HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ರಾಣಿಪುರ ಅರಣ್ಯದಲ್ಲಿ  ವನ್ಯಜೀವಿಗಳಿಗೆ ಕೆರೆ ನಿಮರ್ಾಣ
    ಬದಿಯಡ್ಕ: ಕೇರಳದ ಊಟಿ ಎಂದೇ ಪ್ರಸಿದ್ಧಿ  ಪಡೆದಿರುವ ರಾಣಿಪುರ ಅರಣ್ಯದಲ್ಲಿ  ಅರಣ್ಯ ಇಲಾಖೆಯು ಕಾಡು ಮೃಗಗಳಿಗೆ ಕುಡಿಯುವ ನೀರಿನ ವ್ಯವಸ್ಥೆ  ಮಾಡಿದೆ. ಪ್ರಾಜೆಕ್ಟ್  ಎಲಿಫೆಂಟ್ ಯೋಜನೆಯಡಿ 50 ಸಾವಿರ ರೂ. ಅನುದಾನ ವಿನಿಯೋಗಿಸಿ ಅರಣ್ಯದೊಳಗೆ ಕೆರೆ ನಿಮರ್ಿಸಿ ಕಾಡುಮೃಗಗಳಿಗೆ  ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲಾಗಿದೆ. 
   ಕಡು ಬೇಸಿಗೆಯಲ್ಲಿ  ನೀರಿಗಾಗಿ ಪರಿತಪಿಸುತ್ತಿರುವ ವನ್ಯಜೀವಿಗಳ ದಾಹ ತಣಿಸಲು ಈ ವ್ಯವಸ್ಥೆ  ಮಾಡಲಾಗಿದೆ. ಸಹಜ ಜಲ ಸಂಪನ್ಮೂಲ ಇರುವ ಭಾಗದಲ್ಲಿ  12.50 ಮೀಟರ್ ಉದ್ದ  8 ಮೀಟರ್ ಅಗಲದಲ್ಲಿ  ನಿಮರ್ಿಸಿದ ಕೆರೆಯು ಒಂದು ಮೀಟರ್ ಆಳವಿದೆ. ಕಾಡಾನೆ ಮೊದಲಾದ ಮೃಗಗಳು ಕೆರೆಗಿಳಿದು ನೀರು ಕುಡಿಯಬಹುದಾದ ಸೌಕರ್ಯ ಕಲ್ಪಿಸಲಾಗಿದೆ. ಅರಣ್ಯ ಇಲಾಖೆಯು ನೇರವಾಗಿ ಮುತುವಜರ್ಿವಹಿಸಿ ಈ ಕೆರೆಯನ್ನು  ನಿಮರ್ಿಸಿದೆ.
ಕಳೆದ ವರ್ಷ ಗ್ರೀನ್ ಇಂಡಿಯಾ ಮಿಶನ್ (ಜಿಂ)ನ ಅಂಗವಾಗಿ ರಾಣಿಪುರ ಅರಣ್ಯ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ನಿಮರ್ಿಸಲಾದ ಕೆರೆಯಿಂದ ಕಾಡುಮೃಗಗಳು ಯಥೇಚ್ಛವಾಗಿ ನೀರು ಕುಡಿಯುತ್ತಿರುವುದಾಗಿ ಅರಣ್ಯದೊಳಗೆ ಸ್ಥಾಪಿಸಿದ್ದ  ಕ್ಯಾಮರಾದಿಂದ ವ್ಯಕ್ತವಾಗಿತ್ತು.
   ಇದರಿಂದ ಪ್ರೇರಿತಗೊಂಡು ಅರಣ್ಯದ ಇನ್ನೊಂದು ಭಾಗದಲ್ಲಿ  ಪ್ರಾಜೆಕ್ಟ್  ಎಲಿಫೆಂಟ್ ಯೋಜನೆಯಡಿ ನೂತನ ಕೆರೆ ನಿಮರ್ಿಸಲು ಅರಣ್ಯ ಇಲಾಖೆಯು ಯೋಜನೆ ರೂಪಿಸಿತ್ತು. ಬೇಸಿಗೆಯಲ್ಲಿ  ಅರಣ್ಯದೊಳಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸಿದಾಗ ಕಾಡಾನೆಗಳ ಸಹಿತ ಇತರ ಪ್ರಾಣಿಗಳು ನೀರು ಆಹಾರಗಳನ್ನರಸಿ ಜನವಾಸ ಪ್ರದೇಶಗಳಿಗಿಳಿಯಲು ಆರಂಭಿಸುತ್ತವೆ.  ಈ ಹಿನ್ನೆಲೆಯಲ್ಲಿ  ಕೆರೆ ನಿಮರ್ಿಸಿ ಕುಡಿಯುವ ನೀರಿನ ವ್ಯವಸ್ಥೆ  ಮಾಡಲು ಅರಣ್ಯ ಇಲಾಖೆಯು ತೀಮರ್ಾನಿಸಿ ಅದರಂತೆ ಕ್ರಮ ಕೈಗೊಂಡಿದೆ.
   ರಾಣಿಪುರಂ ಬಗ್ಗೆ:
   ಕೇರಳದ ಊಟಿ ಎನಿಸಿಕೊಂಡಿರುವ ರಾಣಿಪುರಂ ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡು ತಾಲೂಕಿನಲ್ಲಿರುವ ಹೆಮ್ಮೆಯ ಪ್ರವಾಸಿ ತಾಣ. ಸಮುದ್ರ ಮಟ್ಟಕ್ಕಿಂತ 750 ಮೀಟರ್ ಎತ್ತರದಲ್ಲಿರುವ ರಾಣಿಪುರಂ ಅತ್ಯಧಿಕ ಪ್ರಮಾಣದ ಆನೆಗಳನ್ನು ಹೊಂದಿದೆ. ಮಡತ್ತುಮಲ ಎಂದೇ ಈ ಹಿಂದೆ ಕರೆಸಿಕೊಳ್ಳುತ್ತಿದ್ದ ಈ ಪ್ರದೇಶ ಕನರ್ಾಟಕ-ಕೇರಳ ಗಡಿ ಭಾಗದಲ್ಲಿದೆ. ಶೋಲಾ ಕಾಡುಗಳಿಂದಾವೃತವಾದ ಈ ಪುಟ್ಟ ಪ್ರವಾಸಿ ತಾಣ ಚಾರಣಿಗರ ಸ್ವರ್ಗವೆಂದೇ ಕರೆಸಲ್ಪಡುತ್ತಿದೆ. ಕೊಡಗು ಅರಣ್ಯ ವಿಭಾಗದ ಭಾಗಮಂಡಲ ಅರಣ್ಯ ವ್ಯಾಪ್ತಿಗೆ ತಾಗಿಕೊಂಡಿರುವ ರಾಣಿಪುರಂ ನ ಅಭಿವೃದ್ದಿಗೆ ಕಳೆದ ಒಂದು ವರ್ಷಗಳಿಂದ ರಾಜ್ಯ ಪ್ರವಾಸೋದ್ಯಮ ಇಲಾಖೆ ಉತ್ಸುವಕವಾಗಿ ಹಲವು ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಸಮುದ್ರ ಮಟ್ಟಕ್ಕಿಂತ 1016 ಮೀಟರ್ ಎತ್ತರದಲ್ಲಿ ರಾಣಿಪುರಂನ ತುತ್ತತುದಿಯ ಕೋಡುಗಲ್ಲು ಆಕರ್ಷಣೀಯವಾಗಿದೆ. ಪನತ್ತಡಿ ಪೇಟೆಯ ಮೂಲಕ ಸಾಗಿ ತಲಪಬೇಕಾದ ಇಲ್ಲಿಗೆ ಮಡಿಕೇರಿ, ತಲಕಾವೇರಿ, ವಿರಾಜಪೇಟೆ, ಕಾಸರಗೋಡು ನಿಕಟ ಪ್ರದೇಶಗಳಾಗಿವೆ.
 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries