣೆ ಕೇಂದ್ರೀಕೃತ ರಾಷ್ಟ್ರೀಯ ವೈರಾಣು ಪತ್ತೆ ಸಂಸ್ಥೆಯು ರೋಗಿಗಳ ರಕ್ತ ಹಾಗೂ ಮೆದುಳಿನ ದ್ರವಾಂಶವನ್ನು ಪರಿಶೋಧನೆ ಕೊಂಡೊಯ್ದಿದ್ದು, ನಿಪಾ ಸಾಂಕ್ರಾಮಿಕ ವೈರಸ್ ಇರುವುದಾಗಿ ಪತ್ತೆ ಹಚ್ಚಿದೆ. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಹೆಚ್ಒ) ಪ್ರಕಾರ ನಿಪಾ ಸಾಂಕ್ರಾಮಿಕವು ಪ್ರಾಣಿ ಮತ್ತು ಪಕ್ಷಿ ಮೂಲದಿಂದ ಮುನುಷ್ಯನಿಗೆ ಹರಡುವ ಕಾಯಿಲೆಯಾಗಿದೆ. ಜ್ವರ ಸಹಿತ ಕೀಲು ಹಾಗೂ ಮೂಳೆ ಸಂದುಗಳಲ್ಲಿ ವಿಪರೀತ ನೋವು ಬಾಧಿಸುವಿಕೆ ಈ ರೋಗದ ಲಕ್ಷಣವಾಗಿದೆ. ಸಾಮಾನ್ಯವಾಗಿ ಹಣ್ಣು ಭಕ್ಷಕ ಬಾವಲಿಗಳು ನಿಪಾ ವೈರಸ್ ಪಸರಿಸುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಕಲ್ಲಿಕೋಟೆ ಜಿಲ್ಲೆಯ ಪೆರಂಬ್ರಾ ಹಳ್ಳಿಯಿಂದ ಹಬ್ಬಿರುವ ನಿಪಾ ವೈರಾಣು ಪ್ರಸ್ತುತ ಎರಡು ಜಿಲ್ಲೆಗಳಲ್ಲಿ ವ್ಯಾಪಿಸಿದ್ದು ಹಲವು ಮಂದಿ ಜ್ವರಬಾಧೆಯಿಂದ ಆಸ್ಪತ್ರೆ ದಾಖಲಾಗಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲೂ ನಿಪಾ ವೈರಾಣು ಹರಡದಂತೆ ಆರೋಗ್ಯ ಇಲಾಖೆಯ ಮೂಲಕ ಮುನ್ನಚ್ಚೆರಿಕಾ ಕ್ರಮಗಳನ್ನು ಅನುಸರಿಸುವಂತೆ ಕೇಳಿಕೊಳ್ಳಲಾಗಿದೆ.
    ರಾಜ್ಯ ಆರೋಗ್ಯ ಇಲಾಖೆಯಿಂದ ನಿಪಾ ವೈರಾಣು ಹರಡದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಜನ ಸಾಮಾನ್ಯರು ಆತಂಕ ಪಡುವ ಅವಶ್ಯವಿಲ್ಲ, ನುರಿತ ವೈದ್ಯರ ಮೂಲಕ ಆಸ್ಪತ್ರೆ ದಾಖಲಾದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು. -ಕೆ.ಕೆ ಶೈಲಜಾ, ಕೇರಳ ಆರೋಗ್ಯ ಸಚಿವೆ.
       ಕೇಂದ್ರ ವೈದ್ಯರ ತಂಡ
  ರಾಜ್ಯ ಸರಕಾರದ ಆರೋಗ್ಯ ಇಲಾಖೆಯ ಮೂಲಕ ರೋಗ ಹರಡದಂತೆ ಮುಂಜಾಗೃತಾ ಕ್ರಮಗಳನ್ನು ಅನುಸರಿಸಲಾಗಿದ್ದು, ಆರೋಗ್ಯ ಸಚಿವೆ, ಕಾಮರ್ಿಕ ಸಚಿವ ಟಿ.ಪಿ ರಾಮಕೃಷ್ಣನ್ ಆರೋಗ್ಯ ಅಧಿಕಾರಿಗಳ ಜೊತೆ ಚಚರ್ಿಸಿದ್ದಾರೆ. ರಾಷ್ಟ್ರೀಯ ರೋಗ ತಡೆ ಕೇಂದ್ರ(ಎನ್ಸಿಪಿಸಿ) ಅಧಿಕಾರಿಗಳು ಕಲ್ಲಿಕೋಟೆ ತಲುಪಿದ್ದು, ನಿಪಾ ವೈರಾಣುವನ್ನು ಖಾತ್ರಿಗೊಳಿಸಿದ್ದು, ಮುಂಜಾಗ್ರತಾ ಸಭೆಯ ಮೂಲಕ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸಿದ್ದಾರೆ. ರಾಜ್ಯದಲ್ಲಿ ಎಚ್ಚರ ಪಾಲಿಸಲು ತಿಳಿಸಲಾಗಿದ್ದು, ನಿಪಾ ಬಾಧಿತರ ಸಹಾಯಕ್ಕಾಗಿ ಎರಡು ಕಂಟ್ರೋಲ್ ರೂಂಗಳನ್ನು ತೆರೆಯಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಹಿತ ಕಲ್ಲಿಕೋಟೆ ಸಂಸದ ಎಂ.ಕೆ ರಾಘವನ್ ನಿಪಾ ವೈರಾಣು ಸಾಂಕ್ರಾಮಿಕ ಹತೋಟಿಗೆ ತರಲು ಕೇಂದ್ರಕ್ಕೆ ಪತ್ರ ಬರೆದಿದ್ದರು.
  ನಿಪಾ ವೈರಾಣುವನ್ನು ಮಲೇಷಿಯಾದಲ್ಲಿ ಮೊದಲ ಬಾರಿಗೆ ಪತ್ತೆ ಹಚ್ಚಲಾಗಿತ್ತು, 1998 ರಲ್ಲಿ ಕಾಮ್ಪಂಗ್ ಸುಂಗೈ ನಿಪಾದಲ್ಲಿ ಹರಡಿದ ರೋಗಾಣು ಸಾಕು ಹಂದಿಗಳ ಮೂಲಕ ಹರಡಿತ್ತು, 2004 ರಲ್ಲಿ ಬಾಂಗ್ಲಾದೇಶದಲ್ಲೂ ಸಾಂಕ್ರಾಮಿಕವು ನಿಪಾ ವೈರಾಣು ಹೊಂದಿದ್ದ ಖಜರ್ೂರದ ಹಣ್ಣಿನ ಮೂಲಕ ಹರಡಿತ್ತು,
   ಸಮೀಪವತರ್ಿ ಮಲಬಾರು ಪ್ರದೇಶದಲ್ಲ್ಲಿ ನಿಪಾ ವೈರಾಣು ಸಾಂಕ್ರಾಮಿಕ ಹರಡಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಮುಂಜಾಗ್ರತೆ ವಹಿಸಲಾಗಿದೆ. ತಲೆಶೂಲೆ, ಗಂಟು ನೋವು ಜ್ವರ ಬಾಧಿಸಿದಲ್ಲಿ ನಿರ್ಲಕ್ಷಿಸದೆ ಕೂಡಲೇ ಸಮೀಪದ ತಜ್ಞ ವೈದ್ಯರನ್ನು ಸಂಪಕರ್ಿಸಿ ರೋಗ ಖಾತ್ರಿ ಮಾಡಿಸಿಕೊಂಡು ಜೌಷಧಿಯನ್ನು ಪಡೆದುಕೊಳ್ಳುವಂತೆ ಕಾಸರಗೋಡು ಜಿಲ್ಲಾಧಿಕಾರಿ ಕೆ.ಜೀವನ್ ಬಾಬು ತಿಳಿಸಿದ್ದಾರೆ. ಡೆಂಗ್ಯೂ ಸಾಂಕ್ರಾಮಿಕ ಹತೋಟಿಗೆ ತರಲು ಪರಿಸರ ನೈರ್ಮಲ್ಯ, ಶುಚಿತ್ವಕ್ಕೂ ನಾಗರಿಕರು ಹೆಚ್ಚಿನ ಗಮನ ಹರಿಸಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
  ಮುಂಜಾಗ್ರತಾ ನಿಯಮಗಳು
-ನಿಪಾ ಬಾಧೆಗೆ ತುತ್ತಾದವರ ಜೊತೆಯಲ್ಲಿರುವವರಿಗೆ ರೋಗಾಣು ಹರಡುವ ಸಾಧ್ಯತೆಗಳು ಹೆಚ್ಚು
-ಜ್ವರ, ತಲೆನೋವು, ಸುಸ್ತು ಮತ್ತು ವರ್ತನೆಯಲ್ಲಿ ವ್ಯತ್ಯಾಸಗಳು ರೋಗದ ಲಕ್ಷಣ
-ಇಂತಹ ಲಕ್ಷಣಗಳು ಹೊಂದಿರುವವರು ಕೂಡಲೇ ಆಸ್ಪತ್ರೆ ದಾಖಲಾಗಬೇಕು
-ದೇಹದಿಂದ ಹೊರಬರುವ ದ್ರವ ಪದಾರ್ಥಗಳ ಮೂಲಕ ರೋಗ ಹರಡುತ್ತದೆ
-ಸಮೀಪವತರ್ಿಗಳು ಮುಖಪರದೆಯನ್ನು ಉಪಯೋಗಿಸತಕ್ಕದ್ದು ಮಾತ್ರವಲ್ಲದೆ ಕೈಗಳನ್ನು ಸ್ವಚ್ಛವಾಗಿ ಸಾಬೂನಿಂದ ತೊಳೆಯಬೇಕು
-ಪಕ್ಷಿಗಳು ಮತ್ತು ಬಾವಲಿಗಳಿಂದ ಕಚ್ಚಲ್ಪಟ್ಟ ಹಣ್ಣುಗಳನ್ನು ಸೇವಿಸಬೇಡಿ
-ಮಾವಿನ ಹಣ್ಣು ಸಹಿತ ಇತರೆ ಹಣ್ಣುಗಳನ್ನು ತೊಳೆದು ಸೇವಿಸಿ
-ಬಾವಲಿಗಳು ಹೆಚ್ಚಿರುವ ಪ್ರದೇಶದಲ್ಲಿ ಸಂಗ್ರಹಿಸಲ್ಪಡುವ ಶೇಂದಿಯನ್ನು ಹೀರಬಾರದು.
     

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries