ಎಲ್ಲೆಡೆ ಬೆಳಕು-ವಿಶ್ವಸಂಸ್ಥೆ ಮೆಚ್ಚುಗೆ!
ವಾಷಿಂಗ್ಟನ್: ದೇಶದ ಪ್ರತಿ ಗ್ರಾಮವನ್ನು ವಿದ್ಯುತ್ತೀಕರಣಗೊಳಿಸುತ್ತಿರುವುದಕ್ಕೆ ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ.
ದೇಶದ ಜನಸಂಖ್ಯೆಯ ಶೇಖಡ 85ರಷ್ಟು ಮಂದಿಗೆ ವಿದ್ಯುತ್ ಸಂಪರ್ಕ ಒದಗಿಸಿರುವ ಭಾರತ ಉತ್ತಮ ಸಾಧನೆ ಮಾಡಿದೆ. 2010 ರಿಂದ 2016ರ ಅವಧಿಯಲ್ಲಿ ಪ್ರತಿ ವರ್ಷ 3 ಕೋಟಿ ಮಂದಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಇನ್ನುಳಿದ ಶೇಖಡ 15ರಷ್ಟು ಮಂದಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಸವಾಲಿನದ್ದಾಗಿದ್ದು 2030ರೊಳಗೆ ಈ ಗುರಿ ಸಾಧಿಸುವ ವಿಶ್ವಾಸವಿದೆ ಎಂದಿದೆ.