HEALTH TIPS

No title

     ಹರಿದಾಸ ಜಯಾನಂದ ಕುಮಾರ್ ಹೊಸದುರ್ಗರ ಷಷ್ಟ್ಯಬ್ದ ಕಥಾ ಸಂಕೀರ್ತನಾ ಸರಣಿಗೆ ಚಾಲನೆ
        ಧಾಮರ್ಿಕ ಪ್ರಜ್ಞೆ ಜಾಗೃತಗೊಳಿಸುವ ತುತರ್ು ಇದೆ-ಕೊಂಡೆವೂರು ಶ್ರೀಗಳು
  ಉಪ್ಪಳ: ಬದಲಾವಣೆಯ ಇಂದಿನ ಕಾಲಘಟ್ಟದಲ್ಲಿ ನಮ್ಮ ಮಣ್ಣಿನ ಸಾಂಸ್ಕೃತಿಕ ಅಸ್ತಿತ್ವವನ್ನು ಭದ್ರಪಡಿಸುವ ಅಗತ್ಯ ಇದೆ. ಯುವ ಜನರಲ್ಲಿ ಧಾಮರ್ಿಕ ಪ್ರಜ್ಞೆ ಜಾಗೃತಗೊಳಿಸಬೇಕಾದ ಅನಿವಾರ್ಯತೆ ಇದ್ದು, ಆ ಮೂಲಕ ಸುಭದ್ರ ಸಮಾಜ ನಿಮರ್ಾಣ ನಿಮರ್ಿಸಲು ಸಾಧ್ಯ ಎಂದು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು.
   ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಗಾಯತ್ರೀ ಮಂಟಪದಲ್ಲಿ ಹರಿದಾಸ ಜಯಾನಂದಕುಮಾರ್ ಹೊಸದುರ್ಗ ರವರ ಷಷ್ಯ್ಠಬ್ದದ ಅಂಗವಾಗಿ ಆಯೋಜಿಸಲಾದ ಸರಣಿ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
   ಅರುವತ್ತು ವಸಂತಗಳನ್ನು ಪೂರೈಸುತ್ತಿರುವ ಜಯಾನಂದರು 60 ಕಥಾ ಸಂಕೀರ್ತನೆಗಳ ಮೂಲಕ ಸಮಾಜದಲ್ಲಿ ಸಾಂಸ್ಕೃತಿಕ ಕಾಳಜಿ, ಧಮರ್ಿಕ ಜಾಗೃತಿ ಮೂಡಿಸಲು ಮುಂದಾಗಿರುವುದು ಶ್ಲಾಘನೀಯ. ಕಥಾ ಕೀರ್ತನೆ, ಸಂಕೀರ್ತನೆ ಎರಡರಲ್ಲೂ ಸಿದ್ದಹಸ್ತರಾದ ಅವರು ಪ್ರತಿಭೆಯ ಬೆಳಕನ್ನು ವಿಸ್ತರಿಸಲು ರೂಪಿಸಿದ ಯೋಜನೆಗಳು ಅರ್ಥಪೂರ್ಣವಾಗಿ ಅಭಿನಂದನೀಯ ಎಂದು ಅವರು ತಿಳಿಸಿದರು.
   ಶ್ರೀಗಳು ದೀಪ ಬೆಳಗಿಸಿ, ಸಂಕೀರ್ತನಾ ಪರಿಕರಗಳಲ್ಲೊಂದಾದ ತಾಳವನ್ನು ಜಯಾನಂದರಿಗೆ ಹಸ್ತಾಂತರಿಸಿ ಸರಣಿ ಕಾರ್ಯಕ್ರಮಕ್ಕೆ ವಿಶೇಷ ರೀತಿಯಲ್ಲಿ ಚಾಲನೆ ನೀಡಿದರು.
   ಐಲ ಶ್ರೀದುಗರ್ಾಪರಮೇಶ್ವರಿ ದೇವಾಲಯದ ಆಡಳಿತ ಮೊಕ್ತೇಸರ ಕೋಡಿಬೈಲು ನಾರಾಯಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಕಸಾಪ ಮಾಜಿ ಅಧ್ಯಕ್ಷ ಧರ್ಮದಶರ್ಿ ಹರಿಕೃಷ್ಣ ಪುನರೂರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಅವರು ಈ ಸಂದರ್ಭ ಮಾತನಾಡಿ, ಸಂಕಲ್ಪ ಮಾಡುವುದು, ಕನಸು ಕಾಣುವುದು ಮಾನವ ಸಹಜ ಸ್ವಭಾವ. ಅದು ಬದುಕಿಗೆ ಅರ್ಥಕೊಡುವ ಮೂಲಕ ಪರಿವರ್ತನೆಗೆ ಪೂರಕವಾಗಬಲ್ಲದು. ಮಕ್ಕಳು-ಮಹಿಳೆಯರಿಗೆ ನೈತಿಕ ಮೌಲ್ಯಗಳ ಅರಿವು ಮೂಡಿಸಿ ಪರಂಪರೆ ಉಳಿಸಲು ಪ್ರಯತ್ನಿಸುತ್ತಿರುವ ಜಯಾನಂದ ಕುಮಾರ್ ರವರ ಪ್ರವೃತ್ತಿಗಳು ಇತರರಿಗೆ ಮಾದರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
   ಕಾಸರಗೋಡಿನ ರಂಗಚಿನ್ನಾರಿಯ ನಿದರ್ೇಶಕ, ಚಲನಚಿತ್ರ ನಟ ಕಾಸರಗೋಡು ಚಿನ್ನಾ, ವಿಹಿಂಪ ಮಾತೃ ಮಂಡಳಿಯ ಮುಖಂಡೆ ಮೀರಾ ಆಳ್ವ, ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಉಪಸ್ಥಿತರಿದ್ದು ಮಾತನಾಡಿದರು.
  ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಪುಷ್ಪರಾಜ್ ಐಲ ಸ್ವಾಗತಿಸಿ, ಗುರುಪ್ರಸಾದ್ ಕೋಟೆಕಣಿ ವಂದಿಸಿದರು. ನ್ಯಾಯವಾದಿ ಗಂಗಾಧರ ಆಚಾರ್ಯ ಕೊಮಡೆವೂರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಜಯಾನಂದ ಕುಮಾರ್ ಹೊಸದುರ್ಗ ರವರಿಂದ ಗಣೇಶ ಮಹಿಮೆ ಕಥಾಭಾಗದ ಕಥಾ ಸಂಕೀರ್ತನೆ ನಡೆಯಿತು. ಪ್ರಕಾಶ್ ಕುಂಟಾರು ಹಾಗೂ ಜಗದೀಶ್ ಕಾಂಞಿಂಗಾಡ್ ಪಕ್ಕವಾದ್ಯಗಳಲ್ಲಿ ಸಹಕರಿಸಿದರು. ಸಮಾರಂಭದ ಅಂಗವಾಗಿ ಶನಿವಾರ ಬೆಳಿಗ್ಗಿನಿಂದ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ಸಂಜೆಯ ವರೆಗೆ ನಡೆಯಿತು.
     

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries