HEALTH TIPS

No title

            ಶ್ರೀಕ್ಷೇತ್ರ ಕೊಲ್ಲಂಗಾನ ಮೇಳದ ವರ್ಷದ ತಿರುಗಾಟ ಮುಕ್ತಾಯ-ಸೇವೆಯಾಟ-
      ಯಕ್ಷಗಾನ ಪ್ರದರ್ಶನಗಳಿಗೆ ಹೆಚ್ಚು ಒತ್ತು ನೀಡಿ ಯುವ ಸಮೂಹವನ್ನು ಆಕಷರ್ಿಸಬೇಕು-ಸುಭಾಶ್ಚಂದ್ರ ರೈ ಬೆಳ್ಳಾರೆ 
   ಬದಿಯಡ್ಕ: ಪರಂಪರೆಯ ಪರಿಚಯವಿಲ್ಲದೆ ವರ್ತಮಾನ ಮತ್ತು ಭವಿಷ್ಯತ್ತು ಸುಗಮವಾಗಿರಲು ಸಾಧ್ಯವಿಲ್ಲ. ಸಂಸ್ಕೃತಿ, ಸಂಸ್ಕಾರಗಳ ಅರಿವು ಹೊಸ ತಲೆಮಾರಿಗೆ ಇಂದು ಅಗತ್ಯವಿದ್ದು, ಯಕ್ಷಗಾನ ಸಹಿತ ಭಾರತೀಯ ಕಲಾಪ್ರಕಾರಗಳ ಆಸಕ್ತಿಯನ್ನು ಮೂಡಿಸುವಲ್ಲಿ ಯಾವ ಬೆಲೆತೆತ್ತಾದರೂ ಪ್ರಯತ್ನಿಸುವುದು ಈ ಮಣ್ಣಿನ ಋಣ ಸಂದಾಯದ ತೃಪ್ತಿ ನೀಡುವುದು ಎಂದು ಶಿಕ್ಷಕ, ಯಕ್ಷಗಾನ ಸಂಘಟಕ ಸುಭಾಶ್ಚಂದ್ರ ರೈ ಬೆಳ್ಳಾರೆ ಅಭಿಪ್ರಾಯ ವ್ಯಕ್ತಪಡಿಸಿದರು.
   ನೀಚರ್ಾಲು ಸಮೀಪದ ಕೊಲ್ಲಂಗಾನ ಶ್ರೀದುಗರ್ಾಪರಮೇಶ್ವರಿ ಕೃಪಾಪೋಶಿತ ಯಕ್ಷಗಾನ ಮಂಡಳಿಯ ಪ್ರಸ್ತುತ ವರ್ಷದ ತಿರುಗಾಟದ ಕೊನೆಯ ದಿನವಾದ ಮಂಗಳವಾರ ಶ್ರೀಕ್ಷೇತ್ರದಲ್ಲಿ ನಡೆದ ಸೇವೆಯಾಟದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
   ಇಂದಿನ ಯುವ ಪೀಳಿಗೆಯನ್ನು ಯಕ್ಷಗಾನದತ್ತ ಆಕಷರ್ಿಸಿ ಅದರಲ್ಲಿ ತೊಡಗಿಸಿಕೊಳ್ಳುವಲ್ಲಿ ಯಕ್ಷಗಾನ ಪ್ರದರ್ಶನಗಳ ತ್ರಿದಿನ, ಪಂಚಕ, ಸಪ್ತಾಹ. ದಶಾಹಗಳಂತಹ ರೀತಿಯ ವೈವಿಧ್ಯತೆಗಳನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ. ದೇವ, ದೈವಸ್ಥಾನಗಳ ಸಹಿತ ವಿವಿಧ ಸಂಘಟನೆಗಳನ್ನು ಒಳಪಡಿಸಿ ಅರಿವಿನ ವಿಸ್ತಾರತೆಗೆ ಕಾರಣವಾಗುವ ಯಕ್ಷಗಾನಗಳನ್ನು ಆಯೋಜಿಸುವುದು ಅಗತ್ಯವಿದೆ ಎಂದು ಅವರು ತಿಳಿಸಿದರು. ಶ್ರೀಕ್ಷೇತ್ರ ಕೊಲ್ಲಂಗಾನ ಮೇಳದ ಉತ್ತಮ ಗುಣಮಟ್ಟದ ಕಲಾ ಪ್ರದರ್ಶನವು ಗಡಿನಾಡು ಕಾಸರಗೋಡಿನ ಹೆಸರನ್ನು ನಾಡಿನೆಲ್ಲೆಡೆ ಬೆಳಗುವಲ್ಲಿ ಯಶಸ್ವಿಯಾಗಿದೆ. ಸಹೃದಯರ ಪ್ರೋತ್ಸಾಹ ನಿರಂತರವಾಗಿ ಹರಿದುಬರಲಿ ಎಂದು ಅವರು ಹಾರೈಸಿದರು.
   ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಮಾಜಿಕ, ಧಾಮರ್ಿಕ ಮುಖಂಡ ತತ್ವಮಸಿ ವೇಣಿಗೋಪಾಲ್ ಮಾತನಾಡಿ, ಸಹೃದಯತೆಯ, ಸಮೃದ್ದ ಸಮಾಜ ನಿಮರ್ಾಣದಲ್ಲಿ ಯಕ್ಷಗಾನದ ಪಾತ್ರ ಮಹತ್ತರವಾದುದಾಗಿದ್ದು, ಪಾರಂಪರಿಕ ಸೊಗಡುಗಳನ್ನು ಉಳಿಸಿ ಮುನ್ನಡೆಯುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ತಿಳಿಸಿದರು.
   ಉಪಸ್ಥಿತರಿದ್ದ ಹಿರಿಯ ಸ್ತ್ರೀ ವೇಶಧಾರಿ ಸಂಜಯಕುಮಾರ್ ಶೆಟ್ಟಿ ಗೋಣಿಬೀಡು ಮಾತನಾಡಿ, ಇಂದಿನ ಕಾಲಮಾನಕ್ಕನುಸರಿಸಿ ಯಕ್ಷಗಾನ ಮೇಳಗಳನ್ನು ನಡೆಸುವುದು ಸವಾಲಾಗುತ್ತಿದ್ದು, ಸಹೃದಯರ ಪ್ರೀತಿಗಳಿಂದ ಸಾಗಿಬಂದಿದೆ. ಮಣ್ಣಿನ ಕಲಾ ಶ್ರೀಮಂತಿಕೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು. 
    ಯಕ್ಷಗಾನ ಮೇಳದ ಭಾಗವತ ಸತೀಶ ಪುಣಿಚಿತ್ತಾಯ ಪೆರ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ತಂತ್ರಿವರ್ಯ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ, ಪ್ರಬಂಧಕ ಮಹೇಶ್ ಮುಳಿಯಾರು ಉಪಸ್ಥಿತರಿದ್ದರು.
  ಮಹೇಶ್ ಮುಳಿಯಾರ್ ಸ್ವಾಗತಿಸಿ, ಸುಂದರ ಸೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
  ಬಳಿಕ ಶ್ರೀಕೊಲ್ಲಂಗಾನ ಮೇಳ ಹಾಗೂ ಅತಿಥಿ ಕಲಾವಿದರುಗಳ ಕೂಡುವಿಕೆಯೊಂದಿಗೆ ಶಿವಭಕ್ತ ವೀರಮಣಿ-ಕುಶಲವ ಹಾಗೂ ಶ್ರೀನಿವಾಸ ಕಲ್ಯಾಣ ಪ್ರಸಂಗಗಳ ಯಕ್ಷಗಾನ ಬಯಲಾಟ ಪ್ರದರ್ಶನ ನೆರವೇರಿತು.
 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries