HEALTH TIPS

No title

               ಸಮೂಹ ಮಾಧ್ಯಮಗಳ ಜವಾಬ್ದಾರಿ ಅಧಿಕ-ಡಾ.ವಸಂತಕುಮಾರ್ ಪೆರ್ಲ
    ಬದಿಯಡ್ಕ: ಪ್ರಜಾಪ್ರಭುತ್ವ ಪದ್ಧತಿಯ ಆಡಳಿತ ವ್ಯವಸ್ಥೆಯಲ್ಲಿ ದೇಶದ ಅಭಿವೃದ್ಧಿಗೆ ಸಮೂಹ ಮಾಧ್ಯಮಗಳು ಅತ್ಯಂತ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕಾಗುತ್ತದೆ ಎಂದು ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿದರ್ೇಶಕ ಡಾ. ವಸಂತಕುಮಾರ ಪೆರ್ಲ ಅವರು ಹೇಳಿದರು.
    ಬದಿಯಡ್ಕದ ಚಿನ್ಮಯ ವಿದ್ಯಾಲಯದಲ್ಲಿ ನಡೆಯುತ್ತಿರುವ ವಿಶೇಷ ಬೇಸಿಗೆ ಶಿಬಿರದಲ್ಲಿ ಅವರು ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತಾಡುತ್ತಿದ್ದರು.
      ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಎಂದೇ ಪರಿಗಣಿತವಾಗಿರುವ ಮಾಧ್ಯಮಗಳು ರಾಜಕೀಯ ಪಕ್ಷಗಳ ಒಳಜಗಳಗಳಿಗೆ ಮಹತ್ವ ಕೊಡದೆ ದೇಶದ ಅಭಿವೃದ್ಧಿಯತ್ತ ಗಮನ ಕೊಟ್ಟು ಜನರ ಆಶೋತ್ತರಗಳಿಗೆ ಪ್ರತಿಸ್ಪಂದಿಸಿದಾಗ ಸರಕಾರಗಳು ಒಳ್ಳೆಯ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ನಕಾರಾತ್ಮಕ ವಿಷಯಗಳಿಗೆ ಮತ್ತು ಒಡಕು ಧ್ವನಿಗಳಿಗೆ ಮಾಧ್ಯಮಗಳು ಒತ್ತು ನೀಡಬಾರದು ಎಂದು ಅವರು ಹೇಳಿದರು.
    ಇತ್ತೀಚೆಗೆ ಹುಟ್ಟಿಕೊಂಡಿರುವ ಸಾಮಾಜಿಕ ಮಾಧ್ಯಮಗಳನ್ನು ಸಮೂಹ ಮಾಧ್ಯಮಗಳೆಂದು ಕರೆಯುವಂತಿಲ್ಲ. ಸಮೂಹ ಮಾಧ್ಯಮಗಳು ಇಡೀ ಸಮಾಜವನ್ನು ಒಂದು ಘಟಕವಾಗಿ ನೋಡುತ್ತವೆ. ಸಾಮಾಜಿಕ ಮಾಧ್ಯಮಗಳು ವೈಯಕ್ತಿಕ ನೆಲೆಯಿಂದ ಸಮಾಜವನ್ನು ನೋಡುತ್ತವೆ. ಅವುಗಳಿಗೆ ವೈಯಕ್ತಿಕ ಹಿತಾಸಕ್ತಿಯಷ್ಟೇ ಮುಖ್ಯ. ಸಾಮಾಜಿಕ ಮಾಧ್ಯಮಗಳು ವ್ಯಕ್ತಿಗತ ಅಭಿವ್ಯಕ್ತಿಗಳಾಗಿದ್ದು, ಅವುಗಳಿಗೆ ಬದ್ಧತೆಯಾಗಲೀ ಸಾಮಾಜಿಕ ಉತ್ತರದಾಯಿತ್ವವಾಗಲೀ ಇರುವುದಿಲ್ಲ ಎಂದು ಡಾ. ಪೆರ್ಲ ಅವರು ವಿಶ್ಲೇಷಿಸಿದರು.
    ಕಾಸರಗೋಡು ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಿಂದ ಆಗಮಿಸಿದ ವಿದ್ಯಾಥರ್ಿಗಳು ಬೇಸಿಗೆ ಶಿಬಿರದಲ್ಲಿ ಭಾಗವಹಿಸುತ್ತಿದ್ದು, ಶಾಲೆಯ ಮುಖ್ಯ ಅಧ್ಯಾಪಕರಾದ ಪ್ರಶಾಂತ್ ಬೆಳಿಂಜ ಅಧ್ಯಕ್ಷತೆ ವಹಿಸಿದ್ದರು. ಶಿಬಿರ ಸಂಚಾಲಕ ಪಿಲಿಂಗಲ್ಲು ಕೃಷ್ಣ ಭಟ್ ಉಪಸ್ಥಿತರಿದ್ದರು. ಶಿಕ್ಷಕಿ ಸುಮಂಗಲ ಸ್ವಾಗತಿಸಿ, ವಂದಿಸಿದರು.
     

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries