HEALTH TIPS

No title

            ಖಂಡಿಗೆ ಶಾಮ ಭಟ್ರ ಕೊಡುಗೆಗಳು ಸದಾ ಅನುಸರಣೀಯ-ಎಡನೀರು ಶ್ರೀ
    ಬದಿಯಡ್ಕ: ಸರಳ, ಸಜ್ಜನ ಜೀವನ ಶೈಲಿ ಉನ್ನತ ಸಾಧನೆಗೆ ಹಾದಿ ಸುಗಮಗೊಳಿಸುತ್ತದೆ. ಬಹುಮುಖ ಸಾಧನೆಗಳ ಮೂಲಕ ಖಂಡಿಗೆ ಶಾಮ ಭಟ್ ರವರ ಜೀವನ-ಸಾಧನೆಗಳು ಎಂದಿಗೂ ಸರ್ವ ಅನುಸರಣೀಯ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಅನುಗ್ರಹ ಆಶೀರ್ವಚನ ನೀಡಿದರು.
   ನೀಚರ್ಾಲು ಮಹಾಜನ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಸೋಮವಾರ ಸಂಜೆ ಖಂಡಿಗೆ ಶಾಮ ಭಟ್ ಪ್ರತಿಷ್ಠಾನ ನೀಚರ್ಾಲು ಆಯೋಜಿಸಿದ್ದ ಸಾಧನಾ ಶಕಪುರುಷ ಖಂಡಿಗೆ ಶಾಮ ಭಟ್  ಸಂಸ್ಮರಣೆ, ಪ್ರಶಸ್ತಿ ಪ್ರಧಾನ ಹಾಗೂ ಯಕ್ಷಗಾನ ಬಯಲಾಟ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
    ಗಡಿನಾಡು ಕಾಸರಗೋಡಿನ ಸಮಗ್ರ ಸಾಂಸ್ಕೃತಿಕ, ಸಾಹಿತ್ತಿಕ, ಸಾಮಾಜಿಕ ಸಹಿತ ಎಲ್ಲಾ ರಂಗಗಳಲ್ಲೂ ಖಂಡಿಗೆ ಶಾಮ ಭಟ್ ರವರ ತನ್ನದೇ ಕೊಡುಗೆಗಳು ಸದಾ ಸ್ಮರಣೀಯ. ಸಂಗೀತ, ಯಕ್ಷಗಾನ ಮತ್ತು ಶಿಕ್ಷಣ ಕ್ಷೇತ್ರಗಳ ಅವರ ಅಪರಿಮಿತ ಜ್ಞಾನ ಕರಾವಳಿಯಾದ್ಯಂತ ಗುರುತಿಸಿಕೊಳ್ಳುವಂತೆ ಸ್ಮರಣೀಯರಾಗಿದ್ದು, ಶ್ರೀಎಡನೀರು ಮಠ ಹಾಗೂ ಶಾಮ ಭಟ್ ರವರ ನಿಕಟ ಸಂಬಂಧಗಳು ಅತ್ಯಪೂರ್ವವಾಗಿತ್ತು ಎಂದು ಶ್ರೀಗಳು ಈ ಸಂದರ್ಭ ನೆನಪಿಸಿದರು.
   ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎ.ವಿ.ನಾರಾಯಣ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಹಿರಿಯ ಸಂಸ್ಕೃತ ವಿದ್ವಾಂಸ, ಖ್ಯಾತ ಅರ್ಥಧಾರಿ ವಿದ್ವಾನ್ ಉಮಾಕಾಂತ ಭಟ್ ಮೇಲುಕೋಟೆ ಹಾಗೂ ಸಂಗೀತ ವಿದ್ವಾಂಸ ವಿದ್ವಾನ್ ಕಲ್ಮಾಡಿ ಸದಾಶಿವ ಆಚಾರ್ಯರಿಗೆ ಪ್ರಸ್ತುತ ಸಾಲಿನ ಖಂಡಿಗೆ ಶಾಮ ಭಟ್ ಪ್ರತಿಷ್ಠಾನದ ಖಂಡಿಗೆ ಶಾಮ ಭಟ್ ಪ್ರಶಸ್ತಿ ಪ್ರಧಾನಗೈದು ಗೌರವಿಸಲಾಯಿತು.
   ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿದ್ವಾನ್ ಉಮಾಕಾಂತ ಭಟ್ ಮೇಲುಕೋಟೆ ಯವರು, ಸಂಸ್ಕೃತ, ಯಕ್ಷಗಾನ ಮತ್ತು ಕನ್ನಡ ನಾಡುನುಡಿಗೆ ಖಂಡಿಗೆ ಶಾಮ ಭಟ್ ರವರು ಹಾಕಿಕೊಟ್ಟಿರುವ ದಾರಿದೀಪ ಅಪ್ರತಿಮವಾದುದು. ಎಲ್ಲರಿಗೂ ಮುಕ್ತವಾಗಿರುವ, ಮುಕ್ತರಾಗಿಸುವ ಮಹಾಜನ ವಿದ್ಯಾಸಂಸ್ಥೆ ನಾಡಿನ ಹೆಮ್ಮೆ ಎಂದು ತಿಳಿಸಿದರು. ಸಾಮಾನ್ಯನನ್ನು ಜ್ಞಾನದ ದಡ ಸೇರಿಸುವ ಸೇತುವಾಗಿ ವಿದ್ಯಾಲಯ ಮತ್ತು ಬದುಕಿನ ಜಂಜಡಗಳಿಂದ ಪಾರಮಾಥರ್ಿಕತೆಯೆಡೆಗೆ ಕರೆದೊಯ್ಯುವ ಮಾರ್ಗದಶರ್ಿಯಾಗಿ ಸೇತುವಾಗಿರುವ ಗುರುವಿನ ಅನುಗ್ರಹಗಳು ಸಾರ್ಥಕತೆಗೆ ಕಾರಣವಾಗುತ್ತದೆ. ಇಂತಹ ಪ್ರಶಸ್ತಿ ತನಗೊದಗಿರುವುದು ರಾಷ್ಟ್ರ ಪ್ರಶಸ್ತಿಗಿಂತಲೂ ಮಿಗಿಲು ಎಂದು ತಿಳಿಸಿದರು.
   ಪ್ರಶಸ್ತಿ ಸ್ವೀಕರಿಸಿದ ಇನ್ನೋರ್ವ ಸಾಧಕ ವಿದ್ವಾನ್ ಕಲ್ಮಾಡಿ ಸದಾಶಿವ ಆಚಾರ್ಯ ರವರು ಮಾತನಾಡಿ ಸಾಧನೆಗಳನ್ನು ಗುರುತಿಸಿ ನೀಡುವ ಪ್ರಶಸ್ತಿಗಳು ಇನ್ನಷ್ಟು ಕಾಯರ್ೋನ್ಮುಖತೆಗೆ ಪ್ರೇರಣೆ ನೀಡುತ್ತದೆ. ಕಾಮನೆ ರಹಿತವಾದ ಪಥ ಗುರಿಯೆಡೆಗೆ ಮುನ್ನಡೆಸುತ್ತದೆ. ಪ್ರತಿಯೊಬ್ಬರಲ್ಲೂ ಇದು ಮೈಗೂಡಿದಾಗ ನೆಮ್ಮದಿ ಮೂಡಿಬರುತ್ತದೆ ಎಂದು ತಿಳಿಸಿದರು.
   ಪ್ರತಿಷ್ಠಾನದ ಉಪಾಧ್ಯಕ್ಷ ಡಾ.ರಮಾನಂದ ಬನಾರಿ ಸಂಸ್ಮರಣಾ ಭಾಷಣಗೈದು ಮಾತನಾಡಿದರು. ಬಾಲಚಂದ್ರ ಭಟ್ ಹಾಗೂ ಬಾಲ ಮಧುರಕಾನನ ಅಭಿನಂದನಾ ಪತ್ರ ವಾಚಿಸಿದರು. ಪ್ರತಿಷ್ಠಾನದ ಅಧ್ಯಕ್ಷ ನ್ಯಾಯವಾದಿ ಐ.ವಿ.ಭಟ್ ಸ್ವಾಗತಿಸಿ, ಕಾರ್ಯದಶರ್ಿ ರಾಜೇಂದ್ರ ಕಲ್ಲೂರಾಯ ಪಿ. ವಂದಿಸಿದರು. ಡಾ.ಸುಬ್ರಹ್ಮಣ್ಯ ಭಟ್ ಖಂಡಿಗೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶ್ರೀಎಡನೀರು ಮೇಳದವರಿಂದ ಗಜೇಂದ್ರ ಮೋಕ್ಷ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries