ಎಂಡೋ ಸಂತ್ರಸ್ತರಿಗೆ ಸೂಕ್ತ ಪರಿಹಾರ : ಸಚಿವ ಇ.ಚಂದ್ರಶೇಖರನ್
ಕಾಸರಗೋಡು: ಎಂಡೋ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಮತ್ತು ನಷ್ಟ ಪರಿಹಾರ ನೀಡುವಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಕಂದಾಯ ಸಚಿವ ಇ.ಚಂದ್ರಶೇಖರನ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಎಂಡೋಸಲ್ಫಾನ್ ಸೆಲ್ ಸಭೆಯಲ್ಲಿ ಸೆಲ್ನ ಅಧ್ಯಕ್ಷರೂ ಆಗಿರುವ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯ ಸರಕಾರ ಮಾನವ ಹಕ್ಕು ಆಯೋಗ ನಿದರ್ೇಶದಂತೆ ಪರಿಹಾರ ನೀಡಲು ಅಗತ್ಯದ ಕ್ರಮ ತೆಗೆದುಕೊಳ್ಳಲಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದ ಸೆಲ್ ಸಭೆಯ ತೀಮರ್ಾನಗಳನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಗಮನಕ್ಕೆ ತಂದಿರುವುದಾಗಿ ಹೇಳಿದರು. ಮುಖ್ಯಮಂತ್ರಿ ಕರೆದ ಸಭೆಯಲ್ಲಿ ಎಂಡೋ ಸಂತ್ರಸ್ತರಿಗೆ ಪ್ರಯೋಜನವಾಗುವ ರೀತಿಯಲ್ಲಿ ಹಲವು ಯೋಜನೆಗಳನ್ನು ತೀಮರ್ಾನಿಸಲಾಗಿದೆ ಎಂದರು.
ಸಭೆಯಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಜಿಸಿ ಬಶೀರ್, ಜಿಲ್ಲಾಧಿಕಾರಿ ಜೀವನ್ಬಾಬು ಕೆ, ವಿವಿಧ ಬ್ಲಾಕ್-ಗ್ರಾಮ ಪಂಚಾಯತ್ಗಳ ಅಧ್ಯಕ್ಷರು, ಸೆಲ್ ಸದಸ್ಯರು, ಎನ್ಎಚ್ಎಂ ಜಿಲ್ಲಾ ಪ್ರೊಜೆಕ್ಟ್ ಮೆನೇಜರ್ ಡಾ.ರಾಮನ್ ಸ್ವಾಮಿ ವಾಮನ್ ಮೊದಲಾದವರಿದ್ದರು.
ಎಂಡೋಸಲ್ಫಾನ್ ಸೆಲ್ ಡೆಪ್ಯೂಟಿ ಕಲೆಕ್ಟರ್ ಕೆ.ಜಯಲಕ್ಷ್ಮಿ ವರದಿ ಮಂಡಿಸಿದರು.