HEALTH TIPS

No title

          ಜಲ ಬವಣೆ-ಇದ್ದರೂ ಉಪಯೋಗಶೂನ್ಯವಾದ ಒಂದಲ್ಲ ಎರಡು ಬಾವಿ ಹಾಗೂ ಕೊಳವೆಬಾವಿ
           ನೀರಿಲ್ಲದೆ ತತ್ತರ
  ಉಪ್ಪಳ: ಬಿರುಬೇಸಕೆಯ ಝಳದಿಂದ ಜನರು ತೀವ್ರ ಕಂಗೆಡುವಂತಾಗಿರುವ ಪರಿಸ್ಥಿತಿಯಲ್ಲಿ ಜನರ ಅತ್ಯಂತ ಅಮೂಲ್ಯ ಪ್ರಾಥಮಿಕ ಆವಶ್ಯಕತೆಯಾದ ನೀರಿನಬ ಕೊರತೆ ಹೈರಾಣುಗೊಳಿಸುತ್ತಿದೆ. ಮಂಗಲ್ಪಾಡಿ ಗ್ರಾ.ಪಂ. ವ್ಯಾಪ್ತಿಯ ಪುಳಿಕುತ್ತಿ ಪರಿಶಿಷ್ಟ ಜಾತಿ ಕಾಲನಿಯಲ್ಲಿ ನೀರಿನ ಕೊರತೆ ತೀವ್ರವಾಗಿ ಬಾಧಿಸಿದೆ. ಇದರಿಂದ ಕಾಲನಿ ನಿವಾಸಿಗಳು ನೀರಿಗಾಗಿ ಕಠಿಣತೆ ಎದುರಿಸಬೇಕಾದ ಸ್ಥಿತಿ ಬಂದೊದಗಿದೆ. ಈ ಕಾಲನಿಯಲ್ಲಿ ಸುಮಾರು 40 ಪ.ಜಾತಿ ವಿಭಾಗದ ಕುಟುಂಬಗಳು ವಾಸಿಸುತ್ತಿವೆ.
   ಇದೆ ಕೊಳವೆಬಾವಿ-ಇಲ್ಲ ಪ್ರಯೋಜನವಿಲ್ಲ:
   ಈ ಕಾಲನಿ ಪರಿಸರದಲ್ಲಿ ಒಂದಲ್ಲ... ಎರಡು ಸರಕಾರಿ ಬಾವಿಗಳು, ಎರಡು ಕೊಳವೆ ಬಾವಿಗಳೂ ಇವೆ. ಎರಡು ಬಾವಿಗಳ ಪೈಕಿ ಒಂದು ಕುಸಿದು ಬಿದ್ದು ಉಪಯೋಗಶೂನ್ಯವಾಗಿದೆ. ಇನ್ನೊಂದರಲ್ಲಿ ಯತೇಚ್ಚ ನೀರು ಲಭ್ಯವಿದೆ. ಕೊಳವೆಬಾವಿಗಳು ನೀರಿಲ್ಲದೆ ಉಪಯೋಗ ಶೂನ್ಯವಾಗಿದೆ. ಇಲ್ಲಿಯ ಬಾವಿಗಳನ್ನು 2006-07ರಲ್ಲಿ ಅಂದಿನ ಶಾಸಕ ನ್ಯಾಯವಾದಿ ಸಿ.ಎಚ್ ಕುಂಞಿಂಬು ರವರ ಅಭಿವೃದ್ದಿ ನಿಧಿಯಿಂದ ನಿಮರ್ಿಸಲಾಗಿತ್ತು. ಧಾರಾಳ ನೀರಿನ ಲಭ್ಯತೆಯಿದ್ದ ಈ ಬಾವಿ ದುರಾದೃಷ್ಟದಿಂದ ನಾಲ್ಕೇ ತಿಂಗಳುಗಳಲ್ಲಿ ಕುಸಿದು ಬಿದ್ದು ಉಪಯೋಗಕ್ಕೆ ಅಲಭ್ಯವಾಯಿತು. ಸ್ಥಳೀಯರು ಅಂದೇ ಶಾಸಕರ ಗಮನಕ್ಕೆ ವಿಷಯವನ್ನು ತಂದರೂ ಪರಿಹಾರ ಉಂಟಾಗಲಿಲ್ಲ.
   ಈ ಬಾವಿ ನಿಮರ್ಾಣಕ್ಕಿಂತ ಮೊದಲೇ ಇದ್ದ ಬಾವಿಯ ನೀರನ್ನು ಇದೀಗ ಈ ಕಾಲನಿ ನಿವಾಸಿಗಳು ಬಳಸುತ್ತಿದ್ದಾರೆ. ಆದರೆ 40ಕ್ಕಿಂತಲೂ ಅಧಿಕ ಕುಟುಂಬಗಳು ವಾಸಿಸುವ ಈ ಕಾಲನಿಗೆ ಈ ಒಂದು ಬಾವಿಯ ನೀರು ಸಾಕಾಗುತ್ತಿಲ್ಲ. ಗ್ರಾ.ಪಂ. ವತಿಯಿಂದ ಪೈಪ್ ಲೈನ್ ಮೂಲಕ ವಿತರಣೆಗೊಳ್ಳುವ ನೀರು ಇಲ್ಲಿಯ ಪರಿಸರಕ್ಕೆ ಎರಡು ದಿನಗಳಿಗೊಮ್ಮೆ ಲಭ್ಯವಾಗುತ್ತಿದೆ. ಆದರೆ ಕೆಲವೊಮ್ಮೆ ಮುಂಜಾನೆ ಕಾಲನಿ ನಿವಾಸಿಗಳು ನಿದ್ದೆ ಬಿಟ್ಟೇಳುವ ಮೊದಲೇ ಹರಿಕೆಯಂತೆ ಹರಿದು ಬರುವ ಪೈಪ್ ನೀರು ಇದ್ದರೂ ಪ್ರಯೋಜನಕಾರಿಯಾಗಿಲ್ಲ.
   ಇಲ್ಲಿಯ ನೀರಿನ ಸಮಸ್ಯೆಯಿಂದ ಕಾಲನಿಯ ಕೆಲವು ಕುಟುಂಬಗಳು ವಾಸಸ್ಥಳ ಬದಲಾಯಿಸುವ ನಿಟ್ಟಿನಲ್ಲಿ ಚಿಂತಿಸುತ್ತಿದ್ದಾರೆ. ಆದರೆ ಕಿತ್ತುತಿನ್ನುವ ಬಡತನದ ಮಧ್ಯೆ ಎತ್ತ ತೆರಳುವುದೆಂಬ ಸವಾಲಿನಲ್ಲಿ ತಮಗೊದಗಿರುವ ಸಂಕಷ್ಟವನ್ನು ಹಳಿಯುತ್ತಿರಬೇಕಾದ ಮನಮಿಡಿಯುವ ಚಿತ್ರಣ ಕಂಡುಬಂದಿದೆ. ಸಂಂಧಪಟ್ಟವರು ಶೀಘ್ರ ಇಲ್ಲಿಯ ವಾಸಿಗಳ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮುಂದಾಗಬೇಕಿದೆ.
    ಕೋಟ್ಸ್:
   ಜನರ ಪ್ರಾಥಮಿಕ ಆವಶ್ಯಕತೆಗಳ ಪೂರೈಕೆಯಲ್ಲಿ ಗ್ರಾ.ಪಂ. ಕಟಿಬದ್ದವಾಗಿದೆ. ಕಾಲನಿ ನಿವಾಸಿಗಳ ನೀರಿನ ಬವಣೆಯ ಬಗ್ಗೆ ಆ ಪರಿಸರದ ಗ್ರಾ.ಪಂ. ಸದಸ್ಯರೊಂದಿಗೆ ಸಮಾಲೋಚಿಸಿ ತುತರ್ು ಕ್ರಮಗಳಿಗೆ ವ್ಯವಸ್ಥೆ ಕಲ್ಪಿಸಲಾಗುವುದು.
                         ಶಾಹುಲ್ ಹಮೀದ್ ಬಂದ್ಯೋಡು.
                      ಅಧ್ಯಕ್ಷರು ಮಂಗಲ್ಪಾಡಿ ಗ್ರಾ.ಪಂ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries