HEALTH TIPS

No title

                ಸರಕಾರದ ವಾಷರ್ಿಕ : ಗಮನ ಸೆಳೆದ ಶೋಭಾಯಾತ್ರೆ
    ಕಾಸರಗೋಡು: ರಾಜ್ಯ ಸರಕಾರದ ದ್ವಿತೀಯ ವಾಷರ್ಿಕೋತ್ಸವದ ಪ್ರಯುಕ್ತ  ಕಾಂಞಂಗಾಡಿನಲ್ಲಿ  ಆಯೋಜಿಸಲಾಗಿದ್ದ  ಕಾಸರಗೋಡು ಜಿಲ್ಲಾ  ಮಟ್ಟದ ಸಮಾರಂಭದ ಅಂಗವಾಗಿ ಸಾಂಸ್ಕೃತಿಕ ಶೋಭಾಯತ್ರೆ ಅದ್ದೂರಿಯಾಗಿ ನಡೆಯಿತು.
   ಜಿಲ್ಲೆಯ ವಿವಿಧ ಜನಪ್ರತಿನಿಧಿಗಳು, ನಾಗರಿಕರು ಸಹಿತ ಸಾವಿರಾರು ಮಂದಿ ಭಾಗವಹಿಸಿದ್ದರು. ಕಾಂಞಂಗಾಡಿನ ಹಳೆ ಕೈಲಾಸ್ ಥಿಯೇಟರ್ ಪರಿಸರದಿಂದ ಆರಂಭಗೊಂಡ ಶೋಭಾಯಾತ್ರೆಗೆ ತೃಕ್ಕರೀಪುರ  ಶಾಸಕ ಎಂ.ರಾಜಗೋಪಾಲನ್ ನೇತೃತ್ವ ನೀಡಿದರು.
   ಮುತ್ತುಕೋಡೆಗಳನ್ನು  ಹಿಡಿದು ಕೇರಳೀಯ ಶೈಲಿಯ ವೇಷ ಧರಿಸಿದ ನೂರಾರು ಮಂದಿ ಮಹಿಳೆಯರು ಪಾಲ್ಗೊಂಡಿದ್ದ  ಶೋಭಾಯಾತ್ರೆಯಲ್ಲಿ  ಚೆಂಡೆ ವಾದ್ಯ ಮೇಳ ಪ್ರದರ್ಶನಗೊಂಡಿತು. ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಯ ಸಂದೇಶ ಎತ್ತಿ  ಹಿಡಿದ ಪ್ಲೇ ಕಾಡರ್್ಗಳು, ಅದರೊಂದಿಗೆ ಸರಕಾರದ ನಾನಾ ಇಲಾಖೆಗಳ ಸೇವೆಗಳ ಕುರಿತ ಬ್ಯಾನರ್ಗಳು ಶೋಭಾಯಾತ್ರೆಯ ಆಕರ್ಷಣೆಯನ್ನು  ಹೆಚ್ಚಿಸಿದವು.
   ಜಿಲ್ಲಾ  ಸ್ವಚ್ಛತಾ ಮಿಶನ್ ನೇತೃತ್ವದಲ್ಲಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ಗಳನ್ನು  ಕೈಬಿಟ್ಟು  ಬಟ್ಟೆಚೀಲಗಳನ್ನು  ಉಪಯೋಗಿಸಬೇಕು ಎಂದು ಕರೆ ನೀಡಲಾಗಿತ್ತು. ಕೃಷಿ ಕಲ್ಯಾಣ ಇಲಾಖೆಯ ಕೀಟನಾಶಕ ನಾಡಿಗೆ   ಆಪತ್ತು  ಹಾಗೂ ಇ.ಕೆ.ನಾಯನಾರ್ ಸರಕಾರಿ ಐಟಿಐ ಕಾಲೇಜಿನ ಪ್ಲೋಟ್ಗಳು ಶೋಭಾಯಾತ್ರೆಯನ್ನು  ಜನಮನ ಸೂರೆಗೊಳ್ಳುವಂತೆ ಮಾಡಿದವು.
   ಕಾಸರಗೋಡು ಪೆರುಮ ಕಾರ್ಯಕ್ರಮದ ಅಂಗವಾಗಿ ಕಾಂಞಂಗಾಡು ಆಲಾಮಿಪಳ್ಳಿ ಬಸ್ ನಿಲ್ದಾಣದಲ್ಲಿ  ನಡೆಯುವ ಮೇಳದಲ್ಲಿ  ಕಾಸರಗೋಡಿನ ಸಾಂಸ್ಕೃತಿಕ ವೈವಿಧ್ಯ ಎಂಬ ವಿಷಯದಲ್ಲಿ  ವಿಚಾರ ಸಂಕಿರಣ ಜರಗಿತು. ಎಡಿಎಂ ಎನ್.ದೇವಿದಾಸ್ ಸಮಾರಂಭವನ್ನು  ಉದ್ಘಾಟಿಸಿದರು. ಸಾಂಸ್ಕೃತಿಕ ಕ್ಷೇಮನಿಧಿ ಮಂಡಳಿ ಸದಸ್ಯ ರವೀಂದ್ರನ್ ಕೊಡಕ್ಕಾಡು ಅಧ್ಯಕ್ಷತೆ ವಹಿಸಿದ್ದರು. ಡಾ.ಸಿ.ಬಾಲನ್, ಕೆ.ವಿ.ಕುಮಾರನ್ ಮತ್ತಿತರರು ಭಾಗವಹಿಸಿದ್ದರು.
   ಬಹುಮಾನಗಳ ವಿತರಣೆ : ಶೋಭಾಯಾತ್ರೆಯಲ್ಲಿ  ಶುಚಿತ್ವ ಮಿಶನ್ನ ಪ್ಲೋಟ್ಗೆ ಪ್ರಥಮ, ಕೈಗಾರಿಕಾ ತರಬೇತಿ ಇಲಾಖೆಗೆ ದ್ವಿತೀಯ, ಕೃಷಿ ಅಭಿವೃದ್ಧಿ ಇಲಾಖೆಗೆ ತೃತೀಯ ಸ್ಥಾನ ಲಭಿಸಿದೆ. ಪ್ರಥಮ ಸ್ಥಾನ ಪಡೆದವರಿಗೆ 15,000ರೂ., ದ್ವಿತೀಯ ಸ್ಥಾನಕ್ಕೆ 10,000ರೂ., ತೃತೀಯ ಸ್ಥಾನ ಗಳಿಸಿದವರಿಗೆ 7,000ರೂ. ನಗದು ಬಹುಮಾನವನ್ನು  ಮೇ 25ರಂದು ನಡೆಯಲಿರುವ ಕಾಸರಗೋಡು ಪೆರುಮ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ  ವಿತರಿಸಲಾಗುವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
  

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries