ಉಗ್ರ ಸಂಘಟನೆಯ ಪ್ರೊಫೆಸರ್ನ ಹತ್ಯೆ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಭಾರತೀಯ ಸೇನೆ ಹಿಜ್ಬುಲ್ ಮುಜಾಹಿದ್ದೀನ್ ನ ಟಾಪ್ ಕಮಾಂಡರ್ ಸೇರಿದಂತೆ ಐವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ವಿಶೇಷವೆಂದರೆ ಉಗ್ರ ಸಂಘಟನೆ ಸೇರಿದ್ದ 36 ಗಂಟೆಯಲ್ಲೇ ಕಾಶ್ಮೀರ ವಿವಿ ಸಹಾಯಕ ಪ್ರೊಫೆಸರ್ ನನ್ನು ಹತ್ಯೆ ಮಾಡಲಾಗಿದೆ.
ಭದ್ರತಾ ಪಡೆ ಯೋಧರು ಮೊದಲಿಗೆ ಛತ್ತಬಾಲ್ ಪ್ರದೇಶದಲ್ಲಿ ಮೂವರು ಉಗ್ರರನ್ನು ಹತ್ಯೆಗೈದಿದ್ದರು. ಇದಾದ 24 ಗಂಟೆಗಳಲ್ಲೇ ಎರಡನೇ ಎನ್ ಕೌಂಟರ್ ನಡೆದಿದೆ. ಬದಿಗಾಮ್ ಗ್ರಾಮದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಯೋಧರು ಶೋಧ ಕಾರ್ಯಚರಣೆ ಆರಂಭಿಸಿದ್ದರು. ಅಷ್ಟರಲ್ಲಿ ಉಗ್ರರು ಗುಂಡಿನ ದಾಳಿ ಆರಂಭಿಸಿದ್ದು ಕೆಲವು ಗಂಟೆಗಳ ಕಾಲ ಭಾರೀ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಸಹಾಯಕ ಪ್ರೊಫೆಸರ್ ಮೊಹಮ್ಮದ್ ರಫಿ ಭಟ್ ಮನವೊಲಿಸಿ ಶರಣಾಗುವಂತೆ ಮಾಡಲು ಭದ್ರತಾ ಪಡೆ ಯೋಧರು ಸಾಕಷ್ಟು ಪ್ರಯತ್ನ ಪಟ್ಟರೂ ಫಲ ನೀಡಲಿಲ್ಲ. ಕೂಡಲೇ ರಫಿ ಭಟ್ ಪೋಷಕರನ್ನು ಸ್ಥಳಕ್ಕೆ ಕರೆತಂದು ಮನವೊಲಿಸಲು ಯತ್ನಿಸಿದೆವು ಆದರೆ ರಫಿ ಭಟ್ ಇದಕ್ಕೂ ಒಪ್ಪದಿದ್ದಾಗ ಆತನನ್ನು ಹೊಡೆದುರುಳಿಸಬೇಕಾಯಿತು ಎಂದು ಕಾಶ್ಮೀರ ಐಜಿಪಿ ಎಸ್ ಪಿ ಪಾಣಿ ತಿಳಿಸಿದ್ದಾರೆ.
ಎನ್ ಕೌಂಟರ್ ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಟಾಪ್ ಕಮಾಂಡರ್ ಸದ್ದಾಂ ಪೊದ್ದರ್, ಪ್ರೊಫೆಸರ್ ರಫಿ ಭಟ್, ತೌಸೀಫ್ ಶೇಖ್, ಆದಿಲ್ ಮಲಿಕ್, ಬಿಲಾಲ್ ಅಲಿಯಾಸ್ ಮೋಲ್ವಿ ಹತರಾಗಿದ್ದಾರೆ. ಇಬ್ಬರು ಪೊಲೀಸರು ಯೋಧ ಗಾಯಗೊಂಡಿದ್ದಾರೆ.