HEALTH TIPS

No title

              ಮಲಯಾಳ ಕಲಿಕೆ ಕಡ್ಡಾಯ ಹಿಂಪಡೆಯುವ ತನಕ ನಿಲ್ಲದು ಹೋರಾಟ : ಕೊಂಡೆವೂರು ಶ್ರೀ
    ಕಾಸರಗೋಡು: ಅಚ್ಚಗನ್ನಡ ಪ್ರದೇಶವಾದ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಮೇಲೆ ಮಲಯಾಳ ಭಾಷೆ ಹೇರಿಕೆಯ ಮೂಲಕ ಕನ್ನಡ ಭಾಷೆ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಹತ್ತಿಕ್ಕಲು ಪ್ರಯತ್ನಿಸುವ ಕೇರಳ ಸರಕಾರದ ಧೋರಣೆಯ ವಿರುದ್ಧ ಕಾಸರಗೋಡಿನ ಕನ್ನಡಿಗರು ಒಗ್ಗೂಡಿ ನಡೆಸಿದ ಹೋರಾಟ ಇಲ್ಲಿಗೆ ಕೊನೆಯಾಗುವುದಿಲ್ಲ. ಕಾಸರಗೋಡು ಪ್ರದೇಶದಲ್ಲಿ ಮಲಯಾಳ ಹೇರಿಕೆಯನ್ನು ಹಿಂಪಡೆಯುವ ತನಕ ಹೋರಾಟ ನಿಲ್ಲದು ಎಂದು ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ಹೇಳಿದರು.
   ಕೇರಳ ಸರಕಾರ ಜಾರಿಗೆ ತಂದಿರುವ ಒಂದನೇ ತರಗತಿಯಿಂದ ಹತ್ತನೇ ತರಗತಿಯ ವರೆಗೆ ಮಲಯಾಳ ಕಡ್ಡಾಯ ಕಲಿಕೆಯನ್ನು ಪ್ರತಿಭಟಿಸಿ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಆಯೋಜಿಸಿದ ಒಂದು ವಾರ ಧರಣಿ ಸತ್ಯಾಗ್ರಹದ ಮೂರನೇ ದಿನವಾದ ಶುಕ್ರವಾರ ಭೇಟಿ ನೀಡಿ ಬೆಂಬಲಸೂಚಿಸಿ ಆಶೀರ್ವದಿಸುತ್ತ ಸ್ವಾಮೀಜಿಯವರು ಮಾತನಾಡಿದರು.
   ಕನ್ನಡ ಭಾಷೆ, ಸಂಸ್ಕೃತಿಯ ರಕ್ಷಣೆಗೆ ಇನ್ನೂ ಹೋರಾಟ ಅನಿವಾರ್ಯವಾಗಿದೆ. ನಾವು ಮಲಯಾಳ ಭಾಷೆ ದ್ವೇಷಿಗಳಲ್ಲ. ಕಾಸರಗೋಡಿನ ಕನ್ನಡಿಗರಿಗೆ ಸಂವಿಧಾನಬದ್ಧವಾಗಿ ನೀಡಲಾದ ಹಕ್ಕು, ಸವಲತ್ತುಗಳನ್ನು ಕೇಳುತ್ತಿದ್ದೇವೆ. ನಮಗೆ ಯಾರ ಭಿಕ್ಷೆಯೂ ಬೇಡ. ಆದರೆ ನಮ್ಮ ಸವಲತ್ತು ಪಡೆದೇ ತೀರುತ್ತೇವೆ. ಕಾನೂನಾತ್ಮಕ ಹೋರಾಟದ ಮೂಲಕ ನಮ್ಮ ಹಕ್ಕು ಸಂರಕ್ಷಿಸಿಕೊಳ್ಳಬೇಕು. ಅದಕ್ಕಾಗಿ ಕನ್ನಡಿಗರೆಲ್ಲ ಏಕ ಸೂತ್ರದಡಿಯಲ್ಲಿ ಕೆಲಸ ಮಾಡಬೇಕಾಗಿದೆ. ಕನ್ನಡಿಗರು ಇನ್ನಷ್ಟು ಶಕ್ತಿಶಾಲಿಯಾಗಿ ಕನ್ನಡದ ರಕ್ಷಣೆಗಾಗಿ ಕೇರಳ ಸರಕಾರದ ಕನ್ನಡ ವಿರೋಧಿ ಎಲ್ಲಾ ನಿರ್ಣಗಳನ್ನು ವಿರೋಧಿಸುತ್ತಿದ್ದೇವೆ ಎಂದರು.
    ಕಾಸರಗೋಡು ಕನ್ನಡಿಗರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಕನರ್ಾಟಕವನ್ನು ಆಶ್ರಯಿಸಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ. ಈ ಹಿನ್ನೆಲೆಯಲ್ಲಿ ಕಾಸರಗೋಡಿನ ಎಲ್ಲಾ ಕಚೇರಿಗಳು ಕನ್ನಡ ಮಯವಾಗಬೇಕು. ಅದಕ್ಕಾಗಿ ಕನ್ನಡಿಗರು ಕೇರಳದ ಪಿಎಸ್ಸಿ ಪರೀಕ್ಷೆ ಬರೆದು ಸರಕಾರಿ ಉದ್ಯೋಗಕ್ಕೆ ಸೇರಿಕೊಳ್ಳುವಂತಾಗಬೇಕು. ಸರಕಾರಿ ಕಚೇರಿಗಳಲ್ಲಿ ಕನ್ನಡಿಗರನ್ನು ನೇಮಿಸಬೇಕಾದುದು ಸಂವಿಧಾನಬದ್ಧ ಹಕ್ಕು ಎಂದ ಸ್ವಾಮೀಜಿಯವರು ತಿರುವನಂತಪುರದ ಸೆಕ್ರೆಟರಿಯೇಟ್ ಮುಂದೆ ಕೂಡಾ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಈ ನಿಟ್ಟಿನಲ್ಲಿ ಅಲ್ಲೂ ಹೋರಾಟ ನಡೆಸಲು ಹಿಂದೆ ಸರಿಯುವವರಲ್ಲ ಎಂದರು. ಸಂವಿಧಾನಬದ್ಧ ನ್ಯಾಯ ಸಿಗುವ ತನಕ ಹೋರಾಟ ನಡೆಯಬೇಕಾಗಿದೆ ಎಂದರು.
   ಜನಪ್ರತಿನಿಧಿಗಳು ಧ್ವನಿಯೆತ್ತಬೇಕು : ಕಾಸರಗೋಡಿನ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ನಮ್ಮ ಜನಪ್ರತಿನಿಧಿಗಳು ಶಾಸನ ಸಭೆಯಲ್ಲಿ ಧ್ವಿನಿಯೆತ್ತಬೇಕೆಂದು ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿದ ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪವಾಣಿ ಆರ್.ಭಟ್ ಅವರು ಹೇಳಿದರು.
    ಕನ್ನಡಿಗರ ಬೇಡಿಕೆ ಈಡೇರುವ ತನಕ ವಿಶ್ರಾಂತಿ ಎಂಬುದಿಲ್ಲ ಎಂದ ಅವರು ಅಗತ್ಯ ಬಿದ್ದಲ್ಲಿ ತಿರುವನಂತಪುರದ ಸೆಕ್ರೆಟರಿಯೇಟ್ ಮುಂದೆ ಕೂಡ ಸತ್ಯಾಗ್ರಹಕ್ಕೆ ಕನ್ನಡಿಗರು ಸಿದ್ಧರಾಗಬೇಕೆಂದರು. ಪ್ರತಿಯೊಂದು ಮನೆಯಲ್ಲೂ ಹೋರಾಟದ ಕಿಚ್ಚು ಎದ್ದೇಳಬೇಕು. ಹೋರಾಟದ ಮೂಲಕ ಸರಕಾರಕ್ಕೆ ಸ್ಪಷ್ಟ ಸಂದೇಶವನ್ನು ಕಳುಹಿಸಬೇಕು. ಹೋರಾಟ ತೀಕ್ಷ್ಣತೆ ಪಡೆಯಬೇಕೆಂದರು. ಸಂವಿಧಾನಬದ್ಧ ಹಕ್ಕುಗಳನ್ನು ಕಸಿದುಕೊಳ್ಳುತ್ತಾ ಕನ್ನಡಿಗರ ಶೋಷಣೆ ನಡೆಯುತ್ತಿದೆ. ದಮನಿಸುವ ಯತ್ನವೂ ನಡೆಯುತ್ತಿದೆ. ಇದು ಹೀಗೆ ಮುಂದುವರಿದರೆ ನಮ್ಮ ಎಲ್ಲಾ ಹಕ್ಕುಗಳನ್ನು ಕಳೆದುಕೊಳ್ಳುವ ದಿನ ದೂರವಿಲ್ಲ ಎಂದರು.
  ಧರಣಿ ಸತ್ಯಾಗ್ರಹದಲ್ಲಿ ಕನ್ನಡ ಹೋರಾಟ ಸಮಿತಿ ಸಂಚಾಲಕ ತಾರಾನಾಥ ಮಧೂರು ಅಧ್ಯಕ್ಷತೆ ವಹಿಸಿದರು.
ಕ್ಯಾಂಪ್ಕೋ ನಿದರ್ೇಶಕ ಸತೀಶ್ಚಂದ್ರ ಭಂಡಾರಿ ಕೋಳಾರು, ಎಣ್ಮಕಜೆ ಗ್ರಾಮ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷೆ ಆಯಿಷ ಎ.ಎ ಪೆರ್ಲ, ಪಾತರ್ಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ಅಧ್ಯಕ್ಷ ಜಯರಾಮ ಮಂಜತ್ತಾಯ ಎಡನೀರು, ಕೇಶವ ಪ್ರಸಾದ್ ಬದಿಯಡ್ಕ, ವಿಶ್ವನಾಥ ರಾವ್, ಡಾ.ರಾಧಾಕೃಷ್ಣ ಬೆಳ್ಳೂರು, ಪ್ರೊ.ಎ.ಶ್ರೀನಾಥ್ ಮೊದಲಾದವರು ಮಾತನಾಡಿದರು. ಧರಣಿ ಸತ್ಯಾಗ್ರಹದಲ್ಲಿ ಬಾಲ ಮಧುರಕಾನನ, ಶ್ರದ್ಧಾ ನಾಯರ್ಪಳ್ಳ, ಶಿವರಾಮ ಭಟ್, ಪದ್ಮಾವತಿ, ಪ್ರದೀಪ್ ಕುಮಾರ್ ಬೇಳ, ಪದ್ಮರಾಜ್ ಮೊದಲಾದವರು ಉಪಸ್ಥಿತರಿದ್ದರು.
    ಸತೀಶ್ ಮಾಸ್ಟರ್ ಕೂಡ್ಲು ಸ್ವಾಗತಿಸಿ, ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದಶರ್ಿ ಕೆ.ಭಾಸ್ಕರ ಕಾರ್ಯಕ್ರಮ ನಿರೂಪಿಸಿದರು. ಎಂ.ವಿ.ಮಹಾಲಿಂಗೇಶ್ವರ ಭಟ್ ಪ್ರಾಸ್ತಾವಿಕ ಮಾತನಾಡಿದರು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries