HEALTH TIPS

No title

                  ಸಂಗೀತವು ಸಂಸ್ಕೃತಿಯ ಪ್ರತೀಕ
                      ವೀಣಾವಾದಿನಿ ಸಂಗೀತ ಶಾಲೆಯಲ್ಲಿ ಡಾ. ಪೆರ್ಲ ಹೇಳಿಕೆ
    ಬದಿಯಡ್ಕ: ಸಾವಿರಾರು ವರ್ಷಗಳಿಂದ ಪರಂಪರೆಯ ಭಾಗವಾಗಿ ಹರಿದು ಬಂದಿರುವ ಶಾಸ್ತ್ರೀಯ ಸಂಗೀತವು ನಮ್ಮ ಸಂಸ್ಕೃತಿಯ ಪ್ರತೀಕ ಎಂದು ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿದರ್ೇಶಕ ಡಾ. ವಸಂತಕುಮಾರ ಪೆರ್ಲ ಅವರು ಹೇಳಿದರು.
   ಬಳ್ಳಪದವಿನ ನಾರಾಯಣೀಯಮ್ ಸಮುಚ್ಚಯದ ವೀಣಾವಾದಿನೀ ಸಂಗೀತ ಶಾಲೆಯಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಸಂಗೀತ ಶಿಬಿರದ ಬುಧವಾರ ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತಾಡುತ್ತಿದ್ದರು.
   ಪಾಶ್ಚಾತ್ಯ ದಾಳಿಯಿಂದ ಸಾಕಷ್ಟು ಹಾನಿಗೀಡಾಗಿದ್ದರೂ ಒಂದಿಷ್ಟೂ ಊನಗೊಳ್ಳದೆ ತನ್ನ ಶಾಸ್ತ್ರೀಯತೆಯನ್ನು ಉಳಿಸಿಕೊಂಡು ಬಂದಿರುವ ಮಹತ್ವ ನಮ್ಮ ಸಂಗೀತ ಕಲೆಯದು. ಅವುಗಳನ್ನು ಕಲುಷಿತಗೊಳಿಸದೆ ಹಾಗೆಯೇ ಉಳಿಸಿಕೊಂಡು ಬರುವಲ್ಲಿ ನಮ್ಮ ಯುವಜನತೆ ಪ್ರಮುಖ ಪಾತ್ರ ವಹಿಸಬೇಕಾಗಿದೆ. ದೇಶದ ಸಮಗ್ರತೆಯನ್ನು ಕಾಪಾಡಲು ಸಂಗೀತ ಕೂಡ ಬಹುಮುಖ್ಯ ಎಂದು ಡಾ. ಪೆರ್ಲ ಅವರು ಹೇಳಿದರು.
   ಕೇರಳ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಸಂಗೀತ ಗುರುಗಳಾದ ಶಿಬಿರ ನಿದರ್ೇಶಕ ಗೋವಿಂದನ್ ನಂಬೂದಿರಿ ತಾಮರಕ್ಕಾಡ್ ಅವರನ್ನು ಈ ಸಂದರ್ಭದಲ್ಲಿ ವೀಣಾವಾದಿನೀ ಸಂಚಾಲಕ ಬಳ್ಳಪದವು ಯೋಗೀಶ ಶರ್ಮ ಅವರು ಅತಿಥಿಗಳೊಂದಿಗೆ ಸನ್ಮಾನಿಸಿದರು.
   ಸಂಗೀತದ ಮೂಲಕ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬಹುದಲ್ಲದೆ ದೈವೀಕ ಅನುಭಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ವಯಲಿನ್ ವಿದ್ವಾಂಸ ಪ್ರಭಾಕರ ಕುಂಜಾರು ಈ ಸಂದರ್ಭದಲ್ಲಿ ಹೇಳಿದರು.
   ಮೂರು ದಿನಗಳ ಕಾಲ ನಡೆದ ಸಂಗೀತ ಶಿಬಿರದಲ್ಲಿ ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಿಂದ ಆಗಮಿಸಿದ ವಿದ್ಯಾಥರ್ಿಗಳು ಭಾಗವಹಿಸಿದ್ದರು. ಕುಮಾರಿ ಅಕ್ಷತಾ, ಸಹನಾ, ಶ್ರೇಯಾ, ಶ್ರೀನಿಧಿ ಮತ್ತು ಶೋಭನಾ ಮೊದಲಾದವರು ಶಿಬಿರದ ತಮ್ಮ ಅನುಭವಗಳನ್ನು ಹಂಚಿಕೊಂಡರು.
    ಸಂಚಾಲಕ ಯೋಗೀಶ ಶರ್ಮ ಬಳ್ಳಪದವು ಸ್ವಾಗತಿಸಿ ವಂದಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries