HEALTH TIPS

No title

              ಭಜನೆಯ ಮೂಲಕ ಸಾಮಾಜಿಕ, ಧಾಮರ್ಿಕ ಎಚ್ಚರ : ಡಾ.ಮೀನಾಕ್ಷಿ ರಾಮಚಂದ್ರ
    ಕಾಸರಗೋಡು: ಭಕ್ತಿ ಆಂದೋಲನ ಪ್ರಾಚೀನವಾದುದು. ಭಜನೆ, ಸಂಕೀರ್ತನೆ ಮನುಷ್ಯನ ಜೀವನದಲ್ಲಿ ಆತ್ಮವನ್ನು ಪರಮಾತ್ಮನಲ್ಲಿಗೆ ಕೊಂಡೊಯ್ಯುತ್ತದೆ. ಭಜನೆ ಭಕ್ತಿಯ ಭಾವವನ್ನು ಮೂಡಿಸುವ ಜೊತೆಗೆ ಸಾಮಾಜಿಕ ಮತ್ತು ಧಾಮರ್ಿಕ ಎಚ್ಚರವನ್ನು ಮೂಡಿಸುತ್ತದೆ. ಉತ್ತಮ ಸಮಾಜ ಕಟ್ಟುವ ಮತ್ತು ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸವನ್ನು ದಾಸವರೇಣ್ಯರು ಮಾಡಿದರು ಎಂದು  ಮಂಗಳೂರಿನ ಬೆಸೆಂಟ್ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥೆ ಡಾ.ಮೀನಾಕ್ಷಿ ರಾಮಚಂದ್ರ ಅವರು ಹೇಳಿದರು. 
    ಕಾಸರಗೋಡು ರೈಲ್ವೇ ಸ್ಟೇಶನ್ ರಸ್ತೆಯಲ್ಲಿರುವ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದ ಸಂಕೀರ್ತನಾದಲ್ಲಿ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಮಹಿಳೆಯರ ಸಾಮೂಹಿಕ ಧ್ವನಿ ಮೊಳಗುವ ವಿಶಿಷ್ಟ ಸಾಂಸ್ಕೃತಿಕ ಆವಿಷ್ಕಾರ ಐನೂರರಷ್ಟು ಮಹಿಳೆಯರು ಒಂದೇ ವೇದಿಕೆಯಲ್ಲಿ ತಂಡೋಪತಂಡಗಳ ಸರದಿ ಸಾಲಿನ "ಕೀರ್ತನೆ ಲಹರಿ" ಮಾತೃ ಸಂಕೀರ್ತನಾ ಕಾರ್ಯಕ್ರಮವನ್ನು ಶನಿವಾರ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
   ಹನ್ನೆರಡನೇ ಶತಮಾನದಿಂದ ಭಕ್ತಿ ಆಂದೋಲನ ಆರಂಭಗೊಂಡಿತು. ದ್ರಾವಿಡ ಪ್ರದೇಶದಲ್ಲಿ ಹುಟ್ಟಿ ಇತರ ಪ್ರದೇಶಕ್ಕೆ ವ್ಯಾಪಿಸಿತು. ಜಾತಿ, ಮತ, ಪಂಥಗಳನ್ನು ದಾಟಿ ಮಾನವರು ಸಮಾನರು ಎಂಬ ಸಂದೇಶನ್ನು ಈ ಮೂಲಕ ಸಾರಲಾಯಿತು. ಭಕ್ತಿಯ ಕ್ರಾಂತಿ ಎಂದರೆ ಸಾಮಾಜಿಕ ಕ್ರಾಂತಿಯೇ ಆಗಿದೆ. ಭಕ್ತಿ ಆಂದೋಲನ ಎಂದು ಆರಂಭವಾಯಿತೋ ಅಂದಿನಿಂದಲೇ ಮಾತೃಶಕ್ತಿಗೆ ಹೆಚ್ಚಿನ ಬಲ ಬಂತು ಎಂದು ಅಭಿಪ್ರಾಯಪಟ್ಟ ಅವರು ವಚನಕಾರರು ಅನುಭವ ಮಂಟಪಗಳ ಮೂಲಕ ಸಾಮಾನ್ಯ ಜನರನ್ನು ತಮ್ಮ ಕಡೆಗೆ ಸೆಳೆದರು. ದಾಸ ಕೀರ್ತನೆಗಳ ಮೂಲಕ ದಾಸರು ಸಮಾಜವನ್ನು ತಿದ್ದುವ ಕ್ರಾಂತಿಯನ್ನೇ ಮಾಡಿದರು. ಮಾತೆಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಜಗತ್ತಿಗೆ ಪಾಠ ಕಲಿಸಿದವರು ದಾಸರು ಎಂದು ಅವರು ಹೇಳಿದರು.
   ಕಾರ್ಯಕ್ರಮದಲ್ಲಿ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ನಾಗೇಶ ಭಾಸ್ಕರ ಕಾಮತ್ ಅಧ್ಯಕ್ಷತೆ ವಹಿಸಿದರು. ಖ್ಯಾತ ಗಾಯಕ ಶಂಕರ ಶ್ಯಾನುಭಾಗ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಖ್ಯಾತ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ, ಖ್ಯಾತ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ, ಕಾಸರಗೋಡು ನಗರಸಭಾ ಮಾಜಿ ಸದಸ್ಯ ವಿದ್ಯಾಕರ ಮಲ್ಯ, ಅಶೋಕ ಶೆಣೈ, ಜಿ.ಎಸ್.ಬಿ. ಮಹಿಳಾ ಘಟಕದ ಅಧ್ಯಕ್ಷೆ ವಿಮಲಾ ರತ್ನಾಕರ ರಾವ್, ರಂಗಚಿನ್ನಾರಿ ನಿದರ್ೇಶಕರಾದ ಕೆ.ಸತ್ಯನಾರಾಯಣ, ಕೆ.ಮನೋಹರ ಶೆಟ್ಟಿ  ಮೊದಲಾದವರು ಉಪಸ್ಥಿತರಿದ್ದರು.  ರಂಗ ಚಿನ್ನಾರಿ ಸಂಸ್ಥೆಯ ನಿದರ್ೇಶಕ ಕಾಸರಗೋಡು ಚಿನ್ನಾ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.  ಸ್ಮಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.
    500 ಕ್ಕೂ ಅಧಿಕ ಮಹಿಳೆಯರಿಂದ ದಾಸ ಸಂಕೀರ್ತನೆ : ರಾಮಕೃಷ್ಣ ಕಾಟುಕುಕ್ಕೆ ಮತ್ತು ಜಯಾನಂದ ಕುಮಾರ್ ಹೊಸದುರ್ಗ ಅವರ ನೇತೃತ್ವದಲ್ಲಿರುವ ವಿವಿಧ ತಂಡಗಳ 500 ಕ್ಕೂ ಅಧಿಕ ಮಹಿಳೆಯರು ತಂಡ ತಂಡವಾಗಿ ದಾಸ ಸಂಕೀರ್ತನೆಯನ್ನು ಪ್ರಸ್ತುತ ಪಡಿಸಿದರು. ಈ ಕಾರ್ಯಕ್ರಮ ಕಾಸರಗೋಡಿನ ಚರಿತ್ರೆಯಲ್ಲಿ ದಾಖಲಿಸಬೇಕಾದ ದಿನವಾಗಿ ಮೂಡಿಬಂತು. ಒಂದೇ ವೇದಿಕೆಯಲ್ಲಿ ಇಷ್ಟು ಮಂದಿ ಮಹಿಳೆಯರು ದಾಸ ಸಂಕೀರ್ತನಕ್ಕೆ ದನಿಗೂಡಿಸಿದ್ದು ಪ್ರಥಮವಾಗಿದೆ.
    ಮಲಯಾಲ ಕಡ್ಡಾಯ : ಖಂಡನೆ
    ಕೇರಳ ಸರಕಾರ ಒಂದನೇ ತರಗತಿಯಿಂದ ಹತ್ತನೇ ತರಗತಿಯ ವರೆಗೆ ಮಲಯಾಳ ಕಲಿಕೆ ಕಡ್ಡಾಯಗೊಳಿಸಿ ಹೊರಡಿಸಿದ ಆದೇಶವನ್ನು ಈ ಸಂದರ್ಭದಲ್ಲಿ ಒಕ್ಕೊರಲಿನಿಂದ ಖಂಡಿಸಲಾಯಿತು. ಈ ಆದೇಶವನ್ನು ಶೀಘ್ರವೇ ಹಿಂತೆಗೆದುಕೊಳ್ಳುವಂತೆ ಆಗ್ರಹಿಸಲಾಯಿತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries