ಸಾಹಿತ್ಯದಲ್ಲಿ ಜೀವನಪ್ರೀತಿ ಮುಖ್ಯ : ಶೀಲಾಲಕ್ಷ್ಮಿ
ಕಾಸರಗೋಡು: ಬದುಕಿನ ಪ್ರತಿಬಿಂಬವಾಗಿರುವ ಸಾಹಿತ್ಯದಲ್ಲಿ ಜೀವನ ಪ್ರೀತಿಯ ಅಭಿವ್ಯಕ್ತಿ ಬಹಳಮುಖ್ಯ. ಅದನ್ನು ಸಮರ್ಪಕವಾಗಿ ಬಿಂಬಿಸಲು ಸಾಧ್ಯವಾದರೆ ಸಾಹಿತ್ಯದ ಉದ್ದೇಶ ಸಾರ್ಥಕವಾಗುತ್ತದೆ ಎಂದು ಲೇಖಕಿ ಶೀಲಾಲಕ್ಷಿ ಹೇಳಿದರು.
ಕಣ್ಣೂರು ವಿಶ್ವವಿದ್ಯಾನಿಲಯದ ಭಾರತೀಯ ಭಾಷಾ ಅಧ್ಯಯನಾಂಗದಲ್ಲಿ ನಡೆದ ಸಂಶೋಧನ ವಿದ್ಯಾಥರ್ಿಗಳ ವಿಚಾರಸಂಕಿರಣ ಮಾಲಿಕೆಯ ದ್ವಿತೀಯ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ನಿರಂತರ ಓದು ಮತ್ತು ವಿಶ್ಷೇಷಣೆ ಸಂಶೋಧಕರಿಗೆ ಅತಿ ಅಗತ್ಯವಾಗಿರಬೇಕು. ಇದನ್ನು ವಿದ್ಯಾಥರ್ಿ ಸಂಶೋಧಕರು ಅಳವಡಿಸಿಕೊಳ್ಳಬೇಕು ಎಂದರು. ಅಧ್ಯಯನಾಂಗದ ಕಾಸರಗೋಡಿನ ಪುಸ್ತಕ ಸಂಗ್ರಹ ಯೋಜನೆಗೆ ತಮ್ಮ `ಮಿಠಾಯಿ' ಕೃತಿಯನ್ನು ನೀಡುವ ಮೂಲಕ ಚಾಲನೆ ನೀಡಿದರು.
ಕನ್ನಡ ಕಾದಂಬರಿಗಳಲ್ಲಿ ಜೀವನ ಪ್ರೀತಿ ಎಂಬ ವಿಷಯದಲ್ಲಿ ಸ್ವಾತಿ ಸರಳಿ ಪ್ರಬಂಧ ಮಂಡಿಸಿದರು. ಅಧ್ಯಕ್ಷತೆ ವಹಿಸಿದ ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಮಾತನಾಡಿ ಸಂಶೋಧನೆಯಲ್ಲಿ ನಿಜವಾದ ಸಮಸ್ಯೆಯ ಆಯ್ಕೆ ಬಹಳ ಮುಖ್ಯ. ಕೇವಲ ಪದವಿಗಾಗಿ ಸಂಶೋಧನೆ ಮಾಡಬಾರದು. ಅದೊಂದು ನಿಜವಾದ ಕೊಡುಗೆಯಾಗಬೇಕು. ಸಂಶೋಧನೆಯನ್ನು ಪ್ರೀತಿ ಪೂರ್ವಕವಾಗಿ ಸ್ವೀಕರಿಸಿ ಜ್ಞಾನದ ಆಳವನ್ನು ಶೋಧಿಸುವಂತಾಗಬೇಕು ಎಂದರು.
ಭಾಷಾ ಅಧ್ಯಯನಾಂಗದ ನಿದರ್ೆಶಕ ಡಾ.ರಾಜೇಶ್ ಬೆಜ್ಜಂಗಳ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಶೋಧನ ವಿದ್ಯಾಥರ್ಿನಿ ಸೌಮ್ಯ ಪ್ರಸಾದ್ ಅವರು ತಮ್ಮ ಕೃತಿಗಳನ್ನು ಅಧ್ಯಯನಾಂಗಕ್ಕೆ ನೀಡಿದರು.
ರವಿ ಶಂಕರ ಬೆಟ್ಟಂಪಾಡಿ, ವಿದ್ಯಾ, ಶೇಣಿ ಶಾಲಾ ಶಿಕ್ಷಕ ರಶೀದ್, ಸವಿತಾ, ಪ್ರಶಾಂತ್ ಹೊಳ್ಳ, ರಕ್ಷಿತ್ ಕೀತನ್ ಕುಮಾರ್, ಮೀನಾಕ್ಷಿ ಬೊಡ್ಡೋಡಿ, ಅಜಿತ್, ಫಾಹಿದಾ ಸಂವಾದದಲ್ಲಿ ಉಪಸ್ಥಿತರಿದ್ದರು. ಸುಜಿತ್ ಕುಮಾರ್ ಆಶಯ ಗೀತೆ ಹಾಡಿದರು. ಪ್ರದೀಪ್ ಕುಮಾರ್ ಸ್ವಾಗತಿಸಿ, ಸಂಧ್ಯಾ ವಂದಿಸಿದರು. ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.