HEALTH TIPS

No title

              ಮೊದಲ ಅನೌಪಚಾರಿಕ ಸಭೆ, ಪ್ರಧಾನಿ ಮೋದಿ- ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ
   ರಷ್ಯಾ: ಮೊದಲ ಅನೌಪಚಾರಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಭೇಟಿ ಮಾಡಿದ್ದು, ಉಭಯ ದೇಶಗಳ ಬಾಂಧವ್ಯ ವೃದ್ಧಿ ಬಗ್ಗೆ ಸೋಮವಾರ ಚಚರ್ಿಸುತ್ತಿದ್ದಾರೆ.
    ಸಭೆಯಲ್ಲಿ ಭಯೋತ್ಪದನಾ ನಿಗ್ರಹ, ರಕ್ಷಣಾ ಸಹಭಾಗಿತ್ವ ಹಾಗೂ ವಿವಿಧ ಯೋಜನೆಗಳಲ್ಲಿ ಆಥರ್ಿಕ ಸಹಭಾಗಿತ್ವದ ಕುರಿತು ಚಚರ್ಿಸುವ ಸಾಧ್ಯತೆ ಇದೆ.
ಸುದೀರ್ಘ ಕಾಲದಿಂದಲೂ ಭಾರತ ಮತ್ತು ರಷ್ಯಾ ಉತ್ತಮ ಸ್ನೇಹಿತರಾಗಿದ್ದು, ಉಭಯ ದೇಶಗಳು ವಿಶೇಷ ಸವಲತ್ತುಗಳ ಪಾಲುದಾರಿಕೆಯನ್ನು ಹೆಚ್ಚಿಸಿವೆ. ರಷ್ಯಾದ ಸೋಚಿಯಲ್ಲಿ ಮೊದಲ ಅನೌಪಚಾರಿಕ ಸಭೆ ಆಹ್ವಾನಿಸಿದ್ದಕ್ಕೆ ಅಧ್ಯಕ್ಷ ಪುಟಿನ್ ಅವರಿಗೆ ಧನ್ಯವಾದ ಎಂದು ಮೋದಿ ಹೇಳಿದ್ದಾರೆ.
   ಎರಡು ದೇಶಗಳು ಪರಸ್ಪರ ವ್ಯಾಪಾರ ಸಂಬಂಧ ಹೆಚ್ಚಿಸುವ ನಿಟ್ಟಿನಲ್ಲಿ ಮಾತುಕತೆ ನಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಭಾರತ - ರಷ್ಯಾ 2014 ರಿಂದ 2025ರ ವೇಳೆಗೆ ಎರಡು ರಾಷ್ಟ್ರಗಳೊಂದಿಗೆ ಮೂರು ಸಾವಿರ ಕೋಟಿ ಡಾಲರ್ ನಷ್ಟು ವ್ಯಾಪಾರ ವಹಿವಾಟು ನಡೆಸಲು ಗುರಿ ಇಟ್ಟುಕೊಳ್ಳಲಾಗಿದೆ. ಖಾಸಗಿ ಸಂಸ್ಥೆಯ ವರದಿಯ ಪ್ರಕಾರ 2015ರ ಬಳಿಕ ವ್ಯಾಪಾರ ವಹಿವಾಟುಗಳು ಶೇ.1.5ರಷ್ಟು ಕಡಿಮೆಯಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಸಂಬಂಧವೂ ಮಾತುಕತೆ ನಡೆಸುವ ಸಾಧ್ಯತೆಗಳಿವೆ.
   ಇದಲ್ಲದೆ ಬಾಹ್ಯಾಕಾಶ ವಿಜ್ಞಾನ, ಪರಮಾಣು ತಂತ್ರಜ್ಞಾನ ಅಭಿವೃದ್ಧಿ ಬಗ್ಗೆಯೂ ಮಾತುಕತೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. ರಷ್ಯಾ ಹಾಗೂ ಭಾರತ ಸಹಯೋಗದಲ್ಲಿ ಕೂಡಂಕುಳಂ ನ್ಯೂಕ್ಲಿಯರ್ ಪವರ್ ಪ್ಲಾಂಟ್ (ಕೆಕೆಎನ್ಪಿಪಿ) ನಿಮರ್ಾಣವಾಗುತ್ತಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries