HEALTH TIPS

No title

         ಸತ್ಸಂಗ ಉತ್ತಮ ಕಾರ್ಯಗಳಿಗೆ ಪ್ರೇರಣೆ-ಡಾ.ವಿ.ಆರ್.ಗೌರೀಶಂಕರ್
  ಉಪ್ಪಳ: ಧರ್ಮ ಎಲ್ಲರನ್ನೂ ಒಂದುಗೂಡಿಸುತ್ತದೆ. ನಂಬಿಕೆ ಇರುವವನಿಗೂ ಇಲ್ಲದವನಿಗೂ ಬೇಕಿರುವುದು ಸಂತಸದ ಬಾಳ್ವೆ ಮತ್ತು ಸಂತೋಷಮಯ ಜೀವನ. ಸುಖಕರ ಬಾಳು ಮನುಷ್ಯನ ಆಶಯ ಎಂದು ಶೃಂಗೇರಿ ಕ್ಷೇತ್ರದ ಆಡಳಿತಾಧಿಕಾರಿ ಗುರುಸೇವಾ ಧುರೀಣ ಪದ್ಮಶ್ರೀ ಡಾ.ವಿ.ಆರ್ ಗೌರೀಶಂಕರ್ ಹೇಳಿದರು.
   ಸಜಂಕಿಲ ಶ್ರೀ ದುಗರ್ಾಪರಮೇಶ್ವರಿ ಭಜನಾ ಮಂದಿರ ಪರಿಸರದಲ್ಲಿ ನೂತನವಾಗಿ ನಿಮರ್ಿಸಲು ಉದ್ದೇಶಿಸಿರುವ ಶ್ರೀ ಶಾರದಾ ಸಭಾ ಮಂಟಪದ ಶಿಲಾನ್ಯಾಸ ಕಾರ್ಯಕ್ರಮವನ್ನು ನಿರ್ವಹಿಸಿದ ಬಳಿಕ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
  ಮುಕ್ತಿ ಮಾರ್ಗವೇ ಜೀವನದ ಆದ್ಯತೆ ಮತ್ತು ಇದುವೇ ಪರಮಸುಖಕ್ಕೆ ಕಾರಣ ಎಂದು ಆದಿ ಶಂಕರರು ಹೇಳಿದ್ದರು. ಸಾಮಾನ್ಯ ಮುನುಷ್ಯನಿಗೆ ಸತ್ಸಂಗವೇ ಮುಕ್ತಿ ಮತ್ತು ಸಂತೋಷದ ರಹದಾರಿ. ಇತರರಿಗೆ ಒಳಿತನ್ನು ಬಯಸುವುದೇ ಪುಣ್ಯಪ್ರದ ಕೆಲಸ, ಸತ್ಸಂಗದ ಮೂಲಕ ಉತ್ತಮ ಕಾರ್ಯಗಳಿಗೆ ಪ್ರೇರಣೆ ದೊರೆಯುತ್ತದೆ ಎಂದು ಅವರು ಹೇಳಿದರು. ಸಮಾಜ, ಸಮುದಾಯದ ಪೂರಕ ಕಾರ್ಯಗಳಿಗೆ ಪ್ರೇರಣೆಯಾಗುವವನೆ ಗುರು. 1200 ವರ್ಷಗಳ ಹಿಂದೆ ಆದಿ ಶಂಕರರು ಧರ್ಮ ಆಧ್ಯಾತ್ಮದ ಗುರುವಾಗಿ ಸಮಾಜ ಮತ್ತು ಧಂದ ಅಭ್ಯುದಯಕ್ಕೆ ಕಾರಣವಾಗಿದ್ದರು. ಈ ಅವಿಚ್ಛಿನ್ನ ಪರಂಪರೆಯನ್ನು ದಕ್ಷಿಣ ಭಾರತದಲ್ಲಿ ಶೃಂಗೇರಿ ಆಮ್ನಾಯ ಪೀಠದ ಮೂಲಕ ಮುಂದುವರೆಸಲಾಗುತ್ತಿದೆ. ಶೃಂಗೇರಿಯ ಸ್ವಾಮಿಧ್ವಯರ ಆಶೀವರ್ಾದದಿಂದ ನೂತನ ಕಟ್ಟಡದ ನಿಮರ್ಾಣ ಕಾರ್ಯವು ಸಾಂಗವಾಗಿ ನೆರವೇರಲಿ ಎಂದು ಹಾರೈಸಿದರು.
    ಭಜನಾ ಮಂದಿರ ಸಮಿತಿ ಅಧ್ಯಕ್ಷ ವಾಸುದೇವ ಭಟ್ ಗೌರಿ ಶಂಕರ ಅವರಿಗೆ ಕಿರು ಕಾಣಿಕೆ ನೀಡಿ ಗೌರವಿಸಿದರು. ಹರೀಶ್ ಭಟ್ ಆಟಿಕುಕ್ಕೆ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ರಾಮಕೃಷ್ಣ ಭಟ್, ವಿಶ್ವನಾಥ ಭಟ್, ಎಂ.ಗೋವಿಂದ ಭಟ್, ರಮೇಶ್ ಬಾಯಾರು, ಆವಳಮಠ ಗಣಪತಿ ಭಟ್ ಉಪಸ್ಥಿತರಿದ್ದರು. ಸದಾನಂದ ಎಂ. ಸ್ವಾಗತಿಸಿ, ಗಿರಿ ಸಂಧ್ಯಾಗೀತಾ ಪ್ರಾರ್ಥನೆ ಹಾಡಿದರು.ಕಾರ್ಯಕ್ರಮದ ನಂತರ ವಿಠಲನಾಯಕ್ ಕಲ್ಲಡ್ಕ ಅವರಿಂದ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಿತು.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries