HEALTH TIPS

No title

       ಕಲಾಪ್ರೇಮವನ್ನು ಸಾಬೀತುಪಡಿಸಿದ ಮಾನನೀಯರು
   ಬದಿಯಡ್ಕ: ಯಕ್ಷಗಾನ ಕಲಾ ಪ್ರಕಾರವೆಂದರೆ ಕರಾವಳಿಯ ಜನರ ಜೀವನಾಡಿ ಎಂಬ ಕಾಲವೊಂದಿತ್ತು. ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಜನರ ಆಸಕ್ತಿ ಕುಸಿಯುತ್ತಿದೆ, ಬಯಲಾಟವನ್ನು ಕುಳಿತು ನೋಡುವ ವ್ಯವಧಾನ ಜನರಿಗಿಲ್ಲವೆಂಬ ಮಾತುಗಳು ಕೇಳಿಬರುತ್ತಿದೆ. ಈ ಮಧ್ಯೆ ಕೆಲವು ಪಾರಂಪರಿಕವಾಗಿ ಯಕ್ಷಗಾನ ಕಲೆಯನ್ನು ಪೋಶಿಸಿಕೊಂಡುಬರುತ್ತಿರುವ ಪ್ರದೇಶಗಳು ತಮ್ಮ ಕಲಾಪ್ರೇಮವನ್ನು ಬಿಟ್ಟುಕೊಡದೆ ಪ್ರೋತ್ಸಾಹಗಳ ಸುರಿಮಳೆಯ ಮೂಲಕ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ತಮ್ಮದೇ ಕೊಡುಗೆಯ ಮೂಲಕ ಗಮನ ಸೆಳೆಯುತ್ತಿದೆ.
    ನೀಚರ್ಾಲು ಸಮೀಪದ ಮಾನ್ಯದಲ್ಲಿ ಪ್ರತಿವರ್ಷ ಮೇ. 8 ರಂದು ಶ್ರೀಧರ್ಮಸ್ಥಳ ಮೇಳದ ಯಕ್ಷಗಾನ ಬಯಲಾಟ ಪ್ರದರ್ಶನ ಚಾಚೂ ತಪ್ಪದೆ ನಡೆಯುತ್ತಿದೆ. ಮಂಗಳವಾರ ಮಾನ್ಯದಲ್ಲಿ ಪ್ರದರ್ಶನಗೊಂಡ ಶನೈಶ್ಚರ ಮಹಾತ್ಮ್ಯೆ ಪ್ರಸಂಗದ ಬಯಲಾಟಕ್ಕೆ ವಾಡಿಕೆಯಂತೆ ಸಾವಿರಕ್ಕಿಂತಲೂ ಮಿಕ್ಕಿದ ಪ್ರೇಕ್ಷಕರು ಆಗಮಿಸಿದ್ದರು. ರಾತ್ರಿ 7ರ ಸುಮಾರಿಗೆ ಪರಂಪರೆಯ ಕ್ರಮಗಳೊಂದಿಗೆ ಆರಂಭಗೊಳ್ಳುತ್ತಿರುವಂತೆ ವರುಣ ದೇವ ಭುವಿಯನ್ನು ಸ್ಪಶರ್ಿಸುವ ತವಕದಿಂದ ಹನಿಹನಿಯಾಗಿ ಬರಲಾರಂಭಿಸಿತು. ವೇದಿಕೆಯ ಮೇಲ್ಬದಿಗೆ ಟಪರ್ಾಲು ಹಾಸಿದ್ದರಿಂದ ಪ್ರದರ್ಶನ ಮುಂದುವರಿಯಿತು. ಪ್ರೇಕ್ಷಕರು ಹನಿ ಮಳೆಯನ್ನೂ ಲೆಕ್ಕಿಸದೆ ಪ್ರದರ್ಶನ ವೀಕ್ಷಿಸಿದರು. ಮಧ್ಯೆ ಒಂದಷ್ಟು ಬಿರುಸುಗೊಂಡಂತೆ ಮಳೆ ಕಂಡುಬಂದಾಗ ಸಮೀಪದ ಶಾಲಾವರಣದಿಂದ ಬಯಲಾಟವನ್ನು ತವಕದಿಂದ ವೀಕ್ಷಿಸಿರುವುದು ಕಲಾಪ್ರೇಮದ ಸಂಕೇತವಾಯಿತು. ಬಯಲಾಟ ಮಧ್ಯರಾತ್ರಿ 1ರ ಸುಮಾರಿಗೆ ಕೊನೆಗೊಳ್ಳುವಲ್ಲಿಯ ವರೆಗೂ ಎಡೆಬಿಡದೆ ಸುರಿದ ತುಂತುರು ಮಳೆಯಲ್ಲೂ ಪ್ರೇಕ್ಷಕರು ಕದಲದೆ ಯಕ್ಷಗಾನ ವೀಕ್ಷಿಸಿದರು.
    ಭಾರೀ ಹಿನ್ನೆಲೆಯ ಬಯಲಾಟ:
   ಮೇ.8 ರಂದು ಮಾನ್ಯ ಶಾಲಾ ವಠಾರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಮೇಳದವರು ಪ್ರದಶರ್ಿಸುವ ಯಕ್ಷಗಾನ ಬಯಲಾಟ ಪ್ರದರ್ಶನಕ್ಕೆ 40 ವರ್ಷಕ್ಕಿಂತಲೂ ಹೆಚ್ಚಿನ ಇತಿಹಾಸವಿದೆ. ಮಂಗಳೂರಿನ ಖ್ಯಾತ ನಿತ್ಯಾನಂದ ಗ್ರಂಥಾಲಯದ ಮಾಲಕರಾಗಿದ್ದ ಮಾನ್ಯ ವೆಂಕಟರಾವ್ ರವರು ಹರಕೆಯ ರೂಪದಲ್ಲಿ ತಮ್ಮ ಹುಟ್ಟೂರಲ್ಲಿ ಬಯಲಾಟ ಆಯೋಜಿಸಲು ಆರಂಭಿಸಿದರು. ಪ್ರತಿವರ್ಷ ಮೇ. 8 ರಂದು ಮಾನ್ಯದಲ್ಲಿ ಧರ್ಮಸ್ಥಳ ಮೇಳದವರ ಬಯಲಾಟವೆಂಬುದು ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಯ ಕಲಾಪ್ರೇಮಿಗಳಿಗೆ ಮರೆಯಲಾಗದ ದಿನವಾಗಿ ಗುರುತಿಕೊಂಡು ದಾಖಲಾಗಿರುವ ಬಯಲಾಟ. ಪ್ರಸ್ತುತ ವೆಂಕಟರಾವ್ ರವರ ಪುತ್ರ ರವಿಶಂಕರ ಮತ್ತು ಕುಟುಂಬಿಕರು ಈ ಬಯಲಾಟವನ್ನು ಆಯೋಜಿಸುತ್ತಿದ್ದಾರೆ.
   



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries