HEALTH TIPS

No title

             ಸಂಕಷ್ಟದಲ್ಲಿ ಕುಟುಂಬ=ದಾನಿಗಳ ಸಹಾಯ ನಿರೀಕ್ಷೆಯಲ್ಲಿ ಜೀವನ ಕಳೆಯುತ್ತಿರುವ ಸುಧೀಶ್ ಹಾಗೂ ಜಿಷಾ ಕುಟುಂಬ
    ಮುಳ್ಳೇರಿಯ: ಆದೂರು ಮಲ್ಲಾವರ ದೇವಸ್ಥಾನ ಬಳಿಯ ಆಲಂತಡ್ಕದಲ್ಲಿ ವಾಸವಾಗಿರುವ ಬಿ.ಸುಧೀಶ್ ಕುಮಾರ್ ಕಾಸರಗೋಡು ಚಂದ್ರಗಿರಿಯ ಚೆಮ್ನಾಡ್ನ ಜಿಷಾಳನ್ನು ವಿವಾಹವಾಗಿ ಈ  ಮೇ ತಿಂಗಳಿಗೆ ಆರು ವರ್ಷಗಳು ಪೂತರ್ಿಯಾಗಿವೆ. ಮಗಳು ನಾಲ್ಕು ವರ್ಷ ಪ್ರಾಯದ ವೈಗಾ.
ಆರನೇ ವಿವಾಹ ವಾಷರ್ಿಕದ ಸಡಗರದಲ್ಲಿ ಕಳೆಯಬೇಕಾದ ಸುಧೀಶ್ ಕುಟುಂಬವು ಕಣ್ಣೀರ ಧಾರೆಯೊಂದಿಗೆ ಜೀವನ ಕಳೆಯಬೇಕಾದ ಕರುಣಾಜನಕ ಸ್ಥಿತಿ ಬಂದೊದಗಿದ್ದು ದಾನಿಗಳ ಸಹಾಯ ಹಸ್ತದ ನಿರೀಕ್ಷೆಯಲ್ಲಿದ್ದಾರೆ.
  ಕುಟುಂಬದ ಆಧಾರ ಸ್ಥಂಭವಾಗಿದ್ದ ಸುಧೀಶ್ ಗೆ ರಕ್ತಾಬರ್ುದ ಭಾದಿಸಿದ್ದು  ಇಡೀ ಕುಟುಂಬವನ್ನು ದುಃಖದ ಮಡುವಿನಲ್ಲಿ ಜೀವನ ಕಳೆಯುವಂತೆ ಮಾಡಿದೆ.
  ರಕ್ತಾಬರ್ುದ ಚಿಕಿತ್ಸೆಗಾಗಿ ಕಳೆದ ಒಂದೂವರೆ ತಿಂಗಳಿನಿಂದ ಕೇರಳ ಕನರ್ಾಟಕ ಸಹಿತ ವಿವಿಧೆಡೆಗಳಲ್ಲಿ ಚಿಕಿತ್ಸೆ ಪಡೆದಿದ್ದು ಇದೀಗ  ಎನರ್ಾಕುಳಂನ ಖ್ಯಾತ ಅಮೃತಾ ಆಸ್ಪತ್ರೆಯಲ್ಲಿ ಉನ್ನತ ಚಿಕಿತ್ಸೆ ಪಡೆಯುತ್ತಿದ್ದು ಪರ ಸಹಾಯವಿಲ್ಲದೆ ನಡೆದಾಡಲೂ ಅಶಕ್ತರಾಗಿದ್ದು ಕಠಿಣ ವೇದನೆಯೊಂದಿಗೆ ಸಂದಿಗ್ಧಾವಸ್ತೆಯಲ್ಲಿ ನಾಳೆಯ ಚಿಂತೆಯೊಂದಿಗೆ ಜೀವನ ನಡೆಸುತ್ತಿದ್ದಾರೆ.
   ಈಗಾಗಲೆ ಹಲವು ರೀತಿಯ ಚಿಕಿತ್ಸೆಗಾಗಿ ರೂ 12 ಲಕ್ಷ ವ್ಯಯವಾಗಿದ್ದು ದಿನವೊಂದಕ್ಕೆ  29 ಸಾವಿರ ರೂಪಾಯಿ ಮೌಲ್ಯದ ಇಂಜೆಕ್ಷನ್ ಅನಿವಾರ್ಯವಾಗಿದ್ದು ಇತರ ಔಷಧಿಗಳೂ ಸೇರಿ 35 ರಿಂದ 45 ಸಾವಿರ ರೂಪಾಯಿ ಭರಿಸಬೇಕಾಗಿದೆ.ಸುಮಾರು 50 ಲಕ್ಷ ರೂಪಾಯಿ ಖಚರ್ಿನ ಮಜ್ಜೆ ಶಸ್ತ್ರಚಿಕಿತ್ಸೆಯು ಅನಿವಾರ್ಯ ವಾಗಿದ್ದು ಕಣ್ಣೂರು ಮಟ್ಟನ್ನೂರು ಪಳಶ್ಶೀರಾಜ ಎನ್ ಎಸ್ ಎಸ್ ಕಾಲೇಜಿನಲ್ಲಿ ಕೊನೆಯ ದಜರ್ೆ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದ ಸುಧೀಶ್ ಗೆ ಅಲ್ಲಿನ ಅಧ್ಯಾಪಕರು ಹಾಗೂ ಇತರ ಸಿಬಂದಿಗಳು 2 ಲಕ್ಷ ರೂ ಸಂಗ್ರಹ ಮಾಡಿ ಕೊಟ್ಟಿದ್ದು ವಿವಿಧ ರಾಜಕೀಯ, ಸಾಮಾಜಿಕ ಸಂಘಟನೆಗಳು, ಸಂಘ ಸಂಸ್ಥೆಗಳು "ಸುಧೀಶ್ ಚಿಕಿತ್ಸಾ ಸಹಾಯ ಸಮಿತಿ" ಯನ್ನು ರೂಪೀಕರಿಸಿದ್ದಾರೆ.
   ಕೃಷಿ ವರಮಾನವೊಂದೇ  ಆಸರೆಯಾಗಿರುವ ಸುಧೀಶ್ ಅವರ ತಂದೆ ಎಂ.ಕುಂಞಿರಾಮನ್  ಹಾಗೂ ಸಹೋದರರು ಚಿಕಿತ್ಸೆಗಾಗಿ ಹಣ ಹೊಂದಿಸಲು ಸಾದ್ಯವಾಗದೇ ದಾನಿಗಳ ಸಹಾಯ ಹಸ್ತದ ನಿರೀಕ್ಷೆಯಲ್ಲಿದ್ದು, ದಾನಿಗಳು ನೆರವು ನೀಡುವ ಮೂಲಕ ಸಹಕರಿಸಬಹುದಾಗಿದೆ. ಬ್ಯಾಂಕ್ ಖಾತೆ ವಿವರಗಳು:   ಕೇರಳ ಗ್ರಾಮೀಣ ಬ್ಯಾಂಕ್ ಮುಳ್ಳೇರಿಯಾ ಶಾಖೆಯಲ್ಲಿ ಎಂ. ಕುಂಞಿರಾಮನ್ ನಾಯರ್ ಹೆಸರಲ್ಲಿ  ಖಾತೆ ತೆರೆದಿದ್ದು ಖಾತೆ ಸಂಖ್ಯೆ:40596100002589, ಐಎಫ್ಎಸ್ಸಿ ಕೋಡ್ ಕೆಎಲ್ಜಿಬಿ0040596. ಸಂಪರ್ಕ ಸಂಖ್ಯೆ: 9447653099.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries