HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಪಾಂಡಿತ್ಯದೊಂದಿಗೆ ವಿನಯವಂತಿಕೆ ಎತ್ತರಕ್ಕೆ ಬೆಳೆಸುತ್ತದೆ-ಎಡನೀರು ಶ್ರೀ
     ಬದಿಯಡ್ಕ : ನಮ್ಮ ಸುತ್ತಲಿನ ಪರಿಸರದ ಆಗುಹೋಗುಗಳು ನಮ್ಮ ಬದುಕಿನ ಗತಿಯನ್ನು ನಿರ್ಧರಿಸುತ್ತದೆ. ಎಂತಹ ಸುಗುಣ ಸಂಪನ್ನನ ಮೇಲೆಯೂ ಗಾಢ ಪರಿಣಾಮ ಬೀರುವ ವರ್ತಮಾನದ ವರ್ತನೆಗಳಿಗೆ ಹೊರತಾಗಿ ಪರಂಪರೆ, ಸಂಪ್ರದಾಯಗಳನ್ನು ಮೈಗುಡಿಸುವ ಜೀವಿಸುವವನು ಯೋಗಿಯಾಗಿ ಗುರುತಿಸಿಕೊಳ್ಳುತ್ತಾನೆ. ಇಂತಹ ವ್ಯಕ್ತಿತ್ವದ ಅಪೂರ್ವ ವ್ಯಕ್ತಿಗಳಲ್ಲಿ ಬಳ್ಳಪದವು ಮಾಧವ ಉಪಾಧ್ಯಾಯರು ನಮ್ಮಿದಿರಿರುವ ಸಾಧಕರು ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿ ಆಶೀರ್ವಚನ ನೀಡಿದರು.
  ಅವರು ಶನಿವಾರ ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ಬಳ್ಳಪದವು ಡಾ. ಮಾಧವ ಉಪಾಧ್ಯಾಯ ಅಭಿನಂದನ ಸಮಿತಿ, ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನ ಮಲ್ಲ ಇವರ ನೇತೃತ್ವದಲ್ಲಿ ನಡೆದ ಪೌರಸನ್ಮಾನ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ, ಬಳ್ಳಪದವು ಡಾ. ಮಾಧವ ಉಪಾಧ್ಯಾಯರಿಗೆ ರಜತ ಕಿರೀಟವನ್ನು ಪ್ರಧಾನಗೈದು ಆಶೀರ್ವಚನವನ್ನು ನೀಡಿದರು.
   ಪಾಂಡಿತ್ಯದೊಂದಿಗೆ ವಿನಯ ಮೇಳೈಸಿದಾಗ ವಿಶಿಷ್ಟ ಸಾಧಕ ಪುರುಷರಾಗಿ ಹೊರಹೊಮ್ಮಲು ಕಾರಣವಾಗುತ್ತದೆ. ಬಳ್ಳಪದವು ಮಾಧವ ಉಪಾಧ್ಯಾಯರು ತಮ್ಮ ಅಪಾರ ಕರ್ತವ್ಯ ನಿಷ್ಠೆ ಮತ್ತು ಅದರೊಂದಿಗೆ ಅನುಸಂಧಾನಗೊಂಡು ಹೊಂದುವ ತಾದಾತ್ಮ್ಯೆ ಎತ್ತರಕ್ಕೇರಿಸಿದೆ ಎಂದು ಶ್ರೀಗಳು ತಿಳಿಸಿದರು. ತಮ್ಮ ಅನುಷ್ಠಾನಗಳಲ್ಲಿ ಹೊಂದಿರುವ ತನ್ಮಯತೆಯಂತೆಯೇ ಸಂಗೀತ ಹಾಡುಗಾರಿಕೆಯಲ್ಲೂ ಅವರು ಕಂಡುಕೊಂಡಿದ್ದರು. ಸಂಗೀತ ರಸಭಾವದೊಳ ಹೊಕ್ಕು ಅದನ್ನು ಅನುಭವಿಸುತ್ತಾ ಅವರು ಮಾಡಿರುವ ಮೋಡಿ ಎಲ್ಲರಿಗೂ ಮಾದರಿ ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.
   ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶೃಂಗೇರಿ ಶ್ರೀಶಾರದಾ ಪೀಠದ ಆಡಳಿತಾಧಿಕಾರಿ, ಗುರುಸೇವಾ ಧುರೀಣ, ಪದ್ಮಶ್ರೀ ಪುರಸ್ಕೃತ ಡಾ. ವಿ.ಆರ್. ಗೌರಿಶಂಕರ್ ಮಾತನಾಡುತ್ತಾ ಗುರು-ಶಿಷ್ಯ ಪರಂಪರೆಯು ಈ ರಾಷ್ಟ್ರದ ಮಹತ್ವದ ವಿಚಾರವಂತಿಕೆಯಾಗಿ ಬೆಳೆದುಬಂದಿದ್ದು, ಇಂದದು ಕ್ಷೀಣಿಸುತ್ತಿರುವುದು ಕಳವಳಕಾರಿ. ಆದರೆ ಡಾ.ಮಾಧವ ಉಪಾಧ್ಯಾಯರು ಅಂತಹ ಪರಂಪರೆಯ ಕೊಂಡಿಯಾಗಿ ಮಾದರಿ ವ್ಯಕ್ತಿತ್ವದವರು ಎಂದು ತಿಳಿಸಿದರು.  ಓರ್ವ ಮನುಷ್ಯನಿಗೆ ತನ್ನ ಹುಟ್ಟೂರಿನಲ್ಲಿ ಲಭಿಸುವ ಸನ್ಮಾನಕ್ಕಿಂತ ಮಿಗಿಲಾದುದು ಬೇರೊಂದಿಲ್ಲ. ಇದೊಂದು ಶ್ರೇಷ್ಠ ಪೌರ ಸನ್ಮಾನವಾಗಿದೆ. ಅವರು ಸಹಜವಾದ ಮನೋಭಾವದಿಂದ ಎಲ್ಲರೊಂದಿಗೆ ಬೆರೆಯುತ್ತಿದ್ದುದು ಅವರ ಸಜ್ಜನಿಕೆಯ ಸಂಕೇತ ಎಂದು ತಿಳಿಸಿದರು. ತನ್ನ ತಪಸ್ಸು ಶ್ರದ್ಧೆಯಿಂದ ಸಿದ್ಧಾಂತಕ್ಕೆ ನಂಬಿಕೆಗಳಿಗೆ ಜೀವನವನ್ನು ಮುಡಿಪಾಗಿಟ್ಟು ಬದುಕುತ್ತಿರುವ ಶ್ರೇಷ್ಠ ವ್ಯಕ್ತಿ ಬಳ್ಳಪದವು ಮಾಧವ ಉಪಾಧ್ಯಾಯರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುಟುಂಬ ಪ್ರಭೋದಕ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅಭಿನಂದನಾ ಭಾಷಣ ಮಾಡಿದರು.
ವೇದಮೂತರ್ಿ ಮಣಿಮುಂಡ ಶಂಕರ ಉಪಾಧ್ಯಾಯರು ಶುಭಾಶಂಸನೆಗೈದು ಮಾತನಾಡಿ ಆಚರಣೆಗಳಿಗೆ ಮಹತ್ವವ ನೀಡಿರುವ ನಮ್ಮ ಪರಂಪರೆಯಲ್ಲಿ ಅವನ್ನು ನಿತ್ಯಾನುಷ್ಠಾನಗಳ ಮೂಲಕ ಮುಂದುವರಿಸುತ್ತಿರುವ ಅತ್ಯಪೂರ್ವ ವ್ಯಕ್ತಿಯಾದ ಉಪಾಧ್ಯಾಯರ ಜೀವನ ಮೌಲ್ಯ ಸದಾ ಮನನೀಯ ಎಂದು ತಿಳಿಸಿದರು. ವಿದ್ಯೆ, ತಪಸ್ಸುಗಳ ಸಂಗಮವಾದ ಬದುಕಿನಲ್ಲಿ ವಿನಯವಂತಿಕೆಯ ಮೂಲಕ ಆದರ್ಶಪ್ರಾಯರಾಗಿ ಹೆಮ್ಮೆಯೆನಿಸಿದ್ದಾರೆ.  ಸಜ್ಜನರ ಸಹವಾಸ ಒಂದು ಕ್ಷಣವಾದರೂ ಸಿಕ್ಕಿದರೆ ಅದು ನಮಗೆ ಪುಣ್ಯವಾಗಿದ್ದು, ಅದು ನಮ್ಮ ಸಂಸಾರ ನೌಕೆಯನ್ನು ದಾಟಿಸಲು ಸಾಕಾಗುತ್ತದೆ. ಸೂರ್ಯನ ಮುಂದಿರುವ ಹಣತೆಗಳಾದ ನಾವು ಅವರ ಸಾಧನೆಯನ್ನು ಮುಂದಿನ ಜನಾಂಗಕ್ಕೆ ತಲುಪಿಸುವುದಲ್ಲದೆ ಅದನ್ನು ಅನುಸರಿಸಬೇಕು ಎಂದರು.
    ತಮಗೆ ನೀಡಿದ ಪೌರ ಸನ್ಮಾನಕ್ಕೆ ಕೃತಜ್ಞತೆಯ ನುಡಿಗಳನ್ನಾಡಿದ ಡಾ. ಬಳ್ಳಪದವು ಮಾಧವ ಉಪಾಧ್ಯಾಯರು ಹಲವು ಗುರುಗಳ ಮಹಾ ತಪಸ್ಸಿನ ಫಲವಾಗಿ ತನಗೆ ಸಾಧನೆಗೈಯ್ಯಲು ಮಾರ್ಗದಶರ್ಿಯಾದವು ಎಂದು ತಿಳಿಸಿದರು. ಈಶ್ವರ ಇದ್ದಾನೆ ಎಂದು ನಮಗೆ ತೋರಿಸಿದವನು ಗುರುವಾಗಿದ್ದಾನೆ. ಆದುದರಿಂದ ಗುರುವಿಗಿಂತ ಶ್ರೇಷ್ಠವಾದುದು ಬೇರೊಂದಿಲ್ಲ. ತತ್ವ ಜ್ಞಾನಗಳನ್ನು ಹೊಂದಿದವರು ಗುರುಗಳಾಗಿದ್ದಾರೆ. ಶಿಷ್ಯರ ಹಿತವನ್ನೂ ಗುರು ಬಯಸುತ್ತಾನೆ. ಈ ಸನ್ಮಾನವನ್ನು ಗುರುಗಳಿಗೆ ಅರ್ಪಣೆ ಮಾಡಿ ಇದನ್ನು ನಾನು ಸ್ವೀಕರಿಸುತ್ತೇನೆ. ಓರ್ವ ವ್ಯಕ್ತಿ ಮೇಲೇರಬೇಕಾದರೆ ಅನೇಕ ಗುರುಗಳ ದಾರಿದೀಪ ಬೇಕಾಗುತ್ತದೆ. ಶ್ರೇಷ್ಠವಾದ ಗುರುಪರಂಪರೆಯಿಂದ ನಾವು ಮೇಲ್ಮಟ್ಟಕ್ಕೇರಲು ಸಾಧ್ಯ. ಅಹೋಭಾಗ್ಯಂ, ಮಹಾಭಾಗ್ಯಂ ಎಂದು ಪೌರಸನ್ಮಾನವನ್ನು ಸ್ವೀಕರಿಸಿ ಬಳ್ಳಪದವು ಡಾ. ಮಾಧವ ಉಪಾಧ್ಯಾಯರು ನುಡಿದರು.
ಸಭಾಕಾರ್ಯಕ್ರಮಕ್ಕೆ ಮುಂಚಿತವಾಗಿ ಚೇಕರ್ೂಡ್ಲು ಶ್ರೀ ಮಹಾವಿಷ್ಣು ದೇವಸ್ಥಾನದಿಂದ ಬದಿಯಡ್ಕ ಪೇಟೆಯನ್ನು ಸುತ್ತಿ  ಶ್ರೀ ಗಣೇಶ ಮಂದಿರಕ್ಕೆ ಡಾ. ಮಾಧವ ಉಪಧ್ಯಾಯರನ್ನು ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಯಿತು. ತೆರೆದ ವಾಹನದಲ್ಲಿ ಡಾ. ಮಾಧವ ಉಪಾಧ್ಯಾಯರನ್ನು ಕುಳ್ಳಿರಿಸಿ, ಚೆಂಡೆಮೇಳ, ಮುತ್ತು ಕೊಡೆಗಳು ಮೆರವಣಿಗೆಗೆ ಶೋಭೆಯನ್ನು ತಂದಿತ್ತು. ಕುರುಮುಜ್ಜಿಕಟ್ಟೆ ಧರ್ಮಶಾಸ್ತಾ ಭಜನಾ ಮಂದಿರದ ಮಾತೃಸಮಿತಿಯವರು ಮೆರವಣಿಗೆಯಲ್ಲಿ ಮುತ್ತುಕೊಡೆಗಳೊಂದಿಗೆ ಪಾಲ್ಗೊಂಡರು. ಘನಪಾಠಿ ಗೋವಿಂದ ಪ್ರಕಾಶ್ ಭಟ್ ಕನ್ನಡಗುಳಿ ಅವರ ನೇತೃತ್ವದಲ್ಲಿ ವೇದಘೋಷದೊಂದಿಗೆ ಪೂರ್ಣಕುಂಭ ಸ್ವಾಗತವನ್ನು ನೀಡಲಾಯಿತು.
    ರಾಜಾರಾಮ ಪೆರ್ಲ ಸನ್ಮಾನಪತ್ರವನ್ನು ವಾಚಿಸಿದರು. ಕಾಸರಗೋಡು ರಾಮರಾಜ ಕ್ಷತ್ರಿಯ ಸಮಾಜ ಬಾಂಧವರು ಪ್ರಾಯೋಜತ್ವ ವಹಿಸಿದ ರಜತ ಕಿರೀಟವನ್ನು ಪ್ರತಿನಿಧಿ ಕಮಲಾಕ್ಷ ಕಲ್ಲುಗದ್ದೆ ಶ್ರೀಗಳವರಿಗೆ ಹಸ್ತಾಂತರಿಸಿದರು.
   ಸಮಿತಿಯ ಪ್ರಧಾನ ಸಂಚಾಲಕ ಆನೆಮಜಲು ವಿಷ್ಣು ಭಟ್ ಸ್ವಾಗತಿಸಿ, ವಂದಿಸಿದರು. ಸಂಗೀತ ವಿದ್ವಾನ್ ಯೋಗೀಶ ಶರ್ಮ ಬಳ್ಳಪದವು ಸುಶ್ರಾವ್ಯವಾಗಿ ಪ್ರಾರ್ಥನೆಯನ್ನು ಹಾಡಿದರು. ಶಂಕರ್ ಸಾರಡ್ಕ ಕಾರ್ಯಕ್ರಮವನ್ನು ನಿರೂಪಿಸಿದರು. ಹರೀಶ್ ನಾರಂಪಾಡಿ ವಿವಿಧ ಸಂಘಸಂಸ್ಥೆಗಳ ಗೌರವಾರ್ಪಣೆಯನ್ನು ನಡೆಸಿಕೊಟ್ಟರು. ಸಮಿತಿಯ ಪದಾಧಿಕಾರಿಗಳಾದ ವಿಷ್ಣುಮೋಹನ ಐಲುಕುಂಜೆ, ಉಪ್ಪಂಗಳ ವಾಸುದೇವ ಭಟ್, ರಾಜೇಶ್ ಮಜಕ್ಕಾರ್, ರಾಂ ಪ್ರಸಾದ್ ಕಾಸರಗೋಡು, ಕೆ.ಎನ್.ವೆಂಕಟ್ರಮಣ ಹೊಳ್ಳ ಕಾಸರಗೋಡು, ಹರೀಶ್ ಚೇಕರ್ೂಡ್ಲು, ಗಣೇಶ್ ಚೇಕರ್ೂಡ್ಲು, ಸೂರ್ಯನಾರಾಯಣ ಅನ್ನಪೂರ್ಣ, ಗೋವಿಂದ ಭಟ್ ಬೇಂದ್ರೋಡು, ಪ್ರಸಾದ್ ಕಜೆಮಲೆ ಮೊದಲಾದವರು ಪಾಲ್ಗೊಂಡಿದ್ದರು.
   ಈ ಸಂದರ್ಭ ಸುಮಾರು 50 ಸಂಘ ಸಂಸ್ಥೆಗಳು ಡಾ. ಮಾಧವ ಉಪಾಧ್ಯಾಯರನ್ನು ಗೌರವಿಸಿದರು. ಸಭಾಕಾರ್ಯಕ್ರಮದ ನಂತರ  ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ಹಾಡುಗಾರಿಕೆಯಲ್ಲಿ ಕು. ಶ್ರೀರಂಜಿನಿ ಸಂತಾನ ಗೋಪಾಲನ್ ಚೆನೈ, ವಯಲಿನ್ನಲ್ಲಿ ವೈಭವ್ ರಮಣಿ, ಮೃದಂಗದಲ್ಲಿ ಕೆ.ಯು. ಜಯಚಂದ್ರ ರಾವ್ ಸಹಕರಿಸಿದರು.
   ಮುಖ್ಯಾಂಶಗಳು:
* ಕಾಸರಗೋಡು ರಾಮರಾಜ ಕ್ಷತ್ರಿಯ ಸಮಾಜ ಬಾಂಧವರು ಕಿರೀಟದ ಪ್ರಾಯೋಜಕತ್ವವನ್ನು ವಹಿಸಿದ್ದರು.
* ಅನೇಕ ಅಭಿಮಾನಿಗಳು ಮೆರವಣಿಗೆಯಲ್ಲಿ ಆಗಮಿಸಿ ಕಾರ್ಯಕ್ರಮ ಮುಗಿಯುವ ತನಕ ಆಸೀನರಾಗಿದ್ದರು.
* ತೆರೆದ ವಾಹನದಲ್ಲಿ ಡಾ. ಉಪಾಧ್ಯಾಯರ ಮೆರವಣಿಗೆ
* 1000ಕ್ಕಿಂತಲೂ ಹೆಚ್ಚಿನ ಅಭಿಮಾನಿಗಳು, ಶಿಷ್ಯವೃಂದದವರು ಪಾಲ್ಗೊಂಡಿದ್ದರು.
* 55ಕ್ಕಿಂತಲೂ ಅಧಿಕ ಸಂಘ ಸಂಸ್ಥೆಗಳಿಂದ ಗೌರವಾರ್ಪಣೆ
* ಸಮಾಜದ ಎಲ್ಲಾ ಸಮುದಾಯಗಳ ಸಂಘ ಸಂಸ್ಥೆಗಳ ಪಾಲ್ಗೊಳ್ಳುವಿಕೆ
* ಯಾವುದೇ ದೇಣಿಗೆಯನ್ನು ಸ್ವೀಕರಿಸದೆ, ಪ್ರಾಯೋಜತ್ವದಲ್ಲಿ ನಡೆದ ಅಪರೂಪದ ಕಾರ್ಯಕ್ರಮ
     




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries