HEALTH TIPS

No title

          ಗ್ರಾಮೀಣ ಮಟ್ಟದಲ್ಲಿ ಕನ್ನಡವನ್ನು ಉಳಿಸುವ ಪ್ರಯತ್ನ ನಡೆಯಬೇಕು: ಶ್ರೀಶ ಪಂಜಿತ್ತಡ್ಕ
     ಕಾಸರಗೋಡು: ಕನ್ನಡಕ್ಕಾಗಿ ಹೋರಾಡಿದ ಮಹಾತ್ಮರನ್ನು ಸಂಸ್ಮರಿಸುವ ಕಾರ್ಯಕ್ರಮಗಳು ಪ್ರಾದೇಶಿಕಮಟ್ಟದಲ್ಲೂ ಅಲ್ಲಲ್ಲಿ  ನಡೆಯಬೇಕು. ಅಂತಹ ಕಾರ್ಯಕ್ರಮಗಳಲ್ಲಿ ಕನ್ನಡಿಗರು ಭಾಗವಹಿಸಬೇಕು. ಈ ಮೂಲಕ ಗ್ರಾಮೀಣಮಟ್ಟದಲ್ಲಿ ಕನ್ನಡವನ್ನು  ಉಳಿಸುವ ಪ್ರಯತ್ನ ನಡೆಯಬೇಕು ಎಂದು  ಉಪಜಿಲ್ಲಾ ಶಿಕ್ಷಣಾಕಾರಿ ಕಚೇರಿ ಗುಮಾಸ್ತ  ಶ್ರೀಶಕುಮಾರ್ ಪಂಜಿತ್ತಡ್ಕ  ಹೇಳಿದರು. 
   ಕಣ್ಣೂರು  ವಿಶ್ವವಿದ್ಯಾನಿಲಯದ  ವಿದ್ಯಾನಗರ ಚಾಲದಲ್ಲಿರುವ ಭಾರತೀಯ ಭಾಷಾ ಅಧ್ಯಯನಾಂಗ  ಸಂಸ್ಥೆಯ ನೇತೃತ್ವದಲ್ಲಿ ಸಿರಿಚಂದನ ಕನ್ನಡ ಯುವಬಳಗ ಕಾಸರಗೋಡು  ಇದರ ಸಹಯೋಗದೊಂದಿಗೆ ವಿದ್ಯಾನಗರ ಚಾಲದಲ್ಲಿರುವ ಭಾರತೀಯ ಭಾಷಾ ಅಧ್ಯಯನಾಂಗ ಸಂಸ್ಥೆಯಲ್ಲಿ ಮಂಗಳವಾರ ನಡೆದ ಕಾಸರಗೋಡು ಕನ್ನಡ ಪರಂಪರೆ  ವಿಚಾರಸಂಕಿರಣ ದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾಸರಗೋಡಿನಲ್ಲಿ ಕನ್ನಡ ಕ್ಷೀಣಿಸುತ್ತಿದ. ಇದಕ್ಕೆ ಹಲವಾರು ಕಾರಣಗಳಿವೆ. ಕಾಸರಗೊಡಿನಲ್ಲಿ ಕನ್ನಡ ಸಂಘಟನೆಗಳು ಹೆಚ್ಚಾಗಿವೆ. ಅವರವರ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮನಸ್ಥಿತಿ ಕನ್ನಡಿಗರಲ್ಲಿ ಕಂಡುಬರುತ್ತಿದೆ. ಇದಲ್ಲದೆ ಕಾಸರಗೋಡಿನಿಂದ  ವಿದೇಶಗಳಿಗೆ, ಅನ್ಯರಾಜ್ಯಕ್ಕೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಹೀಗೆ ವಲಸೆಹೋದಾಗ ಅವರು ತಾವಿರುವ ಭೂಮಿಯನ್ನು ಮಲೆಯಾಳಿಗಳಿಗೆ ಮಾರಾಟ ಮಾಡುವುದು ಕಂಡುಬರುತ್ತಿದೆ. ಹೀಗೆ ಮಾರಾಟ ಮಾಡುವುದರಿಂದ ಕನ್ನಡದ ಒಂದು ಜನಾಂಗವೇ ಇಲ್ಲವಾಗುವ ದುಸ್ಥಿತಿಯುಂಟಾಗುತ್ತಿದೆ. ಆಂಗ್ಲ ವ್ಯಾಮೋಹವೂ ಕೂಡಾ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಎಲ್ಲ ಕಾರಣಗಳು ಕನ್ನಡ ಕ್ಷೀಣಿಸಲು ಕಾರಣವಾಗುತ್ತಿವೆ ಎಂದರು. ಕಾಸರಗೋಡಿನಲ್ಲಿ ಕನ್ನಡದ ಸಮರ್ಥ ನಾಯಕರ ಕೊರತೆಯಿದೆ. ಈಗ ಕನ್ನಡ ನಾಯಕರಿದ್ದಾರಾದರೂ ಮುಂದಿನ ತಲೆಮಾರಿನ ನಾಯಕರು ಕಂಡುಬರುತ್ತಿಲ್ಲ. ಅಂತಹ ನಾಯಕರನ್ನು ನಮ್ಮೊಳಗೆ ನಾವು ಕಂಡುಕೊಳ್ಳಬೇಕು ಎಂದು ಅವರು ಹೇಳಿದರು.  ಕನ್ನಡಕ್ಕಾಗಿ ದನಿ ಎತ್ತಲು ಧೈರ್ಯ ತಂದುಕೊಳ್ಳಬೇಕು. ಪ್ರತಿಯೊಂದು ಶಾಲೆಗಳಲ್ಲೂ  ಕನ್ನಡ ವಿದ್ಯಾಥರ್ಿಗಳ  ಸಂಘಗಳು ರೂಪುಗೊಳ್ಳಬೇಕು ಎಂದು ಅವರು ಕರೆ ನೀಡಿದರು.
    ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗಳಲ್ಲಿ ಮಹಿಳಾ ಮೀಸಲಾತಿ, ಅಲ್ಪಸಂಖ್ಯಾತ ಮೀಸಲಾತಿ ಇರುವಂತೆ  ಕಾಸರಗೋಡು ಮತ್ತು ಮಂಜೇಶ್ವರದಲ್ಲಿ ಭಾಷಾ ಮೀಸಲಾತಿ  ಸೀಟುಗಳು  ಮಂಜೂರುಗೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕನ್ನಡ ಭಾಷೆ ಮತ್ತು ಸಂಸ್ಕೃತಿಯ  ಉಳಿವಿಗೆ ಯಕ್ಷಗಾನ ಕಲೆಯ ಉಳಿವು ಪ್ರಮುಖವಾಗಿದ್ದು, ಯಕ್ಷಗಾನ ಇನ್ನಷ್ಟು ವಿಸ್ತರಿಸಿದರೆ, ಹೊಸತಲೆಮಾರಿಗೆ ಅದನ್ನು ತಲುಪಿಸಿದರೆ ಕನ್ನಡ ಸಾಧ್ಯ. ಯಕ್ಷಗಾನವನ್ನು ಮುಂದಿನ ಜನಾಂಗಕ್ಕೆ ದಾಟಿಸಬೇಕು ಎಂದು ಅವರು ಹೇಳಿದರು.
   ಗಡಿನಾಡಿನ ಗಮಕ ಕಲಾ ಪರಿಷತ್ತು ಅಧ್ಯಕ್ಷ ತೆಕ್ಕೇಕೆರೆ ಶಂಕರನಾರಾಯಣ  ಭಟ್  ವಿಚಾರಸಂಕಿರಣವನ್ನು ಉದ್ಘಾಟಿಸಿದರು. ಕನ್ನಡ ಹೋರಾಟ ಪರಂಪರೆ ಎಂಬ ವಿಷಯದಲ್ಲಿ  ಶೇಣಿ ಶ್ರೀ ಶಾರದಾಂಬ ಹಿರಿಯ  ಪ್ರೌಢಶಾಲೆಯ  ಅಧ್ಯಾಪಕ  ಅಬ್ದುಲ್ ರಶೀದ್ ಪಿ. ಮಾತನಾಡಿ, ಕಾಸರಗೋಡಿನಲ್ಲಿ  ಇಂದು ಕನ್ನಡಿಗರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಶೈಕ್ಷಣಿಕ ಕ್ಷೇತ್ರದಲ್ಲಿ ಕನ್ನಡ ಕ್ಷೀಣಿಸುತ್ತಿದೆ. ಎಲ್ಲ ಕನ್ನಡಿಗರು ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಒದಗಿಸಿಕೊಡಬೇಕು. ಕನ್ನಡ ಅಧ್ಯಾಪಕರು ಕಾಸರಗೋಡಿನಲ್ಲಿ ಕನ್ನಡಿಗರಿಗಿರುವ ಸವಲತ್ತುಗಳ ಬಗ್ಗೆ ಅರಿವು ಮೂಡಿಸಬೇಕು. ಹೈಯರ್ ಸೆಕಂಡರಿಯಲ್ಲಿ ಕನ್ನಡವನ್ನು ದ್ವಿತೀಯ ಭಾಷೆಯಾಗಿ ತೆಗೆದುಕೊಳ್ಳುವವರ ಸಂಖ್ಯೆ ಕಡಿಮೆಯಾಗಿರುವುದರಿಂದ ಕನ್ನಡ ಪದವಿಗಳಿಗೆ ಪ್ರವೇಶಿಸುವ ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತಿದೆ. ಆದುದರಿಂದ ಹೊಸದಾಗಿ ಹೈಯರ್ ಸೆಕಂಡರಿಗೆ ಪ್ರವೇಶಿಸುವ ಕನ್ನಡ ವಿದ್ಯಾಥರ್ಿಗಳು ಕನ್ನಡವನ್ನು  ದ್ವಿತೀಯ ಭಾಷೆಯಾಗಿ ಆಯ್ಕೆ ಮಾಡಬೇಕು.
    ಕನ್ನಡ ಮಾಧ್ಯಮ ಶಾಲೆಗಳಿಗೆ  ವಿದ್ಯಾಥರ್ಿಗಳನ್ನು  ಸಂಗ್ರಹಿಸುವ ಪ್ರಯತ್ನ ಒಂದೆಡೆ ನಡೆಯುತ್ತಿರುವಾಗ ಇನ್ನೊಂದೆಡೆ ಮಲೆಯಾಳ ಮಾಧ್ಯಮಕ್ಕೆ ವಿದ್ಯಾಥರ್ಿಗಳನ್ನು ಸಂಗ್ರಹಿಸಲು  ಹೊರಡುವ ಮಲೆಯಾಳಿಗರು  ಕನ್ನಡ ಮಾಧ್ಯಮದಲ್ಲಿ ಕಲಿತರೆ ಏನೂ ಪ್ರಯೋಜನ ಇಲ್ಲ ಎಂಬ ತಪ್ಪು ತಿಳುವಳಿಕೆಯನ್ನು ಕನ್ನಡಿಗರಿಗೆ ನೀಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು. ಕನ್ನಡ ಮತ್ತು ಕಳ್ಳಿಗೆ-ಕುಣಿಕುಳ್ಳಾಯ ಎಂಬ ವಿಷಯದಲ್ಲಿ ಲವೀನ ಪ್ರೀತಿ ಕ್ರಾಸ್ತ ಉಪನ್ಯಾಸ ನೀಡಿ, ಕಾಸರಗೋಡಿನಲ್ಲಿ ಇಂದು ಕನ್ನಡಿಗರು ಅನುಭವಿಸುತ್ತಿರುವ ಅನೇಕ ಸವಲತ್ತುಗಳು ಕಳ್ಳಿ ಮಹಾಬಲ ಭಂಡಾರಿ ಮತ್ತು ಯು. ಪಿ.  ಕುಣಿಕುಳ್ಳಾಯರ ಕೊಡುಗೆ ಎಂಬುದು ಇಲ್ಲಿನವರಿಗೆ ತಿಳಿದಿಲ್ಲ. ಕನ್ನಡಕ್ಕೆ ಸಂಬಂಸಿದಂತೆ  ಹೋರಾಡಲು  ಒಂದು ಸಣ್ಣ  ಕಾರಣ ಸಿಕ್ಕಿದರೆ  ಸಾಕು ಆ ಎಳೆಯನ್ನು ಹಿಡಿದು ಅವರು ಶತಪ್ರಯತ್ನ ಮಾಡುತ್ತಿದ್ದರು, ಕಾಸರಗೋಡಿನ ಕನ್ನಡಿಗರಿಗೆ ಸಮಸ್ಯೆ ಎದುರಾದಗಲೆಲ್ಲ ಅವರು ಕಳ್ಳಿಗೆ, ಕುಣಿಕುಳ್ಳಾಯರ ಬಳಿ ಹೋಗುತ್ತಿದ್ದರು.  ವಿವಿಧ ವಲಯಗಳಲ್ಲಿ ಕನ್ನಡ ಮೀಸಲಾತಿ ಹುದ್ದೆಗಳು, ಕನ್ನಡ ಪ್ರದೇಶಗಳಲ್ಲಿ ಕನ್ನಡದಲ್ಲಿ ಪ್ರಕಟಣೆಗಳು, ಸೂಚನಾ ಫಲಕಗಳು, ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಕೋಸರ್್ಗಳು, ಸೀಟು ಮೀಸಲಾತಿ ಹೀಗೆ ಹಲವಾರು ಸವಲತ್ತುಗಳನ್ನು  ಕಳ್ಳಿಗೆ-ಕುಣಿಕುಳ್ಳಾಯರು ದೊರಕಿಸಿಕೊಟ್ಟಿದ್ದಾರೆ. ಶಾಸಕರಾಗಿ, ನ್ಯಾಯವಾದಿಗಳಾಗಿ ಅವರು ಕನ್ನಡಿಗರ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಂಡು ಅವುಗಳಿಗೆ ಪರಿಹಾರ ಕಾಣುವಲ್ಲಿ ಯಶಸ್ವಿಯಾದರು. ಆದರೆ ಕಾಸರಗೋಡು ಕನರ್ಾಟಕಕ್ಕೆ ಸೇರಬೇಕು ಎಂಬ ಅವರ ಆಸೆ ಮಾತ್ರ ಕೊನೆಗೂ ಸಾಧ್ಯವಾಗಲಿಲ್ಲ ಎಂದರು. ಕಳ್ಳಿಗೆ, ಕುಣಿಕುಳ್ಳಾಯರು ತಮ್ಮ ಹೋರಾಟದ ಫಲವಾಗಿ ಕಾಸರಗೋಡಿನಲ್ಲಿ ಕನ್ನಡಿಗರಿಗೆ ಒದಗಿಸಿಕೊಟ್ಟ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಲು, ಅವುಗಳನ್ನು ಮುಂದಿನ ತಲೆಮಾರಿಗೆ ಅಳಿಸಲು ಹಾಗೂ ಅವರು ದೊರಕಿಸಿಕೊಟ್ಟ ಸವಲತ್ತುಗಳಲ್ಲಿ ಈಗ ಸ್ಥಗಿತಗೊಂಡಿರುವವುಗಳನ್ನು ಪುನರಾರಂಭಿಸಲು ಕನ್ನಡಿಗರು ಪ್ರಯತ್ನಿಸಬೇಕು. ಇದು ಕನ್ನಡ ನಾಯಕರಾದ ಕಳ್ಳಿಗೆ-ಕುಣಿಕುಳ್ಳಾಯರಿಗೆ ನಾವು ಸಲ್ಲಿಸುವ ಗೌರವ ಎಂದರು.
    ಕಣ್ಣೂರು ವಿಶ್ವವಿದ್ಯಾನಿಲಯದ ಭಾರತೀಯ ಭಾಷಾ ಅಧ್ಯಯನಾಂಗದ ನಿದರ್ೆಶಕ ಡಾ. ರಾಜೇಶ್ ಬೆಜ್ಜಂಗಳ  ಪ್ರಾಸ್ತಾವಿಕ  ಮಾತುಗಳನ್ನಾಡಿರು. ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಮಾತನಾಡಿದರು.  ಚುಟುಕು, ಹಾಸ್ಯ ಕವಿ  ತೆಕ್ಕೇಪಡಿ  ಶಂಕರನಾರಾಯಣ ಭಟ್ ,  ನಾಟಕಕಾರಯತೀಶ್ ಬಲ್ಲಾಳ್ ಉಪಸ್ಥಿತರಿದ್ದರು. ಸುಜಿತ್ ಕುಮಾರ್ ಸಿ. ಎಚ್. ಆಶಯ ಗೀತೆ ಹಾಡಿದರು. ಎಂ. ಫಿಲ್ ವಿದ್ಯಾಥರ್ಿನಿ ಸಂಧ್ಯಾ ಕಲ್ಲಕಟ್ಟ ಕಾರ್ಯಕ್ರಮ ನಿರೂಪಿಸಿದರು. ಎಂ.ಫಿಲ್ ವಿದ್ಯಾಥರ್ಿಗಳಾದ  ಪ್ರದೀಪ್ ಸ್ವಾಗತಿಸಿ, ಸೌಮ್ಯ ವಂದಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries