HEALTH TIPS

No title

                 ಜೀವ ಪರಿಣಾಮಗಳ ಸಂಗೀತ ವೈಜ್ಞಾನಿಕ ಮಹತ್ವ ಹೊಂದಿದೆ-ಡಾ.ಶಿವಕುಮಾರ್ ಅಡ್ಕ
                     ನೆನೆ ನೆನೆ ಕನ್ನಡ ಗಾನ 4ನೇ ಕಾರ್ಯಕ್ರಮ ಉದ್ಘಾಟನೆ
     ಮುಳ್ಳೇರಿಯ: ಸಂಗೀತ ಸಹಿತ ವಿವಿಧ ಕಲಾ ಪ್ರಕಾರಗಳು ಆಸಕ್ತಿ, ಕಠಿಣ ಪರಿಶ್ರಮಗಳ ಜೊತೆಗೆ ದೈವ ಕೃಪೆಯಿಂದ ಪ್ರಾಪ್ತವಾಗುತ್ತದೆ. ವ್ಯಕ್ತಿ, ಸಮಾಜ, ರಾಷ್ಟ್ರವನ್ನು ಸದಭಿರುಚಿಯ ಸಮೃದ್ದತೆಯೆಡೆಗೆ ಕೊಂಡೊಯ್ಯುವಲ್ಲಿ ಕಲಾ ಪ್ರಕಾರಗಳ ಪಾತ್ರ ಮಹತ್ತರ ಎಂದು ಸಾಮಾಜಿಕ ಮುಖಂಡ, ವೈದ್ಯ ಡಾ. ಶಿವಕುಮಾರ್ ಅಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
   ಕಾಸರಗೋಡಿನ ಸಾಹಿತ್ತಿಕ-ಸಾಮಾಜಿಕ ಸಂಘಟನೆ ರಂಗಚಿನ್ನಾರಿ ಕಾಸರಗೋಡು ಸಂಸ್ಥೆಯು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಮುಳ್ಳೇರಿಯದ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಸಹಕಾರದಲ್ಲಿ ಹಮ್ಮಿಕೊಂಡ "ನೆನೆ ನೆನೆ ಕನ್ನಡ ಗಾನ" ಕಾರ್ಯಕ್ರಮದ ನಾಲ್ಕನೇ ದಿನದ ಕಾರ್ಯಕ್ರಮವನ್ನು ಮುಳ್ಳೇರಿಯ ಗಣೇಶ ಕಲಾಮಂದಿರ ಸಭಾಂಗಣದಲ್ಲಿ ಬುಧವಾರ ಸಂಜೆ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
   ಲಲಿತ ಕಲೆ, ಸಾಹಿತ್ಯಗಳು ಭಾಷೆಯ ಬೆಳವಣಿಗೆಗೆ ಪೂರಕವಾಗಿದೆ. ಸಂಗೀತ ಕಲೆಯು ವಿಶಿಷ್ಟ ಕಲಾ ಪ್ರಕಾರವಾಗಿ ವಿದೇಶಗಳಲ್ಲೂ ಜನಪ್ರೀಯತೆಗಳಿಸಿದ್ದು, ಮನೋರೋಗ ಸಹಿತ ವಿವಿಧ ರೋಗಗಳ ಉಪಶಮನದಲ್ಲಿ ಮಹತ್ವದ ಸ್ಥಾನ ಪಡೆದಿರುವುದನ್ನು ಸಂಶೋಧಕರು ಗುರುತಿಸಿರುವುದು ಅದರ ಹಿರಿಮೆಗೆ ಸಾಕ್ಷಿ ಎಂದು ಅವರು ತಿಳಿಸಿದರು. ಯುವ ತಲೆಮಾರಿಗೆ ಸಂಸ್ಕೃತಿಯ-ಸಾಂಸ್ಕೃತಿಕತೆಗಳ ಅರಿವು-ಉತ್ಸಾಹ ಮೂಡಿಸುವ ಕಾರ್ಯಚಟುವಟಿಕೆಗಳು ಅಗತ್ಯವಿದ್ದು, ದೂರಗಾಮಿ ಪರಿಣಾಮದ ವೈವಿಧ್ಯಗಳು ಇನ್ನಷ್ಟು ಮೂಡಿಬರಲಿ ಎಂದು ಅವರು ಈ ಸಂದರ್ಭ ತಿಳಿಸಿದರು.
   ಮುಳ್ಳೇರಿಯದ ವಿದ್ಯಾಶ್ರೀ ಬಶಿಕ್ಷಣ ಕೇಂದ್ರದ ಅಧ್ಯಕ್ಷ ಗಣೇಶ ಶ್ರೀವತ್ಸ ನೆಕ್ರಾಜೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಂಗಚಿನ್ನಾರಿಯ ನಿದರ್ೇಶಕ, ರಂಗನಟ ಕಾಸರಗೋಡು ಚಿನ್ನಾ ಉಪಸ್ಥಿತರಿದ್ದು, ರಂಗಚಿನ್ನಾರಿಯ ಕಳೆದ 12 ವರ್ಷಗಳ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿ, ಗಡಿನಾಡು ಕಾಸರಗೋಡಿನ ಸಮಗ್ರ ಕನ್ನಡ ಪರ ಚಟುವಟಿಕೆಗಳ ನಿರಂತರತೆಯ ಫಲವಾಗಿ ಪ್ರಾಂತ್ಯ ವಿಭಜನೆಯ ಬಳಿಕದ ಸುಧೀರ್ಘ ಅವಧಿಯಲ್ಲೂ ಕನ್ನಡ ನೆಲೆನಿಂತಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.
   ರಂಗಚಿನ್ನಾರಿಯ ಸಹ ನಿದರ್ೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ, ಹಿರಿಯ ಗಾಯಕ ರವೀಂದ್ರ ಪ್ರಭು ಉಪಸ್ಥಿತರಿದ್ದರು.
   ಬಾಲಸುಬ್ರಹ್ಮಣ್ಯ ಭಟ್ ಕೋಳಿಕ್ಕಜೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸೀಮಾ ರಾಯ್ಕರ್ ಪ್ರಾರ್ಥನಾಗೀತೆ ಹಾಡಿದರು.
   ಬಳಿಕ ಪ್ರಸಿದ್ದ ಗಾಯಕ ರವೀಂದ್ರ ಪ್ರಭು, ಸೀಮಾ ರಾಯ್ಕರ್ ಹಾಗೂ ಕಿಶೋರ್ ಪೆರ್ಲರಿಂದ ಅತ್ಯಪೂರ್ವ ಶೈಲಿಗಳಲ್ಲಿ  `ನೆನೆ ನೆನೆ ಕನ್ನಡ ಗಾನ' ಎಂಬ ಭಕ್ತಿ ಭಾವ ಜನಪದಗೀತೆಗಳ ಝೇಂಕಾರ ಹಾಡುಗಳನ್ನು ಪ್ರಸ್ತುತಪಡಿಸಿ ಪ್ರೇಕ್ಷಕರ ಮನಸೂರೆಗೊಳಿಸಿದರು. ಖ್ಯಾತ ಹಿನ್ನಲೆ ಸಂಗೀತಗಾರರಾದ ಪುರುಷೋತ್ತಮ ಕೊಪ್ಪಳ್ ಕೀಬೋಡರ್ಿನಲ್ಲಿ, ರಾಜೇಶ್ ಭಾಗವತ್ ರಿದಂಪಾಡ್ನಲ್ಲಿ ಹಾಗೂ ತಬಲಾದಲ್ಲಿ ಅಭಿಜಿತ್ ಶೆಣೈ ಸಹಕರಿಸಿದರು.
   
   



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries