ಕಾಸರಗೋಡಿನಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ
ಕಟ್ಟಡಗಳ ಬೆಲೆ ನಿಗದಿ ಅಧಿಕಾರ ವಿಭಜಿಸಿ ಆದೇಶ
ಕಾಸರಗೋಡು: ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಗೆ ಭೂಮಿ ಸ್ವಾಧೀನಪಡಿಸುವ ಪ್ರಕ್ರಿಯೆಯನ್ನು ಶೀಘ್ರಗತಿಯಲ್ಲಿ ನಡೆಸಲು ಕೇರಳ ಸರಕಾರವು ನೂತನ ಆದೇಶ ಹೊರಡಿಸಿದೆ.
ಸ್ವಾಧೀನಪಡಿಸುವ ಭೂಮಿಯಲ್ಲಿರುವ ಕಟ್ಟಡಗಳ ಬೆಲೆ ನಿರ್ಣಯಿಸಲಿರುವ ಅಧಿಕಾರವನ್ನು ರಾಷ್ಟ್ರೀಯ ಹೆದ್ದಾರಿ ಸಹಾಯಕ ಎಕ್ಸಿಕ್ಯೂಟಿವ್ ಎಂಜಿನಿಯರ್ಗೆ ನೀಡಲಾಗಿದೆ. ವ್ಯಾಪ್ತಿಯಿಲ್ಲದ ಕಟ್ಟಡಗಳ ಬೆಲೆ ನಿರ್ಣಯಿಸಲು ಜಿಲ್ಲೆಗಳಲ್ಲಿ ಸಬ್ಡಿವಿಶನ್ಗಳ ಹೊಣೆಗಾರಿಕೆಯಿರುವ ರಾಷ್ಟ್ರೀಯ ಹೆದ್ದಾರಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ಗಳಿಗೆ ಅಧಿಕಾರ ಕೊಡಲಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಒಂದು ಸಬ್ಡಿವಿಶನ್, ಕಣ್ಣೂರು ಜಿಲ್ಲೆಯಲ್ಲಿ ಎರಡು ಸಬ್ಡಿವಿಶನ್ಗಳಿವೆ. ಕಡತಗಳು ಕಲ್ಲಿಕೋಟೆ, ತಿರುವನಂತಪುರ ಕಚೇರಿಗಳಿಗೆ ಹೋಗಿ ಬರುವುದರ ಕಾಲವಿಳಂಬವನ್ನು ಇಲ್ಲವಾಗಿಸಲು, ನಷ್ಟಪರಿಹಾರ ಶೀಘ್ರ ನೀಡಲು ನೂತನ ಆದೇಶ ಪ್ರಯೋಜನಕಾರಿಯಾಗಲಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯನ್ನು ಕೂಡಲೇ ಆರಂಭಿಸಲಿರುವ ಕೇರಳ ಸರಕಾರದ ತೀಮರ್ಾನದ ಅಂಗವಾಗಿ ಹೊಸ ಕ್ರಮ ಕೈಗೊಳ್ಳಲಾಗಿದೆ.
ಸ್ಥಳ ಸ್ವಾಧೀನಪಡಿಸುವಾಗ ಮನೆಗಳಿಗೆ, ಇತರ ಕಟ್ಟಡಗಳಿಗೆ ಬೆಲೆ ನಿರ್ಣಯಿಸಿ ನಷ್ಟಪರಿಹಾರ ನೀಡಲಿರುವ ಹೊಣೆಗಾರಿಕೆಯು ರಾಷ್ಟ್ರೀಯ ಹೆದ್ದಾರಿ ವಿಭಾಗದ ಉನ್ನತಾಧಿಕಾರಿಗಳದ್ದಾಗಿತ್ತು. ಒಂದು ಕೋಟಿ ರೂ. ಗಿಂತ ಹೆಚ್ಚಿನವುಗಳ ಅಧಿಕಾರ ತಿರುವನಂತಪುರ ಚೀಫ್ ಎಂಜಿನಿಯರ್ಗಳಿಗೆ, ಒಂದು ಕೋಟಿ ರೂ. ವರೆಗಿನ ಅಧಿಕಾರ ಕಲ್ಲಿಕೋಟೆಯ ಸೂಪರಿಂಟೆಂಡೆಂಟ್ ಎಂಜಿನಿಯರ್ಗೆ, 25 ಲಕ್ಷ ರೂ. ತನಕದ್ದು ಎಕ್ಸಿಕ್ಯೂಟಿವ್ ಎಂಜಿನಿಯರ್ಗೆ, 6 ಲಕ್ಷ ರೂ. ವರೆಗಿನದ್ದು ಜಿಲ್ಲ್ಲೆಗಳಲ್ಲಿರುವ ಸಹಾಯಕ ಎಕ್ಸಿಕ್ಯೂಟಿವ್ ಎಂಜಿನಿಯರ್ಗಳಿಗೆ, 1 ಲಕ್ಷ ರೂ. ತನಕದ್ದು ಸಹಾಯಕ ಎಂಜಿನಿಯರ್ಗಳಿಗಾಗಿತ್ತು.
ಆದರೆ ಇದರಿಂದ ಕಾಲವಿಳಂಬವಾಗುತ್ತಿತ್ತು. ಇದನ್ನು ಪರಿಹರಿಸಲು ಭೂಮಿ ಸ್ವಾಧೀನಪಡಿಸುವ ಜಿಲ್ಲೆಗಳಲ್ಲೇ ಬೆಲೆ ನಿರ್ಣಯಿಸಿ ನಷ್ಟಪರಿಹಾರ ಒದಗಿಸಲು ನಿರ್ಧರಿಸಲಾಗಿದೆ. ತಲಪಾಡಿ - ಕಾಲಿಕ್ಕಡವ್ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗಾಗಿ 2118 ಕಟ್ಟಡಗಳನ್ನು ಪೂರ್ಣವಾಗಿ ಹಾಗೂ ಭಾಗಶ:ವಾಗಿ ತೆರವುಗೊಳಿಸಬೇಕಿದೆ. 2090 ಕಟ್ಟಡಗಳ ಅಳತೆ ತೆಗೆಯುವ ಪ್ರಕ್ರಿಯೆ ಪೂರ್ಣಗೊಂಡಿದೆ. 1874 ಕಟ್ಟಡಗಳ ಬೆಲೆ ನಿರ್ಣಯ ಪೂತರ್ಿಯಾಗಿದೆ. ಉಳಿದ 22 ಕಟ್ಟಡಗಳ ಕಡತಗಳು ಮುಖ್ಯ ಎಂಜಿನಿಯರ್ ಅವರ ಕಚೇರಿಯಲ್ಲಿ, 11 ಸೂಪರಿಂಟೆಂಡೆಂಟ್ ಎಂಜಿನಿಯರ್ಗಳ ಕಚೇರಿಯಲ್ಲಿವೆ.
ತಲಪಾಡಿಯಿಂದ ಕಾಲಿಕ್ಕಡವ್ ವರೆಗಿನ 86.800 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿಯನ್ನು ತಲಪಾಡಿ - ಚೆಂಗಳ, ಚೆಂಗಳ - ಕಾಲಿಕ್ಕಡವ್, ನೀಲೇಶ್ವರ - ಪಳ್ಳಿಕೆರೆ ರೈಲ್ವೇ ಮೇಲ್ಸೇತುವೆ ಹೀಗೆ ಮೂರು ಪ್ಯಾಕೇಜ್ಗಳಲ್ಲಾಗಿ ಅಭಿವೃದ್ಧಿಗೊಳಿಸಲು ನಿರ್ಧರಿಸಲಾಗಿದೆ. 90.22 ಎಕರೆ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಂದ ಸ್ವಾಧೀನಪಡಿಸಲಾಗಿದೆ. ಉಳಿದ ಭೂಮಿಯ ಸವರ್ೇ ನಡೆಯುತ್ತಿದೆ. ಇದರಲ್ಲಿ 3 ಹೆಕ್ಟೇರ್ ಕಾಸರಗೋಡು ತಾಲೂಕಿನಲ್ಲಿ , 7 ಹೆಕ್ಟೇರ್ ಹೊಸದುರ್ಗ ತಾಲೂಕಿನಲ್ಲಿದೆ. ಭೂಮಾಲಕರಿಗೆ ನಷ್ಟಪರಿಹಾರವಾಗಿ 68,91,19,928ರೂ. ಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಂಜೂರು ಮಾಡಿದೆ.
ಭೂಮಿಯ ದಾಖಲೆಪತ್ರ ಬೇಕು : 114 ಭೂಮಾಲಕರಿಗೆ 23,17,80,866ರೂ. ಹಸ್ತಾಂತರಿಸಲಾಗಿದೆ. ಉಳಿದ ಮೊತ್ತವನ್ನು ಭೂ ಮಾಲಕರು ದಾಖಲೆಪತ್ರಗಳನ್ನು ನೀಡಿದಲ್ಲಿ ಮಾತ್ರವೇ ವಿತರಿಸಲಾಗುವುದು. ಅಂದರೆ ಭೂಮಿಯ ಸಮರ್ಪಕ ದಾಖಲೆಪತ್ರಗಳನ್ನು ಒದಗಿಸಬೇಕು. ಕಾಸರಗೋಡು, ಉಪ್ಪಳ, ಆರಿಕ್ಕಾಡಿ, ಕೋಡಿಬೈಲು ಗ್ರಾಮಗಳ ಭೂಮಾಲಕರಿಗಾಗಿ 47,95,51,677ರೂ. ನಷ್ಟಪರಿಹಾರ ನೀಡಲಿರುವ ಅಜರ್ಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡಲಾಗಿದೆ. ಶೀಘ್ರವೇ ಇದು ಇತ್ಯರ್ಥವಾಗಲಿದೆ ಎಂದು ಕಾಸರಗೋಡು ಭೂಸ್ವಾಧೀನ ವಿಭಾಗದ ಸಹಾಯಕ ಜಿಲ್ಲಾಧಿಕಾರಿ ಕೆ.ಶಶಿಧರ ಶೆಟ್ಟಿ ತಿಳಿಸಿದ್ದಾರೆ.