ಉಪ್ಪು ನೀರು: ಬಂಬ್ರಾಣ ಅಣೆಕಟ್ಟಿನಿಂದ ನೀರು ವಿತರಣೆ ಮೊಟಕು: ಜನರಿಗೆ ಸಮಸ್ಯೆ
ಕುಂಬಳೆ: ಹಲವು ವರ್ಷಗಳ ಹಳಮೆಯ ಪರಿಣಾಮ ಶಟರ್ ಹಾನಿಗೀಡಾದುದರಿಂದ ಬಂಬ್ರಾಣ ಅಣೆಕಟ್ಟಿನಲ್ಲಿ ಉಪ್ಪು ನೀರು ಪ್ರವೇಶಿಸಿದೆ. ಇದರಿಂದ ಮೂರು ಗ್ರಾಮ ಪಂಚಾಯತ್ಗಳಿಗಿರುವ ಕುಡಿಯು ನೀರು ವಿತರಣೆ ಮೊಟಕುಗೊಂಡಿದೆ. ಈ ಕಾರಣದಿಂದ ಬಟ್ಟೆ ತೊಳೆಯಲು ಸಹಿತ ಅತ್ಯಗತ್ಯ ನಿರ್ವಹಣೆಗಳಿಗೆ ನೀರು ಲಭಿಸದೆ ಜನರು ಸಮಸ್ಯೆಗೀಡಾಗಿದ್ದಾರೆ. ಮೂರು ದಶಕಗಳ ಹಿಂದೆ ಶಿರಿಯ ಹೊಳೆಯಲ್ಲಿ ಬಂಬ್ರಾಣ ಎಂಬಲ್ಲಿ ಅಣೆಕಟ್ಟು ನಿಮರ್ಿಸಲಾಗಿದೆ. ಇದೀಗ ಅಣೆಕಟ್ಟಿನ ಶಟರ್ಗಳು ನಾಶದ ಹಂತಕ್ಕೆ ತಲುಪಿದೆ. ಈ ಹಿಂದಿನ ವರ್ಷಗಳಲ್ಲಿ ಬೇಸಿಗೆ ಕಾಲ ಆರಂಭಿಸುವುದಕ್ಕಿಂತ ಮುಂಚೆಯೇ ಶಟರ್ನ ದುರಸ್ತಿ ಕಾರ್ಯ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಯಾವುದೇ ದುರಸ್ತಿಗೆ ಕ್ರಮ ಕೈಗೊಂಡಿಲ್ಲ.ಈ ಹಿನ್ನೆಲೆಯಲ್ಲಿ ಒಂದೂವರೆ ತಿಂಗಳ ಹಿಂದೆ ಉಪ್ಪು ನೀರು ಅಣೆಕಟ್ಟಿಗೆ ಪ್ರವೇಶಿಸತೊಡಗಿದೆ ಯೆಂದು ನಾಗರಿಕರು ತಿಳಿಸುತ್ತಿದ್ದಾರೆ.
ಉಪ್ಪು ನೀರು ಕುಡಿಯಲು ಅಸಾಧ್ಯವಾಗಿರುವುದರಿಂದ ಹಾಗೂ ಯಂತ್ರೋಪಕರಣಗಳಿಗೆ ಹಾನಿಯುಂಟಾಗಲಿದೆಯೆಂಬ ಕಾರಣದಿಂದ ಒಂದೂವರೆ ತಿಂಗಳಿನಿಂದ ಬಂಬ್ರಾಣದ ಅಣೆಕಟ್ಟಿನಿಂದ ನೀರೆತ್ತುವ ಕಾರ್ಯ ನಿಲುಗಡೆಗೊಳಿಸಲಾಗಿದೆ. ಕುಂಬಳೆ, ಪುತ್ತಿಗೆ, ಮಂಗಲ್ಪಾಡಿ ಪಂಚಾಯತ್ಗೆ ನೀರು ವಿತರಿಸಲಾಗುತ್ತಿದೆ. ಇಲ್ಲಿಂದ ವಾಹನಗಳಲ್ಲಿ ಕೊಂಡೊಯ್ಯುವ ನೀರಾಗಿದೆ ಜನರಿಗೆ ಏಕ ಆಶ್ರಯ. ಕುಡಿಯಲಿರುವ ನೀರು ಮಾತ್ರವೇ ಇದೀಗ ಲಭಿಸುತ್ತಿದೆ. ಆದ್ದರಿಂದ ಪ್ರಾಥಮಿಕ ಅಗತ್ಯಗಳಿಗೂ ನೀರು ಸಿಗದೆ ಜನರು ಅಲೆದಾಡಬೇ ಕಾಗುತ್ತಿದೆ. ಇದೇ ವೇಳೆ ಅಣೆಕಟ್ಟಿಗೆ ಸಮೀಪ ವಾಸಿಗಳು ಹೊಳೆಯಿಂದ ನೀರು ಹೊತ್ತುಕೊಂಡು ಮನೆಗಳಿಗೆ ತಲುಪಿಸುತ್ತಿದ್ದಾರೆ.