HEALTH TIPS

No title

                ಕುರಿಯ ವಿಠಲ ಶಾಸ್ತ್ರಿ ಸಂಸ್ಮರಣೆ, ಪ್ರಶಸ್ತಿ ಪ್ರಧಾನ 
   ಉಪ್ಪಳ: ಯಕ್ಷಗಾನದ ಮಹಾನ್ ಸಾಧಕ ಚೇತನ ಕುರಿಯ ವಿಠಲ ಶಾಸ್ತ್ರಿಗಳು ಹಾಕಿಕೊಟ್ಟ ಪರಂಪರೆಯನ್ನು ಮುಂದುವರಿಸುವ, ಅವರ ಕನಸುಗಳನ್ನು ಸಾಕಾರಗೊಳಿಸುವ ಸನ್ಮನಸ್ಸು ನಮಗಿರಬೇಕು. ವಿಠಲ ಶಾಸ್ತ್ರಿಗಳ ವಿಶಿಷ್ಟ ಸಾಧನೆಗಳನ್ನು ನೆನಪಿಸುವ ಸ್ಮರಣೆ ನಮ್ಮನ್ನು ಕರ್ತವ್ಯದೆಡೆಗೆ ಪ್ರೇರೇಪಿಸುತ್ತದೆ ಎಂದು ಕಟೀಲು ಶ್ರೀದುಗರ್ಾಪರಮೇಶ್ವರಿ ಕ್ಷೇತ್ರದ ಅರ್ಚಕ ವೇದಮೂತರ್ಿ ವೆಂಕಟರಮಣ ಆಸ್ರಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
  ಯಕ್ಷಗಾನದ ಮಹಾನ್ ದ್ರುವತಾರೆಯಾಗಿ ಮೆರೆದ ದಿ.ಕುರಿಯ ವಿಠಲ ಶಾಸ್ತ್ರಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್  ನೇತೃತ್ವದಲ್ಲಿ ಇತ್ತೀಚೆಗೆ ಕುರುಡಪದವಿನ ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಹೈಸ್ಕೂಲಿನಲ್ಲಿ  ನಡೆದ ವಿಠಲ ಶಾಸ್ತ್ರಿ ಸಂಸ್ಮರಣೆ, ಪ್ರಶಸ್ತಿ ಪ್ರಧಾನ ಹಾಗೂ ಬಯಲಾಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
   ಶಾಸ್ತ್ರಿಗಳ ಅರ್ಪಣಾ ಮನೋಭಾವ ಅವರಿಗೆ ಯಕ್ಷಗಾನದ ಮೇಲಿದ್ದ ಅಪ್ಪಟ ಅಭಿಮಾನ, ಆಂತರಂಗಿಕವಾಗಿ ಅವರು ಅದರೊಳು ಅನುಸಂಧಾನಗೊಂಡ ಪರಿಯನ್ನು ಪ್ರತಿಬಿಂಬಿಸುತ್ತದೆ. ಅವರ ಆತ್ಮ ಸಂತೋಷದ ದೃಷ್ಟಿಯಿಂದ ಪರಂಪರೆಯನ್ನು ಮುಂದುವರಿಸುವಲ್ಲಿ ನಮ್ಮ ಯತ್ನಗಳನ್ನು ಬಲಪಡಿಸಬೇಕು ಎಂದು ಅವರು ತಿಳಿಸಿದರು.
    ಹಿರಿಯ ಕಲಾವಿದ ಎಂ.ಕೆ ರಮೇಶ್ ಆಚಾರ್ಯ ಸಂಸ್ಮರಣಾ ಭಾಷಣಗೈದು ತಮ್ಮ ಗುರುಗಳ ಜೊತೆಗಿನ ಒಡನಾಟವನ್ನು ನೆನಪಿಸಿದರು. ಸಮಾರಂಭದಲ್ಲಿ  ಬೆಳ್ಳಾರೆ ಮಂಜುನಾಥ ಭಟ್ ರವರಿಗೆ ವಿಠಲ ಶಾಸ್ತ್ರಿ ಸ್ಮಾರಕ ಪ್ರಶಸ್ತಿ, ಸುಬ್ರಹ್ಮಣ್ಯ ಧಾರೇಶ್ವರರಿಗೆ ನೆಡ್ಲೆ ನರಸಿಂಹ ಭಟ್ ಪ್ರಶಸ್ತಿ ಹಾಗೂ ಕುಂಬ್ಳೆ ಶ್ರೀಧರ ರಾವ್ ರವರಿಗೆ ದೇರಣ್ಣ ಶೆಟ್ಟಿ ಪ್ರಶಸ್ತಿ ಪ್ರಧಾನಗೈಯ್ಯಲಾಯಿತು. ಶಂಭು ಶಮರ್ಾ ವಿಟ್ಲ ಅಭಿನಂದನಾ ಭಾಷಣ ಮಾಡಿದರು. ಕುರಿಯ ವೆಂಕಟರಮಣ ಶಾಸ್ತ್ರಿ ಉಪಸ್ಥಿತರಿದ್ದರು. ಸಾಹಿತಿ, ಶಿಕ್ಷಕ ಸೇರಾಜೆ ಶ್ರೀನಿವಾಸ ಭಟ್ ಸ್ವಾಗತಿಸಿ, ಕುರಿಯ ಗೋಪಾಲಕೃಷ್ಣ ಭಟ್ ವಂದಿಸಿದರು. ನ್ಯಾಯವಾದಿ ಪೆರ್ವಡಿ ರಾಮಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು.
     ಸಮಾರಂಭದ ಮೊದಲ ಭಾಗದಲ್ಲಿ ಸಮರ ಸನ್ನಾಹ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಸುಬ್ರಹ್ಮಣ್ಯ ಧಾರೇಶ್ವರ ಮತ್ತು ಬಳಗ, ಮುಮ್ಮೇಳದಲ್ಲಿ ಎಂ.ಕೆ.ರಮೇಶ್ ಆಚಾರ್ಯ, ದೇವಕಾನ ಕೃಷ್ಣ ಭಟ್, ಸೇರಾಜೆ ಗೋಪಾಲಕೃಷ್ಣ ಭಟ್, ಸೇರಾಜೆ ಸೀತಾರಾಮ ಭಟ್ ಭಾಗವಹಿಸಿದರು. ಸಂಜೆ ಈಶ್ವರಮಂಗಲದ ಶ್ರೀವೈಷ್ಣವೀ ನಾಟ್ಯಾಲಯದ ವಿದುಷಿಃ ಯೋಗೀಶ್ವರಿ ಜಯಪ್ರಕಾಶ್ ರವರ ಬಾಯಾರು ಶಾಖಾ ವಿದ್ಯಾಥರ್ಿಗಳಿಂದ ಭರತನಾಟ್ಯ ವೈವಿಧ್ಯತೆ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ರಾತ್ರಿ 9.30 ರಿಂದ ಬಾಯಾರು ಪಂಚಲಿಂಗೇಶ್ವರ ಬಾಲಯಕ್ಷಕಲಾವೃಂದದವರಿಂದ ಬ್ರಹ್ಮಕಪಾಲ, ರಾತ್ರಿ 1.30 ರಿಂದ ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ವಿದ್ಯಾಥರ್ಿಗಳಿಂದ ಬಬ್ರುವಾಹನ ಕಾಳಗ, 3.30 ರಿಂದ ಅತಿಥಿ ಕಲಾವಿದರಿಂದ ಭಾರ್ಗವ ವಿಜಯ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries