HEALTH TIPS

No title

           ಹಕ್ಕಿನ ಹೋರಾಟ ಧರಣಿ ಎರಡನೇ ದಿನ- ಸಂವಿಧಾನ ಬದ್ದ ಹಕ್ಕಿನ ಕಸಿತಕ್ಕೆ ಅವಕಾಶ ನೀಡಬಾರದು-ನ್ಯಾಯವಾದಿ ಕೆ.ಶ್ರೀಕಾಂತ್
   ಕಾಸರಗೋಡು: ರಾಜ್ಯಎಡರಂಗ ಸರಕಾರ ಭಾಷಾಅಲ್ಪಸಂಖ್ಯಾತರ ಹಕ್ಕು ಇಲ್ಲವಾಗಿಸುವಯತ್ನದ ಮೂಲಕ ಕನ್ನಡಿಗರ ಮೇಲೆ ಪ್ರಹಾರ ಮಾಡುತ್ತಿದೆ. ಯಾವುದೇಕಾರಣಕ್ಕೂ ಕನ್ನಡಿಗರ ಸಂವಿಧಾನಬದ್ಧ ಹಕ್ಕನ್ನು ಕಸಿಯಲು ಬಿಡುವುದಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ.ಕೆ.ಶ್ರೀಕಾಂತ್ ಹೇಳಿದರು.
  ಕೇರಳ ಸರಕಾರ ಜಾರಿಗೆ ತಂದಿರುವ ಒಂದನೇ ತರಗತಿಯಿಂದ ಹತ್ತನೇ ತರಗತಿಯ ವರೆಗೆ ಮಲಯಾಳ ಕಡ್ಡಾಯ ಕಲಿಕೆಯನ್ನು ಪ್ರತಿಭಟಿಸಿ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಆಯೋಜಿಸಿದ ಒಂದು ವಾರ ಧರಣಿ ಸತ್ಯಾಗ್ರಹದ ಎರಡನೇ ದಿನ ಗುರುವಾರ ಸತ್ಯಾಗ್ರಹವನ್ನು ಉದ್ದೇಶಿಸಿ ಅವರು ಮಾತನಾಡಿದರು.
  ಕನ್ನಡ ಕಾಸರಗೋಡಿನ ಉಸಿರು, ಇಲ್ಲಿನ ಬಹುಭಾಷೆಗಳಲ್ಲಿ ಕನ್ನಡಕ್ಕೆ ಅಗ್ರಸ್ಥಾನವಿದೆ, ಶೈಕ್ಷಣಿಕರಂಗದಲ್ಲಿಕನ್ನಡವನ್ನು ಇಲ್ಲವಾಗಿಸಿ ಮಗದೊಂದು ಭಾಷೆಯ ಪ್ರಭುತ್ವವನ್ನು ಸ್ಥಾಪಿಸುವುದು ಸರಿಯಲ್ಲ ಎಂದು ಅವರು ಹೇಳಿದರು.ಭಾಷಾ ಅಲ್ಪಸಂಖ್ಯಾತರ ಹಕ್ಕು ರಕ್ಷಣೆಗೆ ತಾನು ಸದಾ ಸಿದ್ಧ ಎಂದು ಅವರು ಹೇಳಿದರು.
  ಗುರುವಾರ ಮಧ್ಯಾಹ್ನ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಬದಿಯಡ್ಕ ಗ್ರಾ.ಪಂ ಅಧ್ಯಕ್ಷಕೆ. ಎನ್ ಕೃಷ್ಣ ಭಟ್, ಭಾಷಾ ಅಲ್ಪಸಂಖ್ಯಾತರ ಹಕ್ಕು ರಕ್ಷಣೆ ನಮ್ಮೆಲ್ಲರ ಹೊಣೆ, ಕನ್ನಡದ ಸನ್ಮನಸುಗಳು ಒಟ್ಟಾಗಿ ಸಂವಿಧಾನಬದ್ಧ ಹಕ್ಕಿಗೆ ನ್ಯಾಯಯುತ ಹೋರಾಟದ ಮೂಲಕ ಮಲಯಾಳಂ ಭಾಷಾ ಹೇರಿಕೆಯಿಂದ ಮುಕ್ತಿ ಪಡೆಯಬೇಕಿದೆ ಎಂದರು. ಮಲಯಾಳಂ ಮಸೂದೆ ಹೇರಿಕೆಯ ಸಂದರ್ಭ ಜಿಲ್ಲೆಯ ಸಹಸ್ರ ಕನ್ನಡಿಗರು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕುವ ಮೂಲಕ ಪ್ರಬಲ ಸಂದೇಶ ರವಾನೆಯಾಗಿತ್ತು, ಪ್ರಸ್ತುತ ಒಂದನೇ ತರಗತಿಯಿಂದ ಹತ್ತನೇ ತರಗತಿ ತನಕ ಮಲಯಾಳಂ ಭಾಷಾ ಕಲಿಕೆಯ ವಿರುದ್ಧ ತನ್ನ ಅಸಮ್ಮತಿ ಇದೆ ಎಂದು ತಿಳಿಸಿದರು. ಕನ್ನಡ ವಿದ್ಯಾಥರ್ಿ ಮೇಲೆ ವಿನಾ ಕಾರಣ ಅನ್ಯ ಭಾಷೆಯನ್ನು ಹೇರುವುದು ಅಸಮಂಜಸ ಎಂದರು.
   ಕಾಸರಗೋಡಿನಲ್ಲಿ ಕನ್ನಡಿಗರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಕನ್ನಡವನ್ನು ಹತ್ತಿಕ್ಕುವ ಮತ್ತು ಸಂವಿಧಾನಬದ್ಧವಾಗಿ ಕಲ್ಪಿಸಿರುವ ಎಲ್ಲಾ ಸವಲತ್ತುಗಳನ್ನು ಹಕ್ಕುಗಳನ್ನು ಕಸಿದುಕೊಳ್ಳಲು ಹಿಂಬಾಗಿಲ ಕುತಂತ್ರ ನಡೆಯುತ್ತಲೇ ಇದೆ. ಇದರ ವಿರುದ್ಧ ದಶಕಗಳಿಂದ ಕಾನೂನು ಮತ್ತು ಇತರ ಹೋರಾಟ ನಡೆಯುತ್ತಿದೆ. ಸಂವಿಧಾನಬದ್ಧ ಹಕ್ಕುಗಳನ್ನು ಸಂರಕ್ಷಿಸಿಕೊಳ್ಳಲು ದಿನಾ ಹೋರಾಟ ನಡೆಸಬೇಕಾದ ಅನಿವಾರ್ಯತೆ ಬಂದಿರುವುದು ದೌಭರ್ಾಗ್ಯ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಅದಕ್ಕಾಗಿ ರಾಜಕೀಯ ಒತ್ತಡ ಅನಿವಾರ್ಯವಾಗಿದೆ ಎಂದು ಅವರು ಹೇಳಿದರು. ಕಾಸರಗೋಡಿನ ಕನ್ನಡದ ಮಕ್ಕಳು ಮಲಯಾಳ ಭಾಷೆಯನ್ನು ಹೆಚ್ಚುವರಿಯಾಗಿ ಕಲಿಯಬೇಕು. ಆದರೆ ಅದೇ ವೇಳೆ ವಿದೇಶದಲ್ಲಿ ಕಲಿತು ಇಲ್ಲಿಗೆ ಬಂದ ಮಕ್ಕಳು ಇಲ್ಲಿ ಮಲಯಾಳ ಕಲಿಯಬೇಕಾಗಿಲ್ಲ ಎಂಬಂತಹ ಆದೇಶವಿರುವುದು ಸರಕಾರದ ದ್ವಂದ್ವ ನೀತಿಗೆ ಸ್ಪಷ್ಟ ಉದಾಹರಣೆಯಾಗಿದೆ ಎಂದರು.
   ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಂಡರೆ ಮಾತ್ರವೇ ನಮ್ಮತನವನ್ನು ಉಳಿಸಿಕೊಳ್ಳಲು ಸಾಧ್ಯ. ಗುಲಾಮ ಗಿರಿಯನ್ನು ಒಪ್ಪಿಕೊಳ್ಳಲು ಕನ್ನಡಿಗರು ಸಿದ್ಧರಿಲ್ಲ ಎಂದು ಇದೇ ವೇಳೆ ಅವರು ಸರಕಾರಕ್ಕೆ ಮುನ್ನೆಚ್ಚರಿಕೆಯನ್ನು  ನೀಡಿದರು. ರಾಜ್ಯಪಾಲರು ಮತ್ತು ರಾಷ್ಟ್ರಪತಿಯ ವರೆಗೆ ಹೋಗಲು ಕನ್ನಡಿಗರು ಸಿದ್ಧರಾಗಬೇಕೆಂದರು. ಮೊಸಳೆ ಕಣ್ಣೀರು ಸುರಿಸುವವರ ಬಗ್ಗೆ ಸದಾ ಜಾಗೃತರಾಗಿರಬೇಕೆಂದು ಹೇಳಿದ ಅವರು ಕನ್ನಡಿಗರು ಭಿಕ್ಷೆ ಬೇಡುತ್ತಿಲ್ಲ. ಸಂವಿಧಾನಬದ್ಧವಾಗಿ ನೀಡಿರುವ ಹಕ್ಕುಗಳನ್ನು ಮತ್ತು ಸವಲತ್ತುಗಳನ್ನು ಮಾತ್ರವೇ ಕೇಳುತ್ತಿದ್ದೇವೆ. ಈ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ಇನ್ನಷ್ಟು ತೀವ್ರವಾದ ಹೋರಾಟಕ್ಕೆ ಮುನ್ನುಗ್ಗುವುದು ಖಂಡಿತ ಎಂದರು. ಹೋರಾಟದ ಕಿಚ್ಚನ್ನು ಇನ್ನಷ್ಟು ತೀವ್ರಗೊಳಿಸಬೇಕೆಂದ ಅವರು ಇದು ಅಳಿವು ಉಳಿವಿನ ಪ್ರಶ್ನೆಯಾಗಿದೆ. ನಮ್ಮ ಬೇಡಿಕೆ ಈಡೇರುವ ತನಕ ಹೋರಾಟ ನಡೆಯುವುದರಲ್ಲಿ ಸಂಶಯವಿಲ್ಲ ಎಂದರು. ಈಗ ಕಾನೂನು ರೂಪದ ಲಿಖಿತ ಆಜ್ಞೆ ಬರದಿದ್ದರೂ ಕಾಸರಗೋಡು ಡಿ.ಡಿ. ಬೆದರಿಕೆ ಮತ್ತು ಕುತಂತ್ರದಿಂದ ಮಲಯಾಳ ಹೇರುವ ಪ್ರಯತ್ನ ಮಾಡುತ್ತಿದ್ದಾರೆ. ಈ ಕಾರಣದಿಂದ ಡಿ.ಡಿ. ವಿರುದ್ಧವೂ ಹೋರಾಟ ಅನಿವಾರ್ಯವಾಗಲಿದೆ ಎಂದರು.
  ಧರಣಿಯನ್ನು ಉದ್ದೇಶಿಸಿ ನ್ಯಾಯವಾದಿ ಸದಾನಂದ ರೈ, ಮಧೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ದಿವಾಕರ ಆಚಾರ್ಯ, ಕೇರಳ ರಾಜ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧಿಕೃತ ವಕ್ತಾರ ವಿಶಾಲಾಕ್ಷ ಪುತ್ರಕಳ, ಕಾಸರಗೋಡು ನಗರಸಭಾ ಸದಸ್ಯರಾದ ಸವಿತಾ ಟೀಚರ್, ಶ್ರೀಲತಾ, ಪೈವಳಿಕೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಚ್ಯುತ ಚೇವಾರ್, ಪ್ರೊ.ಶ್ರೀಕೃಷ್ಣ ಭಟ್, ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ರಂಗಚಿನ್ನಾರಿ ನಿದರ್ೇಶಕ ಕಾಸರಗೋಡು ಚಿನ್ನಾ, ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಬಿಜೆಪಿ ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ನಾರಾಯಣ ಭಟ್, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಕನ್ನಡ ವಿದ್ಯಾಥರ್ಿಗಳ ಸಂಘಟನೆ ಗಿಳಿವಿಂಡಿನ ಕಾತರ್ಿಕ್, ಕವಿ ಹರೀಶ್ ಪೆರ್ಲ, ಅಧ್ಯಾಪಕ ಅಬ್ದುಲ್ ರಹಿಮಾನ್  ಮೊದಲಾದವರು ಮಾತನಾಡಿದರು.
    ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಮಾಜಿ ಅಧ್ಯಕ್ಷ ಎಂ.ವಿ.ಮಹಾಲಿಂಗೇಶ್ವರ ಭಟ್ ಅಧ್ಯಕ್ಷತೆ ವಹಿಸಿದರು. ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದಶರ್ಿ ಕೆ.ಭಾಸ್ಕರ ಪ್ರಾಸ್ತಾವಿಕ ನುಡಿದು ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಜಾಗೃತಿ ಸಮಿತಿ ಅಧ್ಯಕ್ಷ ಸತ್ಯನಾರಾಯಣ ಕಾಸರಗೋಡು ಸ್ವಾಗತಿಸಿದರು.
    ಕಾಸರಗೋಡು ನಗರಸಭಾ ಸದಸ್ಯರಾದ ಸಂಧ್ಯಾ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಸತ್ಯನಾರಾಯಣ ಕೆ, ಸೀತಾರಾಮ ಮಾಸ್ಟರ್, ಸತ್ಯನಾರಾಯಣ ಹೊನ್ನೆಮೂಲೆ, ಪದ್ಮರಾಜ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಸಂಜೆ ದಿನದ ಸಮರೋಪದಲ್ಲಿ ವಾಮನ್ ರಾವ್ ಬೇಕಲ್ ವಂದಿಸಿದರು.

    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries