HEALTH TIPS

No title

             ಯಕ್ಷಗಾನ ಉಳಿವಿನ ಚಿಂತನೆ ನಡೆಸಬೇಕು : ಎಚ್.ಶ್ರೀಧರ ಹಂದೆ
   ಕುಂಬಳೆ: ಬದಲಾದ ಕಾಲಮಾನದಲ್ಲಿ ಯಕ್ಷಗಾನ ತನ್ನ ಚೌಕಟ್ಟನ್ನು ಮೀರಿ ಎಲ್ಲೆಲ್ಲೋ ಹೋಗುತ್ತಿದ್ದು ಇದನ್ನು ಸರಿಪಡಿಸುವ ನಿಟ್ಟಿನಿಂದ ಕಲಾವಿದರು ಒಂದಾಗಿ, ಉಳಿವಿನ ಬಗ್ಗೆ ಚಿಂತನೆ ನಡೆಸಿದಾಗ ಯಕ್ಷಗಾನ ಕಲೆಗೆ ಒಳ್ಳೆಯದಾಗುವುದು. ಯಕ್ಷಗಾನ ತಾಳಮದ್ದಳೆಯ ಅರ್ಥ`ಾರಿಗಳು ನಿಜವಾದ ಆಶು ಸಾಹಿತಿಗಳಾಗಿದ್ದು, ತಮ್ಮ ವಾಗ್ಝರಿಯ ಮೂಲಕ ಕವಿಯ ಆಶಯವನ್ನು ಬಿಡದೆ ವಿಭಿನ್ನ ಕಲ್ಪನಾ ಸ್ತರವನ್ನು ಕಟ್ಟಿಕೊಡಬಲ್ಲ, ನಿಜವಾದ ಸಾಹಿತಿಗಳು ಎಂದರು. ಯಕ್ಷಗಾನದಲ್ಲಿ ಅರ್ಥಗಾರಿಕೆ ಕುಣಿತ ಹಾಗೂ ವೇಷಗಳಿಗೆ ಮನಸೋತು ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಕೆಲಸಮಾಡುತ್ತಾ ಬಂದಿದ್ದೇವೆ. ಈ ನಿಟ್ಟಿನಲ್ಲಿ ಯಕ್ಷಗಾನದ ಮೂಲಸ್ವರೂಪ ಕಳೆದು ಹೋಗದಂತೆ ನೋಡಿಕೊಳ್ಳುವ ಜತೆಗೆ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಮೂಲ ಉದ್ದೇಶ ನಮ್ಮದಾಗಬೇಕು ಎಂದು ಾಡಿದ ಸಾಲಿಗ್ರಾಮ ಮಕ್ಕಳ ಮೇಳದ ನಿದರ್ೇಶಕ ಎಚ್.ಶ್ರೀಧರ ಹಂದೆ ಅಭಿಪ್ರಾಯ ವ್ಯಕ್ತಪಡಿಸಿದರು.
   ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಸಂಸ್ಥೆ ನಡೆಸಿಕೊಂಡು ಬರುತ್ತಿರುವ ತಾಳಮದ್ದಳೆ ಅಧ್ಯಯನ ಶಿಬಿರ "ಅಥರ್ಾಂತರಂಗ" ಸರಣಿ ಕಾರ್ಯಕ್ರಮದ ಏಳನೇ ಕಾರ್ಯಕ್ರಮ  ಶ್ರೀ ಸಾಲಿಗ್ರಾಮ ಮಕ್ಕಳ ಮೇಳ ಪಠೇಲರ ಮನೆ ಕೋಟ ಸಂಸ್ಥೆಯ ಸಹಯೋಗದೊಂದಿಗೆ ಹಾಗೂ ಯಶಸ್ವಿ ಕಲಾವೃಂದ ತೆಕ್ಕಟ್ಟೆ ಸಂಸ್ಥೆಯ ಸಹಕಾರದೊಂದಿಗೆ ಕುಂದಾಪುರದ ತೆಕ್ಕಟ್ಟೆ ಶ್ರೀ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ `ಅಥರ್ಾಂತರಂಗ-7' ಉದ್ಘಾಟಿಸಿ ಅವರು ಮಾತನಾಡಿದರು.
   ಹಿರಿಯ ಅರ್ಥಧಾರಿ ನಿವೃತ್ತ ಪ್ರಾಧ್ಯಾಪಕ ನಿಟ್ಟೂರು ಶಾಂತಾರಾಮ ಪ್ರಭು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತೆಕ್ಕಟ್ಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಮಾತನಾಡಿ ಕರಾವಳಿಯ ಗಂಡುಮೆಟ್ಟಿನ ಯಕ್ಷಗಾನ ಕಲೆ ಭಗವಂತನ ಮೇಲಿನ ನಂಬಿಕೆ ಹಾಗೂ ಜೀವನ ಸಂಸ್ಕಾರ ನೀಡಿದೆ. ಪ್ರಸ್ತುತ ಧಾವಂತದ ಜೀವನದಲ್ಲಿ ಇಂತಹ ಮೌಲ್ಯಯುತವಾದ ಕಲೆಗಳ ಉಳಿವಿನ ಬಗ್ಗೆ ಗಂಭೀರ ಚಿಂತನೆ ಮಾಡಬೇಕಾದ ಅನಿವಾರ್ಯ ಇದೆ ಎಂದರು.
   ಕಾರ್ಯಕ್ರಮದಲ್ಲಿ ಅರ್ಥಧಾರಿ, ಲೇಖಕ ರಾಧಾಕೃಷ್ಣ ಕಲ್ಚಾರ್, ರಾಮಕೃಷ್ಣ ಮಯ್ಯ ಸಿರಿಬಾಗಿಲು, ಜನಾರ್ಧನ ಹಂದೆ, ಬೆಂಗಳೂರು ಯಕ್ಷದೇಗುಲದ ಸಂಚಾಲಕ ಸುದರ್ಶನ ಉರಾಳ ತೆಕ್ಕಟೆ ಕೊಮೆ ಯಶಸ್ವಿ ಕಲಾ ವೃಂದದ ಸಂಘಟಕ ವೆಂಕಟೇಶ್ ವೈದ್ಯ ಕೊಮೆ, ಲಂಬೋದರ ಹೆಗಡೆ, ಹವ್ಯಾಸಿ ಅರ್ಥಧಾರಿ ರಂಗಪ್ಪಯ್ಯ ಹೊಳ್ಳ, ಹಿರಿಯ ಅರ್ಥಧಾರಿ ರಾಮದೇವ ಐತಾಳ, ನಿವೃತ್ತ ಆರೋಗ್ಯಾಧಿಕಾರಿ ಅಂಕಣಕಾರ ಬೇಳೂರು ರಾಘವ ಶೆಟ್ಟಿ, ಅರ್ಥಧಾರಿ ಗುಡ್ಮಿ ಶಿವಾನಂದ ಮಯ್ಯ, ಪ್ರೊ.ಎಸ್.ವಿ.ಉದಯಕುಮಾರ್ ಶೆಟ್ಟಿ, ಯುವ ಅರ್ಥಧಾರಿ ಡಾ.ಜಗದೀಶ್ ಶೆಟ್ಟಿ, ನಂದ್ರೊಳ್ಳಿ ಸುರೇಶ ಶೆಟ್ಟಿ ಬೇಳೂರು ಪ್ರಶಾಂತ ಭಟ್, ಮೀರಾ ವಿ.ಸಾಮಗ ಉಪಸ್ಥಿತರಿದ್ದರು.
   ಶಿಬಿರದಲ್ಲಿ `ಸಂವಾದ ವಿನ್ಯಾಸ, ವೈಖರಿ ವೈಶಿಷ್ಟ್ಯ' ಗಳ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಮುಕ್ತ ಸಂವಾದ ಹಾಗೂ ಅವಲೋಕನ ನಡೆಯಿತು. ಅವಲೋಕನದಲ್ಲಿ ಭಾಗವಹಿಸಿದ ಹಿರಿಯ ಅರ್ಥಧಾರಿ ವಾಸುದೇವ ಸಾಮಗ ಮಾತನಾಡಿ ಇಂತಹ ಕಾರ್ಯಕ್ರಮಗಳಿಂದ ಕಲೆಯ ಗೌರವ ಹೆಚ್ಚುವುದು. ಅಲ್ಲಲ್ಲಿ ಇಂತಹ ಕಾರ್ಯಕ್ರಮ ಜರಗಲಿ ಹಾಗೂ ವೃತ್ತಿ ಕಲಾವಿದರು ಹೆಚ್ಚೆಚ್ಚು ಭಾಗವಹಿಸುವಂತಾಗಲಿ ಎಂದರು. ಬೇಳೂರು ಪ್ರಶಾಂತ ಭಟ್ ಮಾತನಾಡಿ ಇಂತಹ ಕಾಯರ್ುಕ್ರಮಗಳು ಅತ್ಯಗತ್ಯ ಎಂದರು.
   ಕಲಾವಿದರಾಗಿ ಹಿಮ್ಮೇಳದಲ್ಲಿ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಪ್ರಫುಲ್ಲಚಂದ್ರ ನೆಲ್ಯಾಡಿ, ಅಡೂರು ಗಣೇಶ ರಾವ್, ರಾಜಾರಾಮ ರಾವ್ ಕುಂದಾಪುರ, ಅರ್ಥಧಾರಿಗಳಾಗಿ  ರಾಧಾಕೃಷ್ಣ ಕಲ್ಚಾರ್, ಸೀತಾರಾಮ ಭಟ್ ಸೇರಾಜೆ, ಹರೀಶ ಬಳಂತಿಮೊಗರು, ವಿಷ್ಣುಶರ್ಮ ವಾಟೆಪಡ್ಪು, ಭಾಗವಹಿಸಿದ್ದರು. ಸಾಲಿಗ್ರಾಮ ಮಕ್ಕಳ ಮೇಳದ ಕಾರ್ಯದಶರ್ಿ ಉಪನ್ಯಾಸಕ ಸುಜಯೀಂದ್ರ ಹಂದೆ ಸ್ವಾಗತಿಸಿ, ಗುರುರಾಜ ಹೊಳ್ಳ ಬಾಯಾರು ನಿರೂಪಿಸಿ ವಂದಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries