HEALTH TIPS

No title

                ಮನೆ ಮನೆಗಳಲ್ಲಿ ಸುಗಮ ಸಂಗೀತ ಗಾಯನ ಸರಣಿ
    ಕಾಸರಗೋಡು: ಕಲೆಯ ಜೊತೆಗೆ ಕಲಾವಿದರಿಗೂ ಪುನಶ್ಚೇತನ ನೀಡುವಲ್ಲಿ ಅಭಿಯಾನಗಳು ಮಹತ್ವ ಪಡದಿವೆ ಎಂದು ರಂಗಕಮರ್ಿ, ಕೇರಳ ತುಳು ಅಕಾಡೆಮಿ ಸದಸ್ಯ ಉಮೇಶ್ ಎಂ.ಸಾಲ್ಯಾನ್ ಅಭಿಪ್ರಾಯಪಟ್ಟರು.
   ಕನರ್ಾಟಕ ಸುಗಮ ಸಂಗೀತ ಪರಿಷತ್ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ನಡೆಯುವ ಮನೆ ಮನೆಗಳಲ್ಲಿ ಸುಗಮ ಸಂಗೀತ ಗಾಯನ ಸರಣಿಯ ಸಮಾರಂಭವನ್ನು ಅಣಂಗೂರಿನ ಶಾಹಿರತ್ನ ಬಾಲಕೃಷ್ಣ ಅವರ ನಿವಾಸದಲ್ಲಿ ಉದ್ಘಾಟಿಸಿ ಮಾತನಾಡಿದರು.
   ಗಡಿನಾಡು ಕಾಸರಗೋಡಿನಲ್ಲಿ ಎಲೆಮರೆಯಲ್ಲಿರುವ ಅನೇಕ ಪ್ರತಿಭಾವಂತ ಗಾಯಕರಿದ್ದಾರೆ. ಅವರಿಗೆ ಅವಕಾಶ ನೀಡುವುದು ಮತ್ತು ಮನೆ ಮನೆಗಳಲ್ಲಿ ಕನ್ನಡ ಭಾಷೆ-ಸಂಸ್ಕೃತಿಯ ಬಗೆಗಿನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಸರಣಿ ಅರ್ಥಪೂರ್ಣ ಎಂದವರು ತಿಳಿಸಿದರು.
   ಘಟಕದ ಅಧ್ಯಕ್ಷೆ ಶಾಹಿರತ್ನ ಬಾಲಕೃಷ್ಣ ಅಧ್ಯಕ್ಷತೆ ವಹಿಸಿದರು. ಸಮಾಜ ಸೇವಕಿ ಶ್ಯಾಮಲಾ ಎಂ.ಶೆಟ್ಟಿ, ಕಲಾವಿದೆ ಶ್ಯಾಮಲಾ ರವಿರಾಜ್ ಕುಂಬಳೆ ಶುಭಹಾರೈಸಿದರು. ಘಟಕದ ಪ್ರಧಾನ ಕಾರ್ಯದಶರ್ಿ ದಿವಾಕರ ಅಶೋಕನಗರ ಸ್ವಾಗತಿಸಿದರು. ಪತ್ರಕರ್ತ ವೀಜಿ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ಘಟಕದ ಕೋಶಾಧಿಕಾರಿ ಲೀಲಾಧರ ಅಶೋಕನಗರ ವಂದಿಸಿದರು.
   ಸಮಾರಂಭದ ಅಂಗವಾಗಿ ಸುಗಮಸಂಗೀತ ಗಾಯನ ನಡೆಯಿತು. ಹಿಮ್ಮೇಳದಲ್ಲಿ ಹಾಮರ್ೋನಿಯಂನಲ್ಲಿ ಹಿರಿಯ ಕಲಾವಿದ  ಕೆ.ಟಿ.ಬಾಬು ಅಡ್ಕತ್ತಬೈಲು, ತಬ್ಲಾದಲ್ಲಿ ಧನೀಶ್ ಬಿ.ಅಡ್ಕತ್ತಬೈಲು ಸಹಕರಿಸಿದರು. ಗಾಯನದಲ್ಲಿ ಶ್ಯಾಮಲಾ ರವಿರಾಜ್ ಕುಂಬಳೆ, ಸುಬ್ರಹ್ಮಣ್ಯ ಆಚಾರ್ಯ ಜೆ.ಪಿ.ನಗರ, ದಿವಾಕರ ಅಶೋಕನಗರ, ಲೀಲಾಧರ ಆಚಾರ್ಯ ಅಶೋಕನಗರ, ಭಾರತೀಬಾಬು, ಶಾಹಿರತ್ನ ಬಾಲಕೃಷ್ಣ ಮೊದಲಾದವರು ಭಾಗವಹಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries