ಸಮಾಜೋತ್ಸವದಲ್ಲಿ ಅಭಯಾಕ್ಷರಕ್ಕೆ ಶ್ಲಾಘನೆ
ಮುಳ್ಳೇರಿಯ : ವಿಶ್ವ ಹಿಂದೂ ಪರಿಷತ್ತು, ಬಜರಂಗದಳ, ಮಾತೃಶಕ್ತಿ ಬದಿಯಡ್ಕ ಪ್ರಖಂಡ ಮತ್ತು ಹಿಂದೂ ಸಮಾಜೋತ್ಸವ ಸಮಿತಿ ಬದಿಯಡ್ಕ ಇದರ ಆಶ್ರಯದಲ್ಲಿ ಏ.27ರಂದು ಬದಿಯಡ್ಕದಲ್ಲಿ ಜರಗಿದ ಬೃಹತ್ ಶೋಭಾಯಾತ್ರೆ ಮತ್ತು ವಿರಾಟ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ಮುಳ್ಳೇರಿಯ ಹವ್ಯಕ ಮಂಡಲ ನೇತೃತ್ವದಲ್ಲಿ ಅಭಯಾಕ್ಷರ ಸಹಿ ಅಭಿಯಾನ ಯಶಸ್ವಿಯಾಗಿ ಜರಗಿತು.
ಕಾರ್ಯಕ್ರಮದಲ್ಲಿ ಪ್ರಧಾನ ದಿಕ್ಸೂಚಿ ಭಾಷಣ ಮಾಡಲು ಅತಿಥಿಯಾಗಿ ಭಾಗವಹಿಸಿದ ಸಾದ್ವಿ ಬಾಲಿಕಾ ಸರಸ್ವತೀ ಜೀ ಯವರು ಪ್ರಧಾನ ಮಂತ್ರಿಯವರಿಗೆ ನೀಡುವ ಅಭಯಾಕ್ಷರ ಅಜರ್ಿಗೆ ಸಹಿಮಾಡಿ ಗೋಹತ್ಯಾ ನಿಷೇಧ ಮಾಡುವಂತೆ ಹಕ್ಕೊತ್ತಾಯ ಮಾಡಿದರು.
ಸಮಾರಂಭದಲ್ಲಿ ಭಾಗವಹಿಸಿದ ಹಿಂದು ಬಾಂಧವರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪ್ರಧಾನ ಮಂತ್ರಿಯವರಿಗೆ ನೀಡುವ ಅಭಯಾಕ್ಷರ ಪತ್ರಕ್ಕೆ ಸಹಿಮಾಡಿ ಗೋಹತ್ಯಾ ನಿಷೇಧ ಮಾಡುವಂತೆ ಹಕ್ಕೊತ್ತಾಯ ಮಾಡುವುದರೊಂದಿಗೆ ಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಳ್ಳೇರಿಯ ಹವ್ಯಕ ಮಂಡಲ ವತಿಯಿಂದ ಸಾಂಪ್ರದಾಯಿಕ ಬೆಲ್ಲ ನೀರು ವಿತರಣೆ ವ್ಯವಸ್ಥೆಯನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿತ್ತು.